ಏನಾಯ್ತು ಗೊತ್ತಾ ಚೈತ್ರ ವಾಸುದೇವನ್ ಅವರಿಗೆ

somashekhar
ಬೆಂಗಳೂರು: ಬಿಗ್ ಬಾಸ್, ಕಳೆದ 15 ದಿನಗಳಿಂದ ಪ್ರೇಕ್ಷಕರ ಗುನುಗಾಗಿರುವ ಬಿಗ್ ರಿಯಾಲಿಟಿ ಶೋ. ಎರಡನೇ ವಾರದ ಎಲಿಮಿನೇಟರ್ ಆಗಿ ಹೊರಬಂದಿರುವ ಚೈತ್ರ ವಾಸುದೇವನ್ ಅವರು ಎಲ್ಲರಿಗೂ ಖಡಕ್ ಆಗಿರೋ ಒಂದು ಸಂದೇಶ ನೀಡಿದ್ದಾರೆ. ಅದೇನೆಂದರೆ  ‘ಪ್ರತಿಯೊಬ್ಬರನ್ನೂ ಕಾಂಪಿಟಿಟರ್ ಎಂದು ನೋಡಬೇಕಿತ್ತು, ಆದರೆ ನಾನು ಆ ಥರ ಯಾರನ್ನೂ ನೋಡಿಲ್ಲ..’ ಎಂದಿದ್ದಾರೆ. ಬಾಹ್ಯಕ್ಕೆ ಯಾರ ಹೆಸರು ಹೇಳದಿದ್ದರು ಸಹ ಆಂತರಿಕ ವಿಚಾರವೇ ಬೇರೆಯಿದೆ. 

‘ನನ್ನ ಜತೆ ಚೆನ್ನಾಗಿದ್ದವರೇ ನನ್ನನ್ನು ನಾಮಿನೇಟ್ ಮಾಡಿದ್ದರು ಎಂಬುದು ಆಮೇಲೆ ಗೊತ್ತಾಯಿತು. ಅವರು ಆ ಥರ ಹಿಂದೊಂದು ಮುಂದೊಂದು ಇರುತ್ತಾರೆ ಎಂಬುದು ಗೊತ್ತೇ ಇರಲಿಲ್ಲ. ಅವರು ಎದುರು ಹೇಗಿದ್ದರೋ ಅದನ್ನು ನಾನು ನಂಬಬಾರದಿತ್ತು. ಪ್ರತಿಯೊಬ್ಬರನ್ನೂ ಸ್ಪರ್ಧಿಯಾಗಿ ನೋಡಬೇಕಿತ್ತು’ ಎನ್ನುತ್ತ ಚೈತ್ರಾ ಮತ್ತಷ್ಟು ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ‘ಇನ್ನು ನಾನು ಅಲ್ಲಿ ನನಗಿದು ಬೇಕೇ ಬೇಕು, ಇದು ನಂದು ಅಂತ ಏನನ್ನೂ ಹೇಳಿಲ್ಲ, ಅವರು ಟಾಸ್ಕ್ ಕೊಟ್ಟಷ್ಟನ್ನೇ ಮಾಡಿದೆ. ಇನ್ನೂ ಸ್ವಲ್ಪ ಜಾಸ್ತಿ ಮಸಾಲಾ ಥರ ಮಾತನಾಡಬೇಕಿತ್ತು, ಅಲ್ಲಿಬೇರೆಯವರು ಮಾಡೋ ಥರ ಮಾಡಬೇಕಿತ್ತು, ಅದನ್ನು ನಾನು ಹೇಳಲಿಕ್ಕೂ ಇಷ್ಟ ಪಡುವುದಿಲ್ಲ’ ಎನ್ನುತ್ತಾರೆ ಅವರು.

‘ಬಿಗ್​ಬಾಸ್’ ಮನೆಯಲ್ಲಿ ಚೈತ್ರಾಗೆಇನ್ನೂ ಕೆಲವುಅಂಶಗಳು ಇಷ್ಟ ಆಗಿಲ್ಲವಂತೆ. ಆಂಕರಿಂಗ್​ನಲ್ಲಿ ಸ್ಟೇಜ್ ಮೇಲೆ ನೂರಕ್ಕೆ ನೂರರಷ್ಟು ಎನರ್ಜೆಟಿಕ್ ಆಗಿರುವ ಅವರು ಬಿಗ್​ಬಾಸ್ ಮನೆಯಲ್ಲಿ ಯಾಕೆ ಡಲ್ಲಾದರು ಎಂಬುದಕ್ಕೂ ತಮ್ಮದೇ ಆದ ವ್ಯಾಖ್ಯಾಅದರಲ್ಲೂ ಹೊರಗೆ ವೇದಿಕೆಯಲ್ಲಿ ಎನರ್ಜೆಟಿಕ್ ಆಗಿರುವ ನಾನು ಬಿಗ್​ಬಾಸ್ ಮನೆಯಲ್ಲಿ ನಮ್ಮ ಮನೆಯಲ್ಲಿದ್ದ ಹಾಗೇ ಇದ್ದೆ. ಸ್ವಲ್ಪ ಡಲ್ ಆಗಿದ್ದೆ ಅಂತ ಈಗ ಅನಿಸುತ್ತಿದೆ’ ಎನ್ನುತ್ತ ಎರಡು ವಾರಗಳ ಬಿಗ್​ಬಾಸ್ ದಿನಗಳನ್ನು ನೆನಪಿಸಿಕೊಂಡರು ಚೈತ್ರಾ.ಇನ್ನೂ ಕೆಲವುದಿನಗಳ ಕಾಲ ಚೈತ್ರಾ ಅಲ್ಲೇ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಕುತೂಹಲಕ್ಕೂ ಅವರಿಂದ ಪ್ರತಿಕ್ರಿಯೆ ಹೊರಹೊಮ್ಮಿದೆ.

‘ಮತ್ತಷ್ಟು ದಿನ ಅಲ್ಲಿದ್ದಿದ್ದರೆ ಏನಾದರೂ ಸ್ಪೆಷಲ್ ಅಡುಗೆ ಮಾಡಿರುತ್ತಿದ್ದೆ. ಡಾನ್ಸ್ ಪ್ರಾಕ್ಟಿಸ್ ಮಾಡಿದ್ನಲ್ಲ ಅದನ್ನೇ ಇನ್ನಷ್ಟು ಚೆನ್ನಾಗಿ ಮಾಡಿರುತ್ತಿದ್ದೆ. ದೀಪಾವಳಿಗೆಂದೇ ಖರೀದಿಸಿಟ್ಟಿರುವ ಇನ್ನೊಂದು ಡಿಫರೆಂಟ್ ಕಾಸ್ಟೂ್ಯಮ್ ಇತ್ತು, ಅದನ್ನು ಧರಿಸಿ ಸಂಭ್ರಮಿಸಿರುತ್ತಿದ್ದೆ’ ಎಂದಿದ್ದಾರೆ ಅವರು.ನ ನೀಡಿದ್ದಾರೆ.




Find Out More:

Related Articles: