24 ಗಂಟೆಯಲ್ಲಿ ಕೊರೋನಾ ಸೋಂಕಿನಿಂದ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಗೊತ್ತಾ..?

Soma shekhar

ಕೊರೋನಾ ಸೋಂಕು ಬಹಳ ಕ್ರೂರವಾಗಿ ಕಾಡುತ್ತಿದ್ದು ಕೊರೋನಾ ಸೋಂಕಿನಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ  ಕೊರೊನಾ ವೈರಸ್ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಏಷ್ಯಾದಲ್ಲೇ ಅಗ್ರಸ್ಥಾನ ಮತ್ತು ವಿಶ್ವದಲ್ಲಿ 9ನೇ ಸ್ಥಾನಕ್ಕೇರಿರುವ ಭಾರತದ ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳು ಕೊರೋನಾ ಮಾರಿಯ  ಆರ್ಭಟದಿಂದ ತತ್ತರಿಸಿದೆ.

 

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ದೆಹಲಿ ಮತ್ತು ಪಶ್ಚಿಮ ಬಂಗಾಳ-ದೇಶದಲ್ಲಿ ಈವರೆಗೆ ಅತಿ ಹೆಚ್ಚು ಸಾವು ದಾಖಲಾದ ಐದು ರಾಜ್ಯಗಳಾಗಿವೆ. ಉತ್ತರಪ್ರದೇಶ, ರಾಜಸ್ತಾನ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಟಾಪ್ 10 ಪಟ್ಟಿಯಲ್ಲಿವೆ.

 

ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲಿಶದ ವಿವಿಧ ರಾಜ್ಯಗಳಲ್ಲಿ 175 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 85, ಗುಜರಾತ್ 22, ಉತ್ತರಪ್ರದೇಶ 15, ದೆಹಲಿ 13, ತಮಿಳುನಾಡು 12, ಮಧ್ಯಪ್ರದೇಶ 8, ರಾಜಸ್ತಾನ 7, ಪಶ್ಚಿಮ ಬಂಗಾಳ 6, ತೆಲಂಗಾಣ 4, ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ ಮತ್ತು ಹರಿಯಾಣ ತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

 

ಈವರೆಗೆ ಸಂಭವಿಸಿರುವ 4,706 ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಮರಣ ಪ್ರಮಾಣ 2,000 ಸನಿಹದಲ್ಲಿದ್ದು, ಈವರೆಗೆ 1,982 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. ಒಟ್ಟು 59,546 ಮಂದಿ ರೋಗ ಪೀಡಿತರಾಗಿದ್ದಾರೆ. ನಾಳೆ ವೇಳೆಗೆ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 60,000 ದಾಟುವ ಆತಂಕವಿದೆ.

 

ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲೂ ಸಾವಿನ ಸಂಖ್ಯೆ 1,000 ಸನಿಹದಲ್ಲಿದೆ. ಅಲ್ಲಿ ಇದುವರೆಗೆ 960 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (321), ದೆಹಲಿ (316), ಪಶ್ಚಿಮ ಬಂಗಾಳ (295), ಉತ್ತರ ಪ್ರದೇಶ (197), ರಾಜಸ್ಥಾನ (180), ತಮಿಳುನಾಡು (145), ತೆಲಂಗಾಣ (67), ಆಂಧ್ರಪ್ರದೇಶ (59), ಕರ್ನಾಟಕ(47), ಹಾಗೂ ಪಂಜಾಬ್ (40) ರಾಜ್ಯಗಳಿವೆ.

 

ಜಮ್ಮು-ಕಾಶ್ಮೀರ 27, ಹರಿಯಾಣ 19, ಬಿಹಾರ 15, ಒಡಿಶಾ ಮತ್ತು ಕೇರಳ ತಲಾ ಏಳು, ಹಿಮಾಚಲ ಪ್ರದೇಶ ಐದು, ಜಾರ್ಖಂಡ್, ಅಸ್ಸಾಂ, ಚಂಡಿಗಢ, ಮತ್ತು ಉತ್ತರಾಖಂಡ ತಲಾ ನಾಲ್ಕು, ಹಾಗೂ ಪುದುಚೇರಿ, ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ. ನಿನ್ನೆ ಮಧ್ಯರಾತ್ರಿಯಿಂದ ದೇಶದ ಅನೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಆವು ಪ್ರಕರಣಗಳು ಮರುಕಳಿಸುತ್ತಿವೆ.

 

Find Out More:

Related Articles: