ಈ ವಿಷಯಕ್ಕಾಗಿ ವಿಶ್ವ ಸಂಸ್ಥೆ ಭಾರತ ಸರ್ಕಾರವನ್ನು ಆಗ್ರಹಿಸಿದೆ : ಅಷ್ಟಕ್ಕೂ ಆ ವಿಷಯ ಯಾವುದು ಗೊತ್ತಾ?

Soma shekhar

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾಯ್ದೆಯಾಗಿದ್ದ ಎಸ್ ಆರ್ ಸಿ ಹಾಗೂ ಸಿಎಎ ಕಾಯ್ದೆಯನ್ನು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದ್ದಂತೆ ಇದನ್ನು ವಿರೋಧಸಿ  ಇಡೀ ದೇಶದಾದ್ಯಂತ ಸಾಕಷ್ಟು ಹೋರಾಟಗಳು, ಪ್ರತಿಭಟನೆಗಳು ಸಾಕಷ್ಟು ಹೋರಾಟಾ ಅಧಿವೇಶನಗಳು ನಡೆದವು. ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ   ಸಾಕಷ್ಟು ಮುಖಂಡರನ್ನು  ಬಂದಿಸಲಾಗಿತ್ತು. ಆದರೆ ಈಗ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು   ಬಿಡುಗಡೆಗೊಳಿಸಬೇಕೆಂದು ವಿಶ್ವಸಂಸ್ಥೆಯು ಶುಕ್ರವಾರ ಭಾರತ ಸರಕಾರವನ್ನು ಆಗ್ರಹಿಸಿದೆ.

 

ಈ ಬಗ್ಗೆ ವಿಶ್ವಸಂಸ್ಥೆಯ ಪರಿಣತರ ತಂಡವೊಂದು ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಯಾವುದೇ ಸಮರ್ಪಕವಾದ ಪುರಾವೆ ಇಲ್ಲದೆ ವಿಚಾರಣಾ ಪೂರ್ವ ಬಂಧನದಲ್ಲಿರುವ ಮಾನವಹಕ್ಕುಗಳ ಹೋರಾಟಗಾರರನ್ನು ಭಾರತೀಯ ಅಧಿಕಾರಿಗಳು ಕೂಡಲೇ ಬಿಡುಗಡೆಗೊಳಿಸಬೇಕಾಗಿದೆ. ಅನೇಕ ಸಂದರ್ಭಗಳಲ್ಲಿ ಸಿಎಎನ ತಾರತಮ್ಯವಾದಿ ಧೋರಣೆಯನ್ನು ತಮ್ಮ ಭಾಷಣಗಳಲ್ಲಿ ಟೀಕಿಸಿದ್ದರೆಂಬ ಕ್ಷುಲ್ಲಕ ಕಾರಣಗಳಿಗಾಗಿ ಹಲವರನ್ನು ಬಂಧಿಸಲಾಗಿದೆ ಎಂದು ಆಪಾದಿಸಿದೆ.

 

ಮೀರಾನ್ ಹೈದರ್, ಗುಲ್ಫಿಶಾ ಫಾತಿಮಾ ಝರ್ಗಾರ್, ಆಸಿಫ್ ಇಕ್ಬಾಲ್ ತನ್‌ಹಾ, ದೇವಾಂಗನಾ ಕಾಲಿಟಾ, ನಟಾಶಾ ನರ್ವಾಲ್, ಖಾಲಿದ್ ಸೈಫಿ, ಶಿಫಾವುರ್ರಹ್ಮಾನ್, ಡಾ.ಕಫೀಲ್ ಖಾನ್, ಶರ್ಜೀಲ್ ಇಮಾಮ್ ಹಾಗೂ ಅಖಿಲ್ ಗೊಗೊಯ್ ಸೇರಿದಂತೆ 11 ಮಂದಿ ಬಂಧಿತ ಸಿಎಎ ವಿರೋಧಿ ಹೋರಾಟಗಾರರನ್ನು ಹೇಳಿಕೆಯಲ್ಲಿ ಹೆಸರಿಸಲಾಗಿದೆ. ಸಿಎಎ ವಿರೋಧಿ ಹೋರಾಟಗಾರರ ಬಂಧನದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಅದು ಹೇಳಿದೆ. ಅಲ್ಲದೆ ಭಯೋತ್ಪಾದನೆ ವಿರೋಧಿ ಮಸೂದೆ ಹಾಗೂ ರಾಷ್ಟ್ರೀಯ ಭದ್ರತಾ ಮಸೂದೆಗಳನ್ನು ಹಾಗೂ ಪೊಲೀಸರ ಕಾರ್ಯನಿರ್ವಹಣಾ ಅಧಿಕಾರಗಳನ್ನು ಬಳಸಿಕೊಂಡು ಪ್ರತಿಭಟನಕಾರರಿಗೆ ಜಾಮೀನು ದೊರೆಯದಂತೆ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಆರೋಪಿಸಿದ್ದಾರೆ.

 

ಸಿಎಎ ಹೋರಾಟಗಾರರ ಬಂಧನವು, ಸರಕಾರದ ನೀತಿಗಳನ್ನು ಟೀಕಿಸುವುದನ್ನು ಸಹಿಸಲಾಗುವುದಿಲ್ಲವೆಂಬ ನಿರ್ದಯವಾದ ಸಂದೇಶವನ್ನು ಭಾರತದ ನಾಗರಿಕ ಸಮಾಜಕ್ಕೆ ನೀಡುವ ಉದ್ದೇಶವನ್ನು ಹೊಂದಿತ್ತು ಎಂದು ಅದು ಆಪಾದಿಸಿದೆ. ಸಿಎಎ ವಿರೋಧಿ ಹೋರಾಟಗಾರರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಪ್ರತಿಭಟಿಸುವ ತಮ್ಮ ಹಕ್ಕನ್ನು ಚಲಾಯಿಸಿದ್ದರೆಂಬ ಏಕೈಕ ಕಾರಣಕ್ಕಾಗಿ ಅವರ ಬಂಧನವಾಗಿದೆಯೆಂದು ಅದು ಆಪಾದಿಸಿದೆ.

 

ಪ್ರತಿಭಟನೆಗಳಿಗೆ ಸರಕಾರದ ಪ್ರತಿಕ್ರಿಯೆ ತಾರತಮ್ಯದಿಂದ ಕೂಡಿದೆ ಎಂದು ವಿಶ್ವಸಂಸ್ಥೆ ಅರೋಪಿಸಿದೆ. ಸಿಎಎ ವಿರೋಧಿ ಹೋರಾಟಗಾರರನ್ನು ಯಾವುದೇ ವಿಚಾರಣೆಯಿಲ್ಲದೆ ಜೈಲಿಗೆ ತಳ್ಳಲಾಗುತ್ತಿದೆ. ಇನ್ನೊಂದೆಡೆ ಸಿಎಎ ಬೆಂಬಲಿಗರಿಂದ ನಡೆದಿರುವ ಹಿಂಸೆ ಹಾಗೂ ಗಲಭೆ ಪ್ರಕರಣಗಳ ತನಿಖೆಯನ್ನು ಸಂಬಂಧಪಟ್ಟ ಇಲಾಖೆಗಳು ನಡೆಸಿಲ್ಲವೆಂದೂ ಹೇಳಿಕೆಯು ದೂರಿದೆ. ಕೊರೋನ ವೈರಸ್ ಸೋಂಕು ಇತ್ತೀಚಿನ ದಿನಗಳಲ್ಲಿ ಜೈಲುಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಎಎ ವಿರೋಧಿ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ತಜ್ಞರು ಹೇಳಿದ್ದು, ಈ ಬಗ್ಗೆ ಭಾರತ ಸರಕಾರದ ಜೊತೆ ತಾವು ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.

 

ವಿಶ್ವಸಂಸ್ಥೆಯ ತಜ್ಞರ ತಂಡವು ಮಾನವಹಕ್ಕುಗಳ ಹೋರಾಟಗಾರರ ಪರಿಸ್ಥಿತಿ ಕುರಿತ ವಿಶೇಷ ಪ್ರತಿನಿಧಿ ಮೇರಿ ಲಾವ್ಲೊರ್, ಲೀ ಟೂಮೆ (ಅಧ್ಯಕ್ಷ ಪ್ರತಿನಿಧಿ), ಎಲಿನಾ ಸ್ಟೈನೆರ್ಟ್(ಉಪಾಧ್ಯಕ್ಷೆ) ಜೋಸ್ ಗುವೆರಾ ಬರ್ಮುಡೆಝ್, ಸಿಯೊಂಗ್ ಫಿಲ್‌ಹೊಂಗ್, ಸೆಟೊಂಡ್ಜಿ ಅಡ್ಜೋವಿ (ಏಕಪಕ್ಷೀಯ ಬಂಧನದ ಕುರಿತ ಕಾರ್ಯನಿರ್ವಹಣಾ ತಂಡದ ಸದಸ್ಯರು) ಹಾಗೂ ಅಭಿಪ್ರಾಯ ಹಾಗೂ ಅಭಿವ್ಯಕ್ಕಿ ಸ್ವಾತಂತ್ರ್ಯಕ್ಕಾಗಿ ವಿಶೇಷ ಪ್ರತಿನಿಧಿ ಡೇವಿಡ್ ಕೇ ಅವರನ್ನು ಒಳಗೊಂಡಿದೆ.

 

Find Out More:

Related Articles: