ಮತ್ತೆ ಮೋಡಿ ಮಾಡುತ್ತಾ ಶಾರುಕ್-ಕಾಜಲ್ ಜೋಡಿ

somashekhar
ಶಾರೂಕ್ ಖಾನ್ ಮತ್ತು ಕಾಜಲ್ ಜೋಡಿ ಸಿನಿಮಾಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಹೌದು ಬಾಜಿಗರ್ ಚಿತ್ರದಿಂದ ಆರಂಭಿಸಿ ಈಚಿನ ದಿಲ್ ವಾಲೆ ಚಿತ್ರದವರೆಗೆ ಅವರ ಜೋಡಿ ಮೋಡಿ ಮಾಡಿದೆ. ಅದರಲ್ಲೂ ಅಭಿಮಾನಿಗಳಂತೂ ಈ ಇಬ್ಬರ ಜೋಡಿಯನ್ನೂ ಖುಷಿಯಿಂದ ಎಂಜಾಯ್ ಮಾಡುತ್ತಾರೆ. ಈ ಜೋಡಿಯನ್ನು ಎಲ್ಲರೂ ಅಚ್ಚರಿಯಿಂದ ಗಮನಿಸಿರಬಹುದು. 


ಶಾರುಕ್ ಮತ್ತು ಕಾಜಲ್ ಜೋಡಿಯನ್ನು ಅನೇಕರು ಇಷ್ಟ ಪಡುತ್ತಾರೆ. ಇದೀಗ ಶಾರೂಕ್ ಮತ್ತು ಕಾಜಲ್ ಜೋಡಿಯ ಇನ್ನೊಂದು ಸಿನಿಮಾ ಸೆಟ್ಟೇರಬಹುದು ಎಂಬ ಅಭಿಯಾನ ಮಿಶ್ರಿತ ಕಾತರ ಸಿನಿಮಾ ಪ್ರೇಮಿಗಳಲ್ಲಿ ಮೂಡಿಸಿದೆ. ಶಾರೂಕ್ ಅವರು 2019ರ ಅಥವಾ 2020ರ ಕರಣ್ ಜೋಹರ್ ನಿರ್ದೇಶಕ ಸಿನಿಮಾ ಒಂದರಲ್ಲಿ ಅಭಿನಯಿಸಲಿದ್ದಾರೆ ಎಂದು ಸುದ್ದಿ ಬಾಲಿವುಡ್ ಬಾಲಿವುಡ್ ಲೋಕದಲ್ಲಿ ಸದ್ದು ಮಾಡುತ್ತಿದೆ.


ಕಾಜಲ್ ಅವರು ಸಿನಿಮಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಬಗ್ಗೆ ಒಂದು ಸುಳಿವನ್ನೂ ನೀಡಿದ್ದಾರೆ. ಕಳೆದ 25 ವರ್ಷಗಳಿಂದಲೂ ನಾನು ಮತ್ತು ಶಾರೂಖ್‌ ಆಗಾಗ ಒಟ್ಟಾಗಿ ಸಿನಿಮಾ ಮಾಡುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿ ಇನ್ನೊಂದು ಸಿನಿಮಾ ಆಗಲೂಬಹುದು' ಎಂಬ ಅರ್ಥದ ಮಾತನ್ನು ಕಾಜಲ್ ಆಡಿದ್ದಾರೆ. ಇದು ಅಭಿಮಾನಿಗಳಲ್ಲಿ ಒಂದು ಸಂತಸವನ್ನು ನೀಡಿದೆ. 


ಹೌದು. ನಿಮಗೆ ಒಂದು ವಿಷಯ ಗೊತ್ತಾ? ಕರಣ್‌ ಜೋಹರ್ ಮತ್ತು ಶಾರೂಖ್ ಅವರ ಸ್ನೇಹ ತೀರಾ ಗಾಢ ಎಂಬುದು ಎಲ್ಲರಿಗೂ ಗೊತ್ತಿರೋದೇ. ಹಾಗೆಯೇ, ಕರಣ್‌ ಅವರ ನಿರ್ದೇಶನದಲ್ಲಿ, ಶಾರೂಖ್‌ ಅಭಿನಯದಲ್ಲಿ ಬಂದ ಕೆಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ಕಾಜಲ್ ನಾಯಕಿಯ ಪಾತ್ರ ನಿಭಾಯಿಸಿದ್ದಾರೆ. ಇದು ಅನೇಕರ ಹೃದಯವನ್ನು ಗೆದ್ದಿದೆ. ಇದೇ ಕಾರಣಗಳಿಂದಾಗಿ, ಕರಣ್ ಜೋಹರ್ ಅವರ ಮುಂದಿನ ಸಿನಿಮಾದಲ್ಲಿ ಇಬ್ಬರೂ ನಟಿಸುವ ಸಾಧ್ಯತೆ ಇದೆ. ಹೀಗಾಗಿ ಇದೀಗ ಬಾಲಿವುಡ್ ಮತ್ತೊಮ್ಮೆ ಇಬ್ಬರ ಜೋಡಿಯನ್ನು ನೋಡಲು ಕಾತರದಿಂದ ಕಾಯುತ್ತಿದೆ.


ಹೌದು ನಿಜ, ಶಾರೂಕ್ ಮತ್ತು ಕಾಜಲ್ ಒಟ್ಟಾಗಬಹುದು ಎಂಬ ಅನುಮಾನ ಗಟ್ಟಿಯಾಗಿದೆ. 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ರಾಜ್-ಸಿಮ್ರನ್ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಾಗಿ ಕಾಣುವಂತೆ ಆಗಲಿ ಎಂದು ಅನೇಕರು ಇದೀಗ ಹಾರೈಸುತ್ತಿದ್ದಾರೆ. ಹೀಗಾಗಿ ಶಾರುಕ್ ಮತ್ತು ಕಾಜಲ್ ಅವರ ಜೋಡಿಯನ್ನು ನೋಡೋಕೆ ಮತ್ತೊಮ್ಮೆ ಅಭಿಮಾನಿಗಳು ಸಜ್ಜಾಗಬೇಕಿದೆ.


Find Out More:

Related Articles: