ಎಕ್ಸ್‌ ಕ್ಯೂಸ್‌ ಮಿ ಸುನಿಲ್ ರಾವ್ ಈಸ್ ನೌವ್  ತುರ್ತು ನಿರ್ಗಮನ

frame ಎಕ್ಸ್‌ ಕ್ಯೂಸ್‌ ಮಿ ಸುನಿಲ್ ರಾವ್ ಈಸ್ ನೌವ್  ತುರ್ತು ನಿರ್ಗಮನ

Soma shekhar
ಬೆಂಗಳೂರು: ಎಕ್ಸ್ ಕ್ಯೂಸ್ ಮೀ ಎಂದು ಹಾಡು ಹೇಳುತ್ತಾ ತೆರೆ ಮೇಲೆ ಮೋಡಿ ಮಾಡಿದ್ದ ನಟ ಸುನೀಲ್ ಈಸ್ ಕಂ ಬ್ಯಾಕ್. ಹೌದು ಆಗಲೇ ಮಿಂಚು ಹರಿಸಲು ರೆಡ್ಡಯಾಗಿದ್ದ ನಟ ಇದೀಗ ಮತ್ತೇ ಕಂ ಬ್ಯಾಕ್ ಮಾಡಿದ್ದು ಮೋಡಿ ಮಾಡೋಕೆ ಸಿದ್ಧವಾಗಿದ್ದಾರೆ. ಅಷ್ಟಕ್ಕೂ ಸ್ಟೋರಿ ಏನ್ ಗೊತ್ತಾ!? ಇಲ್ಲಿದೆ ನೋಡಿ ಆ ಕಂಪ್ಲೀಟ್ ಡೀಟೆಲ್ಸ್. 
 
ಚಿತ್ರದ ಟೈಟಲ್ ಕೂಡ ವಿಭಿನ್ನವಾಗಿದ್ದು ತುರ್ತು ನಿರ್ಗಮನನಿರ್ಗಮನ ಎಂದು ಹೆಸರಿಡಲಾಗಿದೆ. ಚಿತ್ರರಂಗಕ್ಕೆ ಎಕ್ಸ್​​ಕ್ಯೂಸ್​​ ಮಿ ಸುನೀಲ್​​ ರಾವ್​ ಪುನರಾಗಮನ. ಹೇಮಂತ್​ ಕುಮಾರ್​ ನಿರ್ದೇಶನದ ಫ್ಯಾಂಟಸಿ ಸಿನಿಮಾ ತುರ್ತು ನಿರ್ಗಮನ. ಬರೋಬ್ಬರಿ ಒಂಭತ್ತು ವರ್ಷಗಳ ನಂತ್ರ ಎಕ್ಸ್ ​ಕ್ಯೂಸ್ ​ಮಿ ಸಿನಿಮಾ ಖ್ಯಾತಿಯ ಸುನೀಲ್​ ರಾವ್​​ ಈ ಚಿತ್ರದಲ್ಲಿ ಹಿರೋ ಆಗಿ ಬಣ್ಣ ಹಚ್ಚಿದ್ದಾರೆ. ವಿಕ್ರಂ ಅನ್ನೋ ಯುವಕನಿಗೆ ಸತ್ತ ಮೇಲೆ ಮತ್ತೆ ಮೂರು ದಿನ ಬದುಕಲು ಅವಕಾಶ ಸಿಕ್ಕರೇ ಏನೆಲ್ಲಾ ಆಗುತ್ತೆ ಅನ್ನೋದ್ರ ಸುತ್ತಾ ಈ ಸಿನಿಮಾ ಕಥೆ ಸಾಗುತ್ತಿದ್ದು 3 ದಿನದಲ್ಲಿ ಏನೆಲ್ಲಾ ಮಾಡಬಹುದು ಎಂದು ತೆರೆ ಮೇಲೆ ತೋರಿಸಲಿದ್ದಾರೆ ನಿರ್ದೇಶಕರು. 
 
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹೇಮಂತ್​​ ಕುಮಾರ್​ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಮತ್ತು ಹಿತಾ ಚಂದ್ರಶೇಖರ್ ನಾಯಕಿಯರಾಗಿ ಬಣ್ಣ ಹಚ್ಚಿದ್ದು, ರಾಜ್​ ಬಿ ಶೆಟ್ಟಿ, ಸುಧಾರಾಣಿ, ಅಚ್ಯುತ್​ಕುಮಾರ್​ ಪ್ರಧಾನ ಭೂಮಿಕೆಯಲ್ಲಿದೆ. ಸುನೀಲ್​​​ ರಾವ್​​ ಚಿತ್ರದಲ್ಲಿ ವಿಕ್ರಂ ಅನ್ನೊ ಪಾತ್ರದಲ್ಲಿ ನಟಿಸಿದ್ದು, ಸೆಕೆಂಡ್​ ಇನ್ನಿಂಗ್​ನಲ್ಲಿ ಭರ್ಜರಿ ಸಕ್ಸಸ್​​​ ಕಾಣೋ ಉತ್ಸಾಹದಲ್ಲಿದ್ದು ಚಿತ್ರ ಭಾರೀ ಹಿಟ್ ಆಗುವ ನಿರೀಕ್ಷೆಗಳಿವೆಯಂತೆ. 
 
ಈಗಾಗಲೇ ಚಿತ್ರದ ಸೋಂಬೇರಿ ಮತ್ತು ಜೋರು ಜೋರಾಗಿ ಅನ್ನೋ ಲಿರಿಕಲ್​ ವೀಡಿಯೋ ಸಾಂಗ್ಸ್​​ ಹಿಟ್​ ಆಗಿದೆ. ಢಸ್​​ ಮೋಡ್​​​ ಮ್ಯೂಸಿಕ್​​​ ತುರ್ತು ನಿರ್ಗಮನ ಚಿತ್ರಕ್ಕಿದೆ. ಸದ್ಯ ಸೆನ್ಸಾರ್​​ ಮಂಡಳಿ ಕದ ತಟ್ತಿರೋ ತುರ್ತು ನಿರ್ಗಮನ ಚಿತ್ರತಂಡ ಮಾರ್ಚ್ ​​ನಲ್ಲಿ ಚಿತ್ರ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
 

Find Out More:

Related Articles:

Unable to Load More