ವೀಕೆಂಡ್ ನಲ್ಲಿ ಸಖತ್ ಮನರಂಜನೆಗಾಗಿ ಬ್ರಹ್ಮಚಾರಿ ಫರ್ಫೆಕ್ಟ್

Soma shekhar
ಬ್ರಹ್ಮಚಾರಿ ಸಿನಿಮಾ ವಿಮರ್ಶೆ
ನಟ: ಸತೀಶ್ ನೀನಾಸಂ
ತಾರಾಗಣ: ಅದಿತಿ ಪ್ರಭುದೇವ, ಅಚ್ಯುತ್, ದತ್ತಣ್ಣ, ಶಿವರಾಜ್ ಕೆ.ಆರ್. ಪೇಟೆ, ಅಶೋಕ್, ಪದ್ಮಜಾ. 
ರೇಟಿಂಗ್: 3.5/5
 
ಸ್ಯಾಂಡಲ್ ವುಡ್ ನಲ್ಲಿ ಬಹುದಿನಗಳ ನಂತರ ಸತೀಶ್ ಜನರನ್ನು ಮತ್ತೊಮ್ಮೆ ಹೊಟ್ಟೆ ನೋವು ಬರುವಷ್ಟು ನಗುವನ್ನು ತರಿಸಿದ್ದಾರೆ. ಅದು ಬ್ರಹ್ಮಚಾರಿ ಚಿತ್ರದ ಮೂಲಕ. ಮದುವೆಯಾದ ನಂತರ ಹೆಣ್ಣುಮಕ್ಕಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಕಷ್ಟಪಡುವುದು ಸಾಮಾನ್ಯ ಸಂಗತಿ. ದಶಕಗಳ ಹಿಂದೆ ಕಾಶೀನಾಥ್ 'ಅನುಭವ' ಚಿತ್ರದ ಮೂಲಕ ಇಂಥ ಪ್ರಯತ್ನವನ್ನು ಮಾಡಿದ್ದರು. ಅದೇ ರೀತಿ ಹೆಣ್ಣಿನ ವಿಚಾರದಲ್ಲಿ ಮಡಿವಂತಿಕೆಯಿಂದ ಬೆಳೆದ ಹುಡುಗನೊಬ್ಬ ಮದುವೆ ನಂತರ ಮುಜುಗರಕ್ಕೆ ಈಡಾಗುವ ಕಥೆ 'ಬ್ರಹ್ಮಚಾರಿ' ಚಿತ್ರದಲ್ಲಿದೆ. ಒಂದಿಷ್ಟು ಕಾಮಿಡಿಯೊಂದಿಗೆ ಕಥೆಯನ್ನು ಹೇಳಿದ್ದಾರೆ ನಿರ್ದೇಶಕ ಚಂದ್ರ ಮೋಹನ್.
 
ಮುಗ್ದ ಹುಡುಗ ನೀನಾಸಂ. ಚಿತ್ರದಲ್ಲಿ ರಾಮು ಆಗಿದ್ದಾನೆ. ರಾಮು 
ಅಪ್ಪಟ ರಾಮ ಭಕ್ತ. ಅಪ್ಪ ಅಮ್ಮ ಇರುವುದಿಲ್ಲ. ಪ್ರೀತಿಸಲಾರೆ, ಹುಡುಗೀರ ಸಂಗ ಬೆಳೆಸಲಾರೆ ಎಂದೇ ಬೆಳೆಯುತ್ತಾನೆ. ಹುಡುಗಿಯರನ್ನು ನೋಡಿದ ತಕ್ಷಣ ಜಗತ್ತನ್ನೇ ಮರೆಯುವ ಇಬ್ಬರು ಸ್ನೇಹಿತರಿದ್ದರೂ ರಾಮು ಮಾತ್ರ ಸಭ್ಯ, ಮುಗ್ಧ. ಇವನಿಗೆ ಲೇಖಕಿ ಸುನೀತಾ (ಅದಿತಿ ಪ್ರಭುದೇವ)ಪರಿಚಯವಾಗಿ ಕೊನೆಗೆ ಮದುವೆಯೂ ಆಗುತ್ತದೆ. 
 
ಹುಡುಗಿಯ ಸಾನಿಪ್ಯದ ಅನುಭವವೇ ಇಲ್ಲದ ರಾಮುವಿಗೆ ದಾಂಪತ್ಯ ಜೀವನ ನುಂಗಲಾರದ ಬಿಸಿ ತುಪ್ಪವಾಗುತ್ತದೆ. ಈ ಸಮಸ್ಯೆ ಅನೇಕ ಅನುಮಾನ, ಸಂಕಷ್ಟಗಳಿಗೆ ಕಾರಣವಾಗುತ್ತದೆ. ಮುಂದೇನಾಗುತ್ತದೆ, ರಾಮು ಸುನೀತಾಳನ್ನು ಓಪ್ಪಿಕೊಂಡು ಅಪ್ಪಿಕೊಳ್ತಾನಾ ಇಲ್ವಾ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಹಾಸ್ಯದೊಂದಿಗೆ ಸಿನಿಮಾ ಸಾಗುತ್ತದೆ. ಆದರೆ, ಕೆಲವೊಂದು ಕಡೆ ದೃಶ್ಯ ಸಂಯೋಜನೆ ಕೃತಕ ಎನ್ನಿಸುತ್ತದೆ. ಪ್ರಾರಂಭದಿಂದ ಸಹಜವಾಗಿ ಸಾಗುವ ಕಥೆ ಕೊನೆಗೆ ಥ್ರಿಲ್ ಕೊಡುತ್ತದೆ. 
 
ಇದೆಲ್ಲದರ ನಡುವೆ ನೀನಾಸಂ ಸತೀಶ್, ಅದಿತಿ ಪ್ರಭುದೇವ, ದತ್ತಣ್ಣ, 
ನಗಿಸಿದ್ದಾರೆ.ಶಿವರಾಜ್ ಕೆ.ಆರ್. ಪೇಟೆ ನಟನೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಧರ್ಮವಿಶ್ ಸಂಗೀತ ದೃಶ್ಯಗಳಿಗೆ ಜೀವ ತುಂಬಿದೆ. ಹಾಡುಗಳು ಗಮನ ಸೆಳೆಯುತ್ತವೆ. ಅನಂತ ನಾಗ್ ನಟನೆಯ ಹಳೆಯ ಚಿತ್ರವನ್ನು ನೆನಪಿಸುವಂತೆ ಇರುವ 'ಬ್ರಹ್ಮಚಾರಿ' ಚಿತ್ರವನ್ನು ಯಾವುದೇ ಮುಜುಗರ ಇಲ್ಲದೆ ಒಮ್ಮೆ ನೋಡಬಹುದು

Find Out More:

Related Articles: