ಬಾಲಿವುಡ್​ ನಟಿ ಸ್ವರ ಭಾಸ್ಕರ್ ಟ್ರೋಲ್ ಆಗೋದಕ್ಕೆ ಇಲ್ಲಿದೆ ಉತ್ತರ

somashekhar

 
ಮುಂಬೈ: ಪಡ್ಡೆ ಹಾಕಿ ಮನ ಗೆದ್ದು, ಸಿಕ್ಕಾಪಟ್ಟೆ ಅತೀ ಕಡಿಮೆ ಸಮಯದಲ್ಲಿ ಟ್ರೆಂಡಿಯಾಗಿರುವ ಬಾಲಿವುಡ್ ಖ್ಯಾತ ನಟಿ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. ಬಾಲಿವುಡ್ ನಲ್ಲಿ ಫುಲ್ ಮಿಂಚುತ್ತಿದ್ದಾರೆ. ಹೌದು, ಯಾಕೆ? ಇದ್ದಕ್ಕಿದ್ದಂತೆ ಟ್ರೆಂಡ್ ಆಗಿದ್ದು ಹೇಗೆ? ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ. 

ಬಾಲಿವುಡ್ ನಟಿ ಸ್ವರ ಭಾಸ್ಕರ್ ಅವರ ಹೆಸರು ಬುಧವಾರ ಟ್ವಿಟರ್​ನಲ್ಲಿ ಟಾಪ್ ಟ್ರೆಂಡ್​ನಲ್ಲಿತ್ತು. ಹ್ಯಾಷ್​ ಟ್ಯಾಗ್ #Swara_aunty. ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್ ಒಂದರಲ್ಲಿ ಅವರು, ನಾಲ್ಕು ವರ್ಷದ ಮಗು ತನ್ನನ್ನು ಆಂಟಿ ಎಂದು ಕರೆದುದಕ್ಕೆ ಆಡಿದ ಮಾತುಗಳು ಈಗ ವ್ಯಾಪಕ ಟೀಕೆಗೊಳಗಾಗಿದೆ. ಇದರ ಪರಿಣಾಮವೇ #Swara_aunty ಟ್ರೆಂಡಿಂಗ್​. ಹೌದು ಇಷ್ಟು ಸಿಲ್ಲಿ ವಿಷಯಕ್ಕೆ ಈಗೆಲ್ಲಾ ಆಯ್ತಾ ಎಂದು ಆಶ್ಚರ್ಯ ವಾದರೂ ಸಹ ನಂಬಲೇ ಬೇಕಾದ ವಿಷಯವಿದು. 

ವೈರಲ್ ಆದ ವಿಡಿಯೋ ಸಂದರ್ಶನದಲ್ಲಿ ಸ್ವರ ಬಾಸ್ಕರ ಅವರು, ನಾನು ಸಿನಿಮಾ ಕರಿಯರ್​ಗೆ ಎಂಟ್ರಿ ತಗೊಳ್ಳಬೇಕು ಎನ್ನುವ ಆಕಾಂಕ್ಷೆಯಲ್ಲಿದ್ದ ನಟಿ ಆಗಿದ್ದೆ. ಜಾಹೀರಾತು ಚಿತ್ರೀಕರಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಅದೇ ಜಾಹೀರಾತಿನಲ್ಲಿ ನಟಿಸಲು ಬಂದಿದ್ದ ಒಂದು ನಾಲ್ಕು ವರ್ಷದ ಮಗು ನನ್ನನ್ನು ಆಂಟಿ ಎಂದು ಕರೆದಾಗ ಎಷ್ಟು ಮೈ ಉರಿದಿತ್ತು ಎನ್ನುವುದನ್ನು ವಿವರಿಸುತ್ತ, ಆ ಮಗುವನ್ನು ಅವಾಚ್ಯ ಶಬ್ದಗಳಿಂದ ಟೀಕಿಸಿದ್ದು ಕಂಡುಬಂದಿದೆ. ಅಲ್ಲದೆ, ಮಕ್ಕಳು ಎಂದರೆ ಎವಿಲ್​ಗಳು ಎಂದು ಹೇಳಿದ್ದು ಕೂಡ ದಾಖಲಾಗಿದೆ.
ಸ್ವರ ಭಾಸ್ಕರ ಸ್ಪಷ್ಟೀಕರಣ: ನಾನು ಅಂದು ಚಿತ್ರೀಕರಣದ ಸಂದರ್ಭದಲ್ಲಿ ಆ ಮಗುವನ್ನು ಬೈದಿರಲಿಲ್ಲ.

ಆದರೆ, ಈ ಸಂದರ್ಶನದಲ್ಲಿ ನನ್ನ ಮನಸ್ಸಿನೊಳಗೆ ನಡೆದಿದ್ದ ಚಿಂತನೆಗಳನ್ನು ಹಂಚಿಕೊಂಡಿದ್ದೆ ಎಂದು ಸ್ವರ ಹೇಳಿಕೊಂಡಿದ್ದಾರೆ. ಈ ಸಂಬಂಧ, ಲೀಗಲ್ ರೈಟ್ಸ್​ ಪ್ರೊಟೆಕ್ಷನ್ ಫೋರಂ ಎಂಬ ಎನ್​ಜಿಒ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್​ಗೆ ದೂರು ನೀಡಿದ್ದು, ಸ್ವರ ಭಾಸ್ಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ ಎಂದು ಸುದ್ದಿ ಯಾಗಿದೆ. ಇದರಿಂದ ಸಖತ್ ಟ್ರೋಲ್ ಆಗಿದ್ದಾರೆ.


Find Out More:

Related Articles: