ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ರಾಕಿಂಗ್ ಸ್ಟಾರ್ ಯಶ್. 'ಕೆಜಿಎಫ್' ನಲ್ಲಿ ನಟನಾಗಿ ಅಭಿನಯಿಸಿದ ಇವರು ರಾಜ್ಯಕ್ಕೆ ಸೀಮಿತವಾಗಿದ್ದ ತಮ್ಮ ಸ್ಟಾರ್ ಸೌಂತ್ ಇಂಡಿಯಾ ಸಂಪೂರ್ಣವಾಗಿ ವಿಸ್ತರಿಸಿಕೊಂಡರು. ಪ್ರಸ್ತುತ ಕೆಜಿಎಫ್ ಸ್ಟಾರ್ ರಾಕಿ ಭಾಯ್ ಯಶ್ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ 2019 ಪಡೆದುಕೊಂಡಿದ್ದಾರೆ.
ನಿನ್ನೆ ಅಂದರೆ ಸಪ್ಟೆಂಬರ್ 20 ರಂದು ಹೈದರಾಬಾದ್ ನಲ್ಲಿ ಈ ಪ್ರಶಸ್ತಿಯನ್ನು ಯಶ್ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತು ಶುರು ಮಾಡಿದ ರಾಕಿ, ಕನ್ನಡ ಮತ್ತು ತೆಲುಗಿನಲ್ಲಿ 'ಕೆಜಿಎಫ್' ಸಿನಿಮಾ ಡೈಲಾಗ್ ಹೇಳಿ, ಕಾರ್ಯಕ್ರಮಕ್ಕೆ ಬಂದಿರುವ ಅಭಿಮಾನಿಗಳ ಮನವನ್ನು ರಂಜಿಸಿದರು. 'ಕೆಜಿಎಫ್' ಸಿನಿಮಾವನ್ನು ಆಂಧ್ರದ ಜನರು ಅತಿ ದೊಡ್ಡ ಮಟ್ಟದಲ್ಲಿ ಸ್ವೀಕಾರ ಮಾಡಿದ್ದಾರೆ ಆದ್ದರಿಂದ ಅವರಿಗೆ ಧನ್ಯವಾದಗಳು ಎಂದರು.
ರಾಕಿ ಭಾಯ್ ಜೊತೆ ಆ ತೆಲುಗು ಡೈರೆಕ್ಟರ್ ಸಿನಿಮಾ ಮಾಡೋದು ಪಕ್ಕಾ.! ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಇದು ಕೇಂದ್ರ ಸರ್ಕಾರದಿಂದ ನೀಡಿರುವ ಪ್ರಶಸ್ತಿ ಅಲ್ಲ. ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ನಟ ಯಶ್ 'ಕೆಜಿಎಫ್' ಚಿತ್ರದ ನಟನೆಗಾಗಿ ಈ ಪ್ರಶಸ್ತಿ ಪಡೆದಿದ್ದಾರೆ.
ಕನ್ನಡ ನಟ ಯಶ್ (ಕೆಜಿಎಫ್) ಹಾಗೂ ತೆಲುಗು ನಟಿ ಕೀರ್ತಿ ಸುರೇಶ್ (ಮಹಾ ನಟಿ) ಸಿನಿಮಾದ ಅಧ್ಭುತ ನಟನೆಗಾಗಿ ಈ ವಿಶೇಷ ಪ್ರಶಸ್ತಿಗಳನ್ನು ನೀಡಲಾಗಿದೆ. ಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂಡ ಉಳಿದಂತೆ, ನಟ ಮಹೇಶ್ ಬಾಬು ಅತ್ಯುತ್ತಮ ನಟ, ಸುಕುಮಾರ್ ಅತ್ಯುತ್ತಮ ನಿರ್ದೇಶಕ, ಅನುಷ್ಕಾ ಶೆಟ್ಟಿ ಅತ್ಯುತ್ತಮ ನಟಿ, ದೇವಿ ಶ್ರೀ ಪ್ರಸಾದ್ ರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅವರೆಲ್ಲರೂ ತಮ್ಮ ಪ್ರಶಸ್ತಿ ಪಡೆಯಲು ಪಟ್ಟ ಶ್ರಮವನ್ನು, ಅಭಿಪ್ರಾಯ ವನ್ನು ಹಂಚಿಕೊಂಡು ಸಂಭ್ರಮಿಸಿದರು. ಕನ್ನಡತಿ ಅನುಷ್ಕಾ ಶೆಟ್ಟಿಗೂ ಪ್ರಶಸ್ತಿ ಲಭಿಸಿರುವುದು ಇನ್ನಷ್ಟು ಸಂಭ್ರಮ ಹೆಚ್ಚುವಂತೆ ಮಾಡಿದೆ.