ಯಶ್ ಬರ್ತ್‌ಡೇಗೆ ಕೆಜಿಎಫ್-2 ಟೀಸರ್‌ ಬಿಡುಗಡೆ ಆಗುತ್ತಾ? ಇಲ್ವಾ!?

frame ಯಶ್ ಬರ್ತ್‌ಡೇಗೆ ಕೆಜಿಎಫ್-2 ಟೀಸರ್‌ ಬಿಡುಗಡೆ ಆಗುತ್ತಾ? ಇಲ್ವಾ!?

Soma shekhar
ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಸ್ಪೆಷಲ್ ಆಗಿ ಬಿಡುಗಡೆ ಆಗುತ್ತಾ! ಇಲ್ವಾ ಎಂಬುದು ಅಭಿಮಾನಿಗಳಲ್ಲಿ ಕಾಡತೊಡಗಿದೆ. ಟೀಸರ್ ಬಿಡುಗಡೆ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು? ಎಂಬ ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ. 
 
ಟೀಸರ್ ಬಿಡುಗಡೆ ಕುರಿತು ಮಾತನಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಈ ಒಂದೇ ಮಾತು ಯಶ್ ಅವರ ಸಹಸ್ರಾರು ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನು ತಂದಿದೆ. ಹೌದು, ಕ್ಷಮೆ ಕೇಳಿರುವುದು ಟೀಸರ್ ಬಿಡುಗಡೆ ಆಗದಿರುವುದಕ್ಕೆ ಎಂಬುದು ಪಕ್ಕಾ ಆಗಿದೆ. 
 
ಹೌದು, ಜನವರಿ 8 ರಂದು ಯಶ್‌ ಬರ್ತ್ ಡೇ. ಹಾಗಾಗಿ, ಅಂದು “ಕೆಜಿಎಫ್ 2′ ಚಿತ್ರದ ಟೀಸರ್‌ ಬಿಡುಗಡೆ ಆಗಲಿದೆ ಎಂಬ ಸುದ್ದಿ ಇತ್ತು. ಆದರೆ, ಯಶ್‌ ಹುಟ್ಟುಹಬ್ಬದ ದಿನ “ಕೆಜಿಎಫ್ 2′ ಚಿತ್ರದ ಟೀಸರ್‌ ಬಿಡುಗಡೆಯಾಗುತ್ತಿಲ್ಲ. ಯಶ್‌ ಅಭಿಮಾನಿಗಳು ಟೀಸರ್‌ ಬಿಡುಗಡೆಯಾಗಲಿದೆ ಎಂಬ ಖುಷಿಯಲ್ಲಿದ್ದರು. ಆದರೆ, ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿಯನ್ನು ಸ್ವತಃ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಪ್ರಶಾಂತ್‌ ನೀಲ್‌ ತಮ್ಮ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. 
 
“ಕೆ.ಜಿ.ಎಫ್ 2′ ಚಿತ್ರದ ಟೀಸರ್‌ ಜನವರಿ 8 ರಂದು ಬಿಡುಗಡೆ ಆಗುತ್ತಿಲ್ಲ. ಯಾಕಂದರೆ, ಜನವರಿ 6 ರವರೆಗೂ ಶೂಟಿಂಗ್‌ ನಡೆಯಲಿದೆ. ನಾವೆಲ್ಲರೂ ವಾಪಸ್‌ ಬರುವುದೇ ಜನವರಿ 7 ರಂದು. “ಕೆ.ಜಿ.ಎಫ್ 2′ ಬಗ್ಗೆ ನೀವೆಲ್ಲ ತೋರಿಸುತ್ತಿರುವ ಪ್ರೀತಿ ಮತ್ತು ನಿರೀಕ್ಷೆ ತುಂಬಾ ದೊಡ್ಡದು. ಹೀಗಾಗಿ, ಚಿತ್ರದ ಔಟ್‌ ಕಮ್‌ ಬಗ್ಗೆ ನಾವು ರಾಜಿ ಆಗುವುದಿಲ್ಲ. ನಿಮಗೆ ಅತ್ಯುತ್ತಮವಾದುದ್ದನ್ನು ನೀಡಲು ನಾವು ಮುಂದಾಗಿದ್ದೇವೆ.
 
ದಯವಿಟ್ಟು ಕ್ಷಮಿಸಿ’ ಎಂದು ಪ್ರಶಾಂತ್‌ ನೀಲ್‌ ಬರೆದುಕೊಂಡಿದ್ದಾರೆ. ಬರ್ತ್‌ಡೇ ಟೀಸರ್‌ ಬದಲು ಯಶ್‌ ಅವರ ಹುಟ್ಟುಹಬ್ಬದ ದಿನ “ಕೆ.ಜಿ.ಎಫ್ 2′ ಚಿತ್ರದ ಸೆಕೆಂಡ್‌ ಲುಕ್‌ ಪೋಸ್ಟರ್‌ ಬಿಡುಗಡೆ ಆಗಲಿದೆ ಎಂಬುದನ್ನು ಪ್ರಶಾಂತ್‌ ನೀಲ್‌ ಸ್ಪಷ್ಟಪಡಿಸಿದ್ದಾರೆ. ಪ್ರಶಾಂತ್‌ ನೀಲ್‌ ಅವರ ಈ ಸ್ಪಷ್ಟನೆಗೆ ಯಶ್‌ ಅಭಿಮಾನಿಗಳು ಫ‌ುಲ್‌ ಗರಂ ಆಗಿದ್ದಾರೆ.
 
 
 
 
 

Find Out More:

Related Articles:

Unable to Load More