ಮನೆ ಮನೆಗೆ ಮದ್ಯವನ್ನು ತಲುಪಿಸಲು ಸರ್ಕಾರ ಚಿಂತನೆ: ಎಂದಿನಿಂದ ಆರಂಭವಾಗಬಹುದು ಈ ಕಾರ್ಯ

Soma shekhar
ಕೊರೋನಾ ವೈರಸ್ ಇಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದಂತಹ ಸಂದರ್ಭದಲ್ಲಿ ಎಲ್ಲಾ ವ್ಯವಹಾರಗಳು ಹಾಗೂ ಉದ್ದಿಮೆಗಳು ಹಾಗೂ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಲಾಕ್ ಮಾಡಲಾಗಿತ್ತು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಈ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಬಹಳಷ್ಟು ನಷ್ಟವಾಯಿತು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ  ಅತೀ ಹೆಚ್ಚಿನ ಆದಾಯವನ್ನು ತರುವಂತಹ ಮದ್ಯದ ವ್ಯವಹಾರವನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಸ್ವಲ್ಪ ಮಟ್ಟಿಗಾದರೂ ಸರಿದೂಗಿಸಲು ಮದ್ಯಮಾರಾಟಕ್ಕೆ ಅನುಮತಿಯನ್ನು ನೀಡಲಾಯಿತು. ಇದರ ಜೊತೆಗೆ ಗುಂಪು ಗೂಡುವಿಕಯನ್ನು ನಿಯಂತ್ರಿಸಲು ಮನೆ ಮನೆಗೆ ಮದ್ಯವನ್ನು ತಲುಪಿಸುವಂತಹ ಕೆಲವನ್ನು ಸರ್ಕಾರ ಮಾಡಿತ್ತು. ಅದೇ ರೀತಿಯಾದ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುವಂತಹ ಚಿಂತನೆಯನ್ನು ನಡೆಸುತ್ತಿದೆ .


ಹೌದು ಭಾರತದಲ್ಲಿ ಲಾಕ್ ಡೌನ್ ನಡುವೆಯೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಬಗ್ಗೆ ಅನೇಕ ರಾಜ್ಯಗಳು ಚಿಂತನೆ ನಡೆಸಿ, ಜಾರಿಗೆ ತಂದಿದ್ದು ನೆನಪಿರಬಹುದು. ಈಗ ಹೋಮ್ ಡೆಲಿವರಿ ಮೂಲಕ ಮದ್ಯ ಪೂರೈಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕೇರಳ ಮಾದರಿಯಲ್ಲಿ ಆಪ್ ಅಧಾರಿತ ಆನ್ ಲೈನ್ ಮದ್ಯ ಪೂರೈಕೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಅಬಕಾರಿ ಇಲಾಖೆ ಮುಂದಾಗಿದೆ. ನಂತರ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗಿದೆ.


ಈ ಕುರಿತಂತೆ ಮದ್ಯ ದಾಸ್ತಾನುದಾರರ ಜೊತೆ ಅಬಕಾರಿ ಇಲಾಖೆ ಆಯುಕ್ತ ಎಂ ಲೋಕೇಶ್ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸರಿಯಾದರೆ ಆಗಸ್ಟ್ ತಿಂಗಳಿನಿಂದ ಆನ್ ಲೈನ್ ಮದ್ಯ ಪೂರೈಕೆ ಆರಂಭವಾಗುವ ಸಾಧ್ಯತೆಯಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ 6 ರಾಜ್ಯಗಳಲ್ಲಿ ಆನ್ ಲೈನ್ ಡೆಲಿವರಿ ವ್ಯವಸ್ಥೆ ಇತ್ತೀಚೆಗೆ ಜಾರಿಗೆ ಬಂದಿದೆ. ಮಾರ್ಚ್ ತಿಂಗಳಿನಿಂದ ಕೋವಿಡ್ 19 ಕಾರಣಕ್ಕೆ ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ ಗಳು ಬಂದ್ ಆಗಿವೆ. ಆನ್ ಲಾಕ್ 3.0ರ ಮಾರ್ಗಸೂಚಿಯಲ್ಲೂ ಆನ್ ಲೈನ್ ಮದ್ಯ ಪೂರೈಕೆ ಬಗ್ಗೆ ಸರ್ಕಾರ ಸೂಚಿಸಿದೆ ಎಂದು ಅಧಿಕಾರಿ ಲೋಕೇಶ್ ಹೇಳಿದರು.


ಆನ್ ಲೈನ್ ಮೂಲಕ ಮದ್ಯ ಪೂರೈಕೆ


ಪಂಜಾಬ್ ಸರ್ಕಾರ ಈಗಾಗಲೇ ಆನ್ ಲೈನ್ ಮೂಲಕ ಬುಕ್ ಮಾಡಿದ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶುರು ಮಾಡಿದೆ. ಇನ್ನು, ಕೆಲವು ರಾಜ್ಯಗಳಲ್ಲಿ ಇಷ್ಟರಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿವೆ ಎಂದು ಇಂಡಸ್ಟ್ರಿ ಲೈಸಿಂಗ್ ಬಾಡಿ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ(ISWAI)ದ ಚೇರ್ ಮನ್ ಅಮ್ರಿತ್ ಕಿರಣ್ ಸಿಂಗ್ ತಿಳಿಸಿದ್ದಾರೆ.


ವೈನ್ ಮರ್ಚಂಟ್ಸ್ ಅಸೋಸಿಯೇಷನ್


ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಕೊವಿಡ್ 19 ನಿಂದಾಗಿ ಭಾರಿ ನಷ್ಟ ಉಂಟಾಗಿದೆ, ಆನ್ ಲೈನ್ ಮದ್ಯ ಮಾರಾಟದಿಂದಾಗಿ ನೆರವು ಸಿಗಬಹುದು ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ. ಕುಡಿದು ವಾಹನ ಚಲಾಯಿಸಿ ಅಪಘಾತವಾಗುವುದನ್ನು ಈ ಮೂಲಕ ತಡೆಗಟ್ಟಬಹುದು. ಮದ್ಯ ದಂಗಡಿಗೆ ಬಂದು ಖರೀದಿ ಮಾಡುವವರ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಿದರು.

Find Out More:

Related Articles: