ಕೂಲಿ ಕಾರ್ಮಿಕರ ಸಂಕಷ್ಟಕ್ಕೆ ನೆರವಾದ ಹಿರಿಯ ನಟಿ ಲೀಲಾವತಿ
ಕೋರೊನಾ ವೈರಸ್ ಹಾವಳಿಯನ್ನು ತಡೆಯುವ ಉದ್ದೇಶದಿಂದ ಇಡೀ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯನ್ನು ಮಾಡಲಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಸಾರಿಗೆ ವ್ಯವಸ್ಥೆ ಹಾಗೂ ಎಲ್ಲಾ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ ಹಾಗೂ ದೇಶದಲ್ಲಿ ನಡೆಯುತ್ತಿದ್ದ ಎಲ್ಲಾ ಕೆಲಸ ಕಾಮಗಾರಿಗಳೂ ಕೂಡ ಸ್ಥಬ್ದವಾಗಿದೆ ಇದರಿಂದ ಒಪ್ಪತ್ತಿನ ಊಟಕ್ಕೂ ಕೂಡ ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ ಇಂತಹ ಕೂಲಿ ಕಾರ್ಮಿಕರ ಸಹಾಯಕ್ಕೆ ಕನ್ನಡ ಚಿತ್ರರಂಗದ ಹಿರಿಯನಟಿಯೊಬ್ಬರು ನಿಂತಿದ್ದಾರೆ ಅಷ್ಟಕ್ಕೂ ಆ ಹಿರಿಯ ನಟಿ ಯಾರು ಗೊತ್ತಾ?
ಇಡೀ ದೇಶದಾದ್ಯಂತಹ ಕೊರೊನಾ ವೈರಸ್ ಇಂದ ಸಾಕಷ್ಟು ಸಾವು ನೋವುಗಳಾಗಿದ್ದು ಕರ್ನಾಟಕದಲ್ಲೂ ಕೂಡ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ ಇದನ್ನು ತಡೆಯಲು ಲಾಕ್ ಡೌನ್ ಘೋಷಣೆಮಾಡಿದ ಹಿನ್ನಲೆ ಎಲ್ಲಾ ಚಿತ್ರಗಳ ಚಿತ್ರೀಕರಣಗಳನ್ನು ನಿಲ್ಲಿಸಲಾಗಿರುವುದರಿಂದ ಸಿನಿಮಾಗಳನ್ನೇ ನೆಚ್ಚಿ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಹಾಗೂ ಸಾಕಷ್ಟು ಕಲಾವಿದರೂ ಕೊರೋನಾ ಭೀತಿಗೆ ಒಳಗಾಗಿದ್ದಾರೆ. ಅಂತವರಿಗೆ ಕನ್ನಡ ಚಿತ್ರರಂಗದ ಹಿರಿಯ ಜೀವ ನಟಿ ಡಾ.ಲೀಲಾಲವತಿ ಹಾಗೂ ಪುತ್ರ ವಿನೋದ್ ರಾಜ್ ಸಹಾಯ ಹಸ್ತವನ್ನು ಚಾಚಿದ್ದಾರೆ.
ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ತಾವು ತಮ್ಮ ತೋಟದಲ್ಲಿ ಬೆಳೆದ ಪದಾರ್ಥಗಳ ಜೊತೆಗೆ ನೆಲಮಂಗಲ ದಿನಸಿ ಅಂಗಡಿಯಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡ ವಿನೋದ್ ರಾಜ್, ನೂರಾರು ಜನರಿಗೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ.
ನಾಲ್ಕು ದಿನದ ಹಿಂದೆ ನಟ ವಿನೋದ್ ರಾಜ್ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಗ್ರಾಮದಲ್ಲಿ ಕೊರೋನ ವೈರಸ್ ಭೀತಿಯ ಪರಿಣಾಮ ಸ್ವತಃ ಯಾರಿಂದಲೂ ಸಹಾಯ ಪಡೆಯದೆ ತಾವೇ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿ ಮಾದರಿಯಾಗಿದ್ದರು. ಇಂದು ಅಮ್ಮ ಮಗ ಇಬ್ಬರು ಚಿತ್ರರಂಗದ ಕಿರಿಯ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ ತಮ್ಮ ಹೃದಯ ಶ್ರೀಮಂತಿಕೆಗೆ ಪಾತ್ರರಾಗಿದ್ದಾರೆ. ಕಿರಿಯ ಕಲಾವಿದರು ಕೂಡ ಇವರ ಕಾರ್ಯಕ್ಕೆ ಚಿರರುಣಿಯಾಗಿ ಸಂತಸವನ್ನ ವ್ಯಕ್ತಪಡಿಸಿದ್ದಾರೆ.
ಜನರಿಂದ ಏನನ್ನೂ ಬಯಸದೇ ಜನರ ಕಷ್ಟಗಳಿಗೆ ಸ್ವಂದಿಸುತ್ತಿರುವ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರ ಈ ಸೇವೆಗೆ ನಾವು ಶ್ಲಾಘಿಸಲೇ ಬೇಕು.