ಮನ್ ಮರ್ಜಿಯ ಸಿನಿಮಾದ ಕಥೆ ಏನು ಗೊತ್ತಾ?!

somashekhar
ಅಭಿಷೇಕ್ ಬಚ್ಚನ್ ಹಾಗೂ ಇಲಿಯಾನಾ ಡಿಕ್ರೂಜ್ ಜೋಡಿ ಕುಕಿ ಗುಲಾಟಿ ಅವರ ಮುಂದಿನ ಸಿನಿಮಾದಲ್ಲಿ ಅಭಿನಯಿಸಿದ ಅನುರಾಗ್ ಕಶ್ಯಪ್ ನಿರ್ದೇಶನದ ಮನ್ ಮರ್ಜಿಯ ಸಿನಿಮಾದಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದು ಅಭಿಷೇಕ್ ಗೆ ಬಾಲಿವುಡ್ನಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಪ್ರಸ್ತುತ ಅಭಿಷೇಕ್ ಬಚ್ಚನ್ ಗೆ ಸಾಲು ಸಾಲು ಸಿನಿಮಾ ಅವಕಾಶಗಳು ಸಿಗುತ್ತಿರುವ ಇಂತಹ ಸಂದರ್ಭದಲ್ಲಿ ಇದೀಗ ಅಭಿಷೇಕ್ ಮನ್ ಮರ್ಜಿಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೆಸರಿಡದ ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ ಈ ವಿಷಯವನ್ನು ಅಭಿಷೇಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. 

ಅಭಿಷೇಕ್ ಜೊತೆ ಈ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸುತ್ತಿರುವುದು ವಿಶೇಷ. ಪ್ರಸ್ತುತ ಈ ವಿಷಯದಿಂದ ದೇವಗನ್ ಮತ್ತು ಅಭಿಷೇಕ್ ಬಚ್ಚನ್  ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೋಲ್ ಬಚ್ಚನ್ ಬಳಿಕ ನಾಯಕರ್ ಇಬ್ಬರು ಈ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ ವೃತ್ತಿಜೀವನದಲ್ಲಿ ನಾನು ಹೊಸ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಈ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ ಗುಲಾಟಿ ಹಾಗೂ ಅಜಯ್ ಗೆ ಅಭಿನಂದನೆ ಹೇಳಲೇಬೇಕು ಎಂದು ಅಭಿಷೇಕ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಟಿಟ್ವರ್ ನಲ್ಲಿ ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ. 

ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾದ ಸ್ಕ್ರಿಪ್ಟ್ ಸಿದ್ಧಗೊಂಡಿರುವುದು ತುಂಬಾ ವಿಶೇಷವಾಗಿದೆ. 1990 ರಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು ಇದರ ಪರಿಣಾಮಗಳನ್ನು ತೆರೆಯಮೇಲೆ ತೋರಿಸಲಾಗುತ್ತಿದೆ. ಪ್ರಸ್ತುತ ವರ್ಷ ಅಂದರೆ 2019ರಲ್ಲಿ ಸಹ ಆರ್ಥಿಕ ಇಂಜರಿತವಾಗಿದೆ. ವಾಸ್ತವ ಸ್ಥಿತಿಯನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಆದರೆ ಇದು 1990ರಲ್ಲಿ ಸಂಭವಿಸಿದ್ದ ಆರ್ಥಿಕ ಹಿಂಜರಿತ ವಾಸ್ತವವನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ವರ್ಷದ ಅಂತ್ಯಕ್ಕೆ ಸಿನಿಮಾ ಬಿಡುಗಡೆಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.  ಎಲ್ಲಾ ಅಂದುಕೊಂಡಂತೆ ಆದರೆ ಡಿಸೆಂಬರ್ ವೇಳೆಗೆ ತೆರೆಮೇಲೆ ಬರಲಿದೆ. ಅಭಿಷೇಕ್ ಬಚ್ಚನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. 


Find Out More:

Related Articles: