ಕ್ರಿಕೆಟ್ ಎಂದರೆ ಅಭಿಮಾನ ಮಾತ್ರವಲ್ಲ, ಹುಚ್ಚು!

Soma shekhar
ಭಾರತದಲ್ಲಿ ಗಲ್ಲಿಯಿಂದ ದಿಲ್ಲಿಯ ವರೆಗೂ, ದಿಲ್ಲಿಯಿಂದ ಓವರ್ ನ ವರೆಗೂ ಕ್ರಿಕೇಟ್ ಎಂದರೆ ಕೇವಲ ಅಭಿಮಾನ ಮಾತ್ರವಲ್ಲ. ಕ್ರಿಕೆಟ್ ಎಂದರೆ ಹುಚ್ಚು. ಶೇ. 42 ರಷ್ಟು ಕ್ರಿಕೆಟ್‌ ಪ್ರಿಯರು ತಮ್ಮ ನೆಚ್ಚಿನ ಪಂದ್ಯಗಳನ್ನು ವೀಕ್ಷಿಸಲು ಹನಿಮೂನ್‌ ಕೂಡ ಕ್ಯಾನ್ಸಲ್‌ ಮಾಡಿಕೊಳ್ಳುತ್ತಾರೆ ಎಂಬುದು ಇತ್ತೀಚಿನ ಅಧ್ಯಯನ ಒಂದರಲ್ಲಿ ಬೆಳಕಿಗೆ ಬಂದಿದೆ.
 
ಕ್ರಿಕೆಟ್ ನೋಡಲು ಹನಿಮೂನನ್ನೇ ತ್ಯಾಗ ಮಾಡುತ್ತಾರೆ. ಆನ್‌ಲೈನ್‌ ಟ್ರಾವೆಲ್‌ ಬುಕಿಂಗ್‌ ಸಂಸ್ಥೆಯಾದ ಬುಕಿಂಗ್‌ ಡಾಟ್‌ ಕಾಮ್‌ ಕೈಗೊಂಡ ಸಮೀಕ್ಷೆಯೊಂದರಲ್ಲಿ ಇಂಥದ್ದೊಂದು ಅಚ್ಚರಿಯ ಸಂಗತಿ ಹೊರಬಿದ್ದಿದೆ. ಕ್ರೀಡೆ ಮೇಲಿನ ಅಭಿಮಾನವು ಅವರ ಪ್ರವಾಸ ಯೋಜನೆಗಳ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಈ ಸಮೀಕ್ಷೆಯ ಮೂಲಕ ಬೆಳಕಿಗೆ ಬಂದಿದೆ. ಶೇ. 44 ರಷ್ಟು ಭಾರತೀಯರು ಒಂದು ವರ್ಷ ಅವಧಿಯಲ್ಲಿ ತಮ್ಮ ನೆಚ್ಚಿನ ರಾಷ್ಟ್ರೀಯ ತಂಡ ಅಥವಾ ಆಟಗಾರ ಪ್ರಶಸ್ತಿ ಗೆಲ್ಲುವುದನ್ನು ನಿರೀಕ್ಷಿಸಿರುತ್ತಾರೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ. ಈ ಪ್ರಮಾಣ ಬೇರೆ ರಾಷ್ಟ್ರಗಳಲ್ಲಿ ಶೇ. 34ರಷ್ಟಿದೆ. ತಮ್ಮ ತಂಡ ಗೆದ್ದೇ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸವು ಫುಟ್ಬಾಲ್‌ ಅಭಿಮಾನಿಗಳಿಗಿಂತಲೂ ಕ್ರಿಕೆಟ್‌ ಅಭಿಮಾನಿಗಳಲ್ಲಿ ಹೆಚ್ಚಿದೆಯಂತೆ.
 
ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಹಾದಿಯಲ್ಲಿ ಹಾರ್ದಿಕ್‌
ಕ್ರಿಕೆಟ್‌ ಅಭಿಮಾನಿಗಳ ಪೈಕಿ ಶೇ. 88 ರಷ್ಟು ಮಂದಿ ತಮ್ಮ ನೆಚ್ಚಿನ ತಂಡ ಮತ್ತು ಆಟಗಾರ ಮುಂದಿನ ಒಂದು ವರ್ಷ ಅವಧಿಯಲ್ಲಿ ಪ್ರಶಸ್ತಿ ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿರುತ್ತಾರಂತೆ. ಈ ಪ್ರಮಾಣ ಫುಟ್ಬಾಲ್‌ ಅಭಿಮಾನಿಗಳಲ್ಲಿ ಶೇ. 79ರಷ್ಟಿದೆ.
 
ಇಂಡಿಯಾದಲ್ಲಿ ಕ್ರಿಕೆಟ್‌ ಸಲುವಾಗಿ ಶೇ.86 ರಷ್ಟು ಮಂದಿ ಪ್ರವಾಸ ಕೈಗೊಂಡರೆ, ಈ ಪ್ರಮಾಣವು ಫುಟ್ಬಾಲ್‌ (ಶೇ. 51), ಟೆನಿಸ್‌ (ಶೇ. 31), ಹಾಕಿ (ಶೇ. 23) ಮತ್ತು ಮೋಟಾರ್‌ಸ್ಪೋರ್ಟ್ಸ್‌ (ಶೇ. 18) ಅಭಿಮಾನಿಗಳಲ್ಲಿ ಕೊಂಚ ಕಡಿಮೆ ಇದೆ. 18ರಿಂದ 19 ವರ್ಷ ವಯೋವರ್ಗದಲ್ಲಿನ 22,603 ಮಂದಿ ಭಾರತೀಯ ಕ್ರೀಡಾಭಿಮಾನಿಗಳನ್ನು ಅಧ್ಯಯನ ಮಾಡುವ ಮೂಲಕ ಈ ವರದಿ ಪ್ರಕಟ ಮಾಡಲಾಗಿದೆ. ಈ ವರದಿಯ ಪ್ರಕಾರ ಕ್ರಿಕೆಟ್ ಮೇಲಿನ ಅಭಿಮಾನ ಹುಚ್ಚು ಎಷ್ಟಿದೆ ಎಂಬುದು ಸಾಬೀತಾಗಿದೆ.

Find Out More:

Related Articles: