ಕಳೆದೊಂದು ವಾರದಿಂದ ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡುತ್ತಿರುವ ಚಿತ್ರ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈ ರಾ ನರಸಿಂಹ ರೆಡ್ಡಿ'. ಸಿನಿ ಇಂಡಸ್ಟ್ರೀಯಲ್ಲೇ ಭಾರೀ ಸದ್ದು ಮಾಡುತ್ತಿದ್ದ, ಗಳಿಗೆಯಲ್ಲೂ ಮುಂದಿದೆ. ಖೈದಿ ನಂಬರ್ 150 ಮತ್ತು ಸೈ ರಾ ನರಸಿಂಹ ರೆಡ್ಡಿ ಚಿತ್ರದ ಸೂಪರ್ ಹಿಟ್ ನಂತರ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ಧಾರೆ. ವಿಜಯದಶಮಿ ಸಂಭ್ರಮದಲ್ಲೇ ಮೆಗಾಸ್ಟಾರ್ 152 ನೇ ಸಿನಿಮಾ ಲಾಂಚ್ ಆಗಿದೆ. ರಾಜಕೀಯ ರಂಗ ಪ್ರವೇಶಿಸಿ, ಸೋಲುಂಡ ಚಿರು ಪ್ರೇಕ್ಷಕರನ್ನು ರಂಜಿಸೋದನ್ನೇ ಫುಲ್ ಟೈಂ ಕಾಯಕ ಮಾಡಿಕೂಂಡಿದ್ದಾರೆ. ಇದ್ದಕ್ಕಿದಂತೆ ಸಿನಿಮಾ ಮಾಡೋ ಸ್ಪೀಡ್ ಹೆಚ್ಚಿಸಿರೋ ಚಿರಂಜೀವಿ, ಸೈರಾ ಥಿಯೇಟರ್ನಲ್ಲಿ ಇರೋವಾಗ್ಲೇ ಹೊಸ ಚಿತ್ರಕ್ಕೆ ಚಾಲನೆ ಕೊಟ್ಟಿದ್ಧಾರೆ.
ಮಿರ್ಚಿ, ಶ್ರೀಮಂತುಡು, ಭರತ್ ಅನೇ ನೇನು ರೀತಿಯ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಕೊರಟಾಲ ಶಿವ, ಚಿರಂಜೀವಿ 152ನೇ ಚಿತ್ರವನ್ನ ಡೈರೆಕ್ಟ್ ಮಾಡ್ತಿದ್ದಾರೆ. ಒಂದೊಳ್ಳೆ ಮೆಸೇಜ್ ಜೊತೆಗೆ ಪಕ್ಕಾ ಮಾಸ್ ಎಂಟ್ರಟ್ರೈನರ್ ಸಿನಿಮಾ ಇದು ಅಂತ ಹೇಳಲಾಗ್ತಿದೆ. ಸೈರಾ ಶೂಟಿಂಗ್ ಸಮಯದಲ್ಲೇ ಚಿರು ಈ ಚಿತ್ರವನ್ನ ಒಪ್ಪಿಕೊಂಡಿದ್ದರೆ. ವಿಜಯದಶಮಿ ಸಂಭ್ರಮದಲ್ಲಿ ಇನ್ನು ಹೆಸರಿಡದ ಈ ಚಿತ್ರಕ್ಕೆ ಪೂಜೆ ನೆರವೇರಿಸಿದ್ದು, ಚಿರಂಜೀವಿ ತಾಯಿ ಅಂಜನಾ ದೇವಿ ಪೂಜೆಯಲ್ಲಿ ಭಾಗಿಯಾಗಿದರು. ಚಿರು ಪತ್ನಿ ಸುರೇಖಾ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಮ್ಯಾಟ್ನಿ ಎಂಟ್ರಟ್ರೈನ್ಮೆಂಟ್ಸ್ ಬ್ಯಾನರ್ ಜೊತೆ ಸೇರಿ ಕೋಣಿದೇಲ ಬ್ಯಾನರ್ನಲ್ಲಿ ರಾಮ್ ಚರಣ್ ತೇಜಾ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಕೋಣಿದೇಲ ಸಂಸ್ಥೆಯಲ್ಲಿ ನಿರ್ಮಾಣವಾದ ಖೈದಿ ನಂಬರ್ 150 ಮತ್ತು ಸೈರಾ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿವೆ. ಇದು ಮೂರನೇ ಸಿನಿಮಾ. 270ಕೋಟಿ ಬಜೆಟ್ನಲ್ಲಿ ಸೈರಾ ಸಿನಿಮಾ ನಿರ್ಮಿಸಿ ಗೆದ್ದಿರೋ ಚೆರ್ರಿ ಈಗ ತಂದೆ ಚಿರಂಜೀವಿ ನಟಿಸ್ತಿರೋ ಮತ್ತೊಂದು ಚಿತ್ರವನ್ನ ನಿರ್ಮಿಸ್ತಿದ್ದಾರೆ.
ಒಟ್ಟಾರೆ ಮೆಗಾಸ್ಟಾರ್ ಮತ್ತು ಮೆಗಾಪವರ್ ಸ್ಟಾರ್ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಮೆಗಾ ಗಿಫ್ಟ್ ಕೊಡೋಕ್ಕೆ ಬರ್ತಿರೋದು ಸುಳ್ಳಲ್ಲ. ಶೀಘ್ರದಲ್ಲೇ ಶೂಟಿಂಗ್ ಶುರುವಾಗ್ತಿದ್ದು, 2020ರ ಸಮ್ಮರ್ಗೆ ಚಿತ್ರ ತೆರೆಗಪ್ಪಳಿಸಲಿದೆ.