ಫೆಬ್ರವರಿ 21ಕ್ಕೆ 'ಮೌನಂ'

Soma shekhar

ಬೆಂಗಳೂರು: ಇತ್ತೀಚೆಗೆ ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಲಾಂಚ್​ ಮಾಡಿದ ಮೌನಂ ಚಿತ್ರದ ಟ್ರೈಲರ್ ​ಗೆ ಈಗ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಕಥೆ ಈ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದೆ. ಬಹಳ ವಿಭಿನ್ನ ಪ್ರಯೋಗವನ್ನ ಈ ಚಿತ್ರದಲ್ಲಿ ಮಾಡಿದ್ದಾರೆ. ಹೌದು, ಮೌನಂ ಎಂದು ಟೈಟಲ್ ಕೊಟ್ಟು, ಚಿತ್ರ ಭಾರೀ ಹಿಟ್ ಆಗುವಂತೆ ಚಿತ್ರವನ್ನು ಅದ್ಧೂರಿಯಾಗಿ, ವಿಶೇಷವಾಗಿ ಹೊರತರುವ ಪ್ರಯತ್ನ ಮಾಡಿದ್ದಾರೆ. 

 
ಹೌದು.. ಹಿರಿಯ ನಟ ಅವಿನಾಶ್​​, ಮಯೂರಿ ಮತ್ತು ಬಾಲಾಜಿ ಶರ್ಮಾ ಅಭಿನಯದ ಸಿನಿಮಾ ಮೌನಂ. ನಿಶಬ್ಧಕ್ಕೂ ಶಬ್ಧವಿದೆ ಅನ್ನೋ ಟ್ಯಾಗ್​ ಲೈನ್​ ಇರೋ ಮೌನಂ ಚಿತ್ರಕ್ಕೆ ರಾಜ್ ​ಪಂಡಿತ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಕಥೆ ಇದು ಅಂತ ಚಿತ್ರತಂಡ ಹೇಳ್ತಿದ್ದು, ಕನ್ ​ಸ್ಟ್ರಕ್ಷನ್ ಬ್ಯುಸಿನೆಸ್​ ಮಾಡ್ಕೊಂಡಿರುವ ಶ್ರೀಹರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಮೌನಂ ಚಿತ್ರದ ಟ್ರೈಲರ್​ ಲಾಂಚ್​ ಮಾಡಿದ್ದು ತುಂಬಾ ವಿಶೇಷವಾಗಿದ್ದು ಡಿ ಬಾಸ್ ಅಭಿಮಾನಿಗಳಿಗೂ ಇಷ್ಟವಾಗಿತ್ತು. 
 
ತಂದೆ, ಮಗ ಮತ್ತು ಮಗನ ಪ್ರೇಯಸಿಯ ಸುತ್ತಾ ಸುತ್ತುವ ವಿಭಿನ್ನ ಕಥೆ ಮೌನಂ. ಈ ಚಿತ್ರದಲ್ಲಿ ಅವಿನಾಶ್​​​ ಬಹಳ ವಿಭಿನ್ನ ಶೇಡ್​ಗಳಿರೋ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕಿ ಮುಯೂರಿ ಕಾಲೇಜು ಸ್ಟುಡೆಂಟ್​ ಆಗಿ ಬೋಲ್ಡ್​ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಿರುತೆರೆ ನಟ ಬಾಲಾಜಿ ಶರ್ಮಾ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಮಗನಿಗೆ ಅಪ್ಪನೇ ಪ್ರಪಂಚ. ಅಪ್ಪನಿಗೆ ಮಗನೇ ಸರ್ವಸ್ವ.
 
ಹೀಗಿರುವಾಗ ಇಬ್ಬರ ನಡುವೆ ಅಂತ ಬದುಕುತ್ತಿರುವ ಅಪ್ಪ. ಮಗನ ಬಾಳಲ್ಲಿ ಪ್ರೇಯಸಿಯ ಆಗಮನವಾದಾಗ ಏನೆಲ್ಲಾ ಆಗುತ್ತೆ ಎನ್ನೋದನ್ನ ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಕಾಮಿಡಿ ಕಿಲಾಡಿ ನಯನಾ, ರಿತೇಶ್​, ಸಿಂಚನ ಮತ್ತು ಕೆಂಪೇಗೌಡ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದು, ಆರವ್​ ರಿಶಿಕ್​ ಮ್ಯೂಸಿಕ್​ ಚಿತ್ರಕ್ಕಿದೆ. ಇದೇ ಫೆ. 21ಕ್ಕೆ ಸೈಕಲಾಜಿಕಲ್​ ಎಕ್ಸ್​ಪೆರಿಮೆಂಟಲ್​​ ಸಿನಿಮಾ ಮೌನಂ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು  ಕಾದು ಕುಳಿತಿದೆ. ಪ್ರೇಕ್ಷಕರಿಂದ ಶಿಳ್ಳೆ ಹೊಡಿಸಿಕೊಳ್ಳೋದು ಗ್ಯಾರಂಟಿ ಎಂಬುದು ಚಿತ್ರತಂಡದ ಮಾತಾಗಿದ್ದು ಹೇಗೆ ಮೂಡಿಬರಲಿದೆ ಎಂಬುದು ಕಾದು ನೋಡಬೇಕಾಗಿದೆ.

Find Out More:

Related Articles: