ಪ್ರಥ್ವಿರಾಜ್ ಆಗಿ ಅಕ್ಷಯ್ ಕುಮಾರ್ ಮಿಂಚಲಿದ್ದಾರೆ!

somashekhar
ಇತ್ತೀಚೆಗೆ ಕೇಸರಿ, ಮಿಷನ್ ಮಂಗಲ್ ಮೂಲಕ ಅಕ್ಷಯ್ ಕುಮಾರ್ ಅವರು ಸದ್ದು ಮಾಡಿದ್ದಾರೆ. ಅವರು ಇದೀಗ ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರ ಚಿತ್ರಗಳು ಇದೀಗ ಉತ್ತಮ ರೀತಿಯಲ್ಲಿಯೇ ಪ್ರದರ್ಶನ ಕಾಣುತ್ತಿವೆ. ಏಕ್ ಟಾಯಿಲೆಟ್ ಕಥಾ, ಪ್ಯಾಡ್‌ಮ್ಯಾನ್ ಕೂಡ ದೇಶದಾದ್ಯಂತ ಸದ್ದು ಉಂಟು ಮಾಡಿದ್ದರು. ಇದಾದ ನಂತರದಲ್ಲಿ ಮಿಶನ್ ಮಂಗಲ್ ಸದ್ದು ಮಾಡುತ್ತಿದೆ.


ಇದೀಗ ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರ ಪೃಥ್ವಿರಾಜ್, ಈ ಚಿತ್ರದ ಟೀಸರ್ ಅನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಸಾಹಸ ಚಿತ್ರಗಳಲ್ಲಿಯೇ ಹೆಚ್ಚು ನಟನೆ ನಟಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ನಟನೆ ಮಾಡುತ್ತಿದಾರೆ. 


ಹೌದು, ರಾಜ ಪೃಥ್ವಿರಾಜ್ ಚೌಹಾಣ್ ಶಾರ್ಯ ಹಾಗೂ ಪರಾಕ್ರಮ ಹಾಗೂ ಮೌಲ್ಯಗಳನ್ನು ಸಾರುವ ಪಾಯತ್ರದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅಕ್ಷಯ್ ಕುಮಾರ್ ಅವರ ಅಭಿನಯಕ್ಕೆ ಅಭಿಮಾನಿಗಳು ಯಾವತ್ತೂ ಮಾರು ಹೋಗುತ್ತಾರೆ. ಕೇವಲ ಸಾಹಸ ದೃಶ್ಯಗಳು ಅಷ್ಟೇ ಅಲ್ಲದೇ, ಕಾಮಿಡಿ ದೃಶ್ಯಗಳಲ್ಲಿಯಯೂ ಅವರು ಅದ್ಭುತವಾಗಿ ಅಭಿನಯಿಸುತ್ತಾರೆ.


ಈ ಅದ್ದೂರಿ ಚಿತ್ರವನ್ನು ಯಶ್‌ರಾಜ್‌ ಫಿಲ್ಮ್ಸ್‌ ಬ್ಯಾನರ್‌ನಡಿ ನಿರ್ಮಿಸುತ್ತಿದ್ದು, ಡಾ.ಚಂದ್ರಪ್ರಕಾಶ್‌ ದ್ವಿವೇದಿ ನಿರ್ದೇಶಿಸಲಿದ್ದಾರೆ. ಹೌದು 2020ರ ದೀಪಾವಳಿ  ಸಮಯಕ್ಕೆ ಈ ಚಿತ್ರವು ತೆರೆಗೆ ಬರಲಿದೆ. ಇನ್ನು ಈ ಚಿತ್ರದ ಟೀಸರ್‌ ಕೂಡ ಕುತೂಹಲ ಮೂಡಿಸುವಂತಿದ್ದು, ಈ ಟೀಸರ್ ಇದೀಗ ಸುಮಾರು 3 ಮಿಲಿಯನ್ ನಷ್ಟು ವೀಕ್ಷಣೆ ಪಡೆದಿದೆ. 


ಇಂದು ಮತ್ತೊಂದು ವಿಶೇಷ ಏನಪ್ಪ ಅಂದರೆ, ಅಕ್ಷಯ್ ಕುಮಾರ್ ಅವರ ಜನ್ಮದಿನ. ಜನ್ಮದಿನದಂದು ನನ್ನ ಮೊದಲ ಐತಿಹಾಸಿಕ ಚಿತ್ರದ ಸುದ್ದಿ ಹಂಚಿಕೊಳ್ಳಲು ನಿಜಕ್ಕೂ ನನಗೆ ಸಂತೋಷವಾಗಿದೆ ಎಂದು ಹೇಳಿದರು. ಅಲ್ಲದೇ ಅಕ್ಷಯ್ ಕುಮಾರ್, ಪೃಥ್ವಿರಾಜ್‌ ಶೌರ್ಯ ಮತ್ತು ಮೌಲ್ಯಗಳನ್ನು ತೆರೆಯ ಮೇಲೆ ತೋರಿಸುವ ಅವಕಾಶ ಸಿಕ್ಕಿರುವುದಕ್ಕೆ ವಿನಮ್ರನಾಗಿದ್ದೇನೆ ಅಕ್ಷಯ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕಿಯಾರಾ ಅಡ್ವಾನಿ ಅವರು ಅಕ್ಷಯ್ ಕುಮಾರ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.



Find Out More:

Related Articles: