ಹಸೆಮಣೆ ಏರಲು ತಯಾರಾದ ಚೇತನ್. ಯಾರು ಆ ಅದೃಷ್ಟವಂತೆ ಗೊತ್ತಾ

frame ಹಸೆಮಣೆ ಏರಲು ತಯಾರಾದ ಚೇತನ್. ಯಾರು ಆ ಅದೃಷ್ಟವಂತೆ ಗೊತ್ತಾ

Soma shekhar
ಬೆಂಗಳೂರು: ಸಮಾಜ ಸೇವಾ ಕಾರ್ಯದಲ್ಲಿ ತನ್ನನ್ನು ತಾನೇ ಮರೆತಿರುವ ಸ್ಯಾಂಡಲ್ ವುಡ್ ನ 6 ಅಡಿ ಕಟೌಟ್ ನ ಹ್ಯಾಂಡ್ ಸಮ್ ಹುಡುಗ ನಟ ಚೇತನ್ ಕುಮಾರ್ ಇದೀಗ ಹಸೆಮಣೆ ಹೇರಲು ಸಿದ್ಧವಾಗುವ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಪ್ರಾರಂಭದ ದಿನಗಳಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. 
 
ಅಂದಹಾಗೆ, ಚೇತನ್‌ ಅವರದ್ದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಅಂತೆ. ಸುಮಾರು ಎರಡು ವರ್ಷಗಳಿಂದ ಚೇತನ್‌ ಕುಮಾರ್‌, ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಇಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಸಮ್ಮತಿ ನೀಡಿದ್ದು, ಇದೇ ಫೆಬ್ರವರಿ ವೇಳೆಗೆ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಚೇತನ್‌, “ಸದ್ಯಕ್ಕೆ ಮದುವೆ ಆಗುತ್ತಿರುವುದು ಮತ್ತು ಮದುವೆಯ ಒಂದಷ್ಟು ತಯಾರಿಗಳು ನಡೆಯುತ್ತಿರುವುದು ನಿಜ. ನಾನು ಸರಳವಾಗಿ ಮದುವೆಯಾಗಬೇಕು ಅನ್ನೋದು ನನ್ನ ಮತ್ತು ಮನೆಯವರ ಆಶಯ. ಅದರಂತೆ ಸರಳವಾಗಿ ವಿವಾಹಕ್ಕೆ ಪ್ಲಾನಿಂಗ್‌ ಮಾಡಿಕೊಳ್ಳುತ್ತಿದ್ದೇನೆ. ನಾನು ಮದುವೆಯಾಗುತ್ತಿರುವ ಹುಡುಗಿ ಚಿತ್ರರಂಗದವರಲ್ಲ. ಆದಷ್ಟು ಬೇಗ ಆ ಹುಡುಗಿ, ಮದುವೆಯ ಬಗ್ಗೆ ಎಲ್ಲ ವಿವರಗಳನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ. 
 
ಚೇತನ್ ಮೊದಲಿನಿಂದಲೂ ಸಮಾಜ ಸೇವಕ. ಇದೀಗ ತಮ್ಮ ಮದುವೆಯಲ್ಲಿ ಕೂಡ ಸಮಾಜ ಸೇವೆಗೆ ಮುಂದಾಗಿದ್ದಾರೆ. ಚೇತನ್‌ ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿ ದ್ದಾರಂತೆ. ಜೊತೆಗೆ ತಾನು ಮದುವೆ ಯಾಗುತ್ತಿರುವ ಹುಡುಗಿಗೂ ಕನ್ನಡ ಕಲಿಸು ತ್ತಿದ್ದಾರಂತೆ. ಒಟ್ಟಾರೆ ಕಳೆದ ವರ್ಷ ಸ್ಯಾಂಡಲ್‌ವುಡ್‌ನ‌ಲ್ಲಿ ಧ್ರುವ ಸರ್ಜಾ, ರಿಷಿ, ಕಿರಣ್‌, ಹಿತಾ ಚಂದ್ರಶೇಖರ್‌, ನಿತ್ಯ ರಾಮ್‌ ಹೀಗೆ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಆರಂಭದಲ್ಲಿಯೇ ಚೇತನ್‌ ಮದುವೆ ಸುದ್ದಿ ಹೊರಬೀಳುವ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ತಾರೆಯರ ವಿವಾಹ ಪ್ರಾರಂಭವಾಗಿದ್ದು, ಇನ್ನು ಯಾವ್ಯಾವ ತಾರೆಯರು ಈ ವರ್ಷ ಹಸೆಮಣೆ ಏರುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ. ಅಷ್ಟೇ ಹಲವು ನಟಿಯರು ಈ ವರ್ಷ ಸರ್ ಪ್ರೈಸ್ ಕೊಡಲು ಸಿದ್ಧವಾಗಿದ್ದಾರೆ.
 
 
 

Find Out More:

Related Articles:

Unable to Load More