ಯುವ ಕ್ರಿಕೆಟಿಗ ಮನೀಶ್ ಪಾಂಡೆ ಯಾವ ನಟಿಯನ್ನು ಮದುವೆಯಾಗ್ತಾರೆ ?

somashekhar

ಯಂಗ್ ಇಂಡಿಯನ್ ಕ್ರಿಕೇಟ್ ಪ್ಲೇಯರ್ ಅಂದರೆ ಅದು ಮನೀಷ್ ಪಾಂಡೆ. ಭಾರತೀಯ ಕ್ರಿಕೆಟ್, ಇಂಡಿಯನ್ ಪ್ರೀಮಿಯರ್ ಲೀಗ್, ರಣಜಿ ಪಂದ್ಯಗಳನ್ನಾಡಿರುವ ಖ್ಯಾತ ಕ್ರಿಕೆಟಿಗ ಮನೀಶ್ ಪಾಂಡೆ ಅವರು ಇದೀಗ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಅವರು ತುಳು ನಟಿಯಾದ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮನೀಶ್ ಪಾಂಡೆ ಹಾಗೂ ಆಶ್ರಿತಾ ಸುಮಾರು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್ 2 ರಂದು 30 ವರ್ಷದ ಮನೀಶ್, 26 ವರ್ಷದ ಆಶ್ರಿತಾ ಜೊತೆ ವಾಣಿಜ್ಯ ನಗರಿ ಮುಂಬೈ ನಲ್ಲಿ ಮದುವೆ ಆಗಲಿದ್ದಾರೆ.

2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್. ಎಚ್4’ ಸೇರಿದಂತೆ ಹಲವು ವಿಭಿನ್ನ ರೀತಿಯ ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಸಹ ಸಖತ್ ಸದ್ದು ಮಾಡಿದ್ದರು. ಮನೀಶ್ ಕರ್ನಾಟಕದ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡ ದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ಪಂದ್ಯದಲ್ಲಿ ಮನೀಶ್ ಮಿಡಿಲ್ ಆರ್ಡರ್ ನಲ್ಲಿ ಆಡುತ್ತಾರೆ. ಜೊತೆಗೆ ಮನೀಶ್ ಐಪಿಎಲ್ ಪಂದ್ಯಗಳಲ್ಲೂ ಮಿಂಚಿದ್ದಾರೆ. ಮನೀಶ್ ಈಗ ಕರ್ನಾಟಕ ಕ್ರಿಕೆಟ್ ತಂಡದ ನಾಯಕನಾಗಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡುತ್ತಿದ್ದಾರೆ.

ಮನೀಶ್ ಹಾಗೂ ಆಶ್ರಿತಾ ಮದುವೆಯಲ್ಲಿ ಕೇವಲ ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದು, ಎರಡು ದಿನಗಳ ಕಾಲ ಈ ಮದುವೆ ನಡೆಯಲಿದೆ. ಮನೀಶ್ ಮದುವೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಭಾಗವಹಿಸುವ ಸಾಧ್ಯತೆಯಿದ್ದು, ಅಭಿಮಾನಿಗಳಿಗೆ ಈ ಸಂಭ್ರಮವನ್ನು ಕಣ್ತುಂಬಿ ಕೊಳ್ಳುಲು ಕಾಯುತ್ತಿದ್ದಾರೆ.  ಪ್ರಸ್ತುತ ಮನೀಷ್ ಪಾಂಡೆ ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಯಕನಾಗಿ ಆಟ ಮುನ್ನಡೆಸುತ್ತಿದ್ದು, ಕರ್ನಾಟಕ ರಾಜ್ಯ ಗೆಲ್ಲಲು ಸಾಕಷ್ಟು ಶ್ರಮ ವಹಿಸಿ ಆಟವಾಡುತ್ತಿದ್ದಾರೆ.


Find Out More:

Related Articles: