ಅಕ್ಟೋಬರ್ 4ರಂದು ಅಧ್ಯಕ್ಷ ಇನ್‌ ಅಮೆರಿಕಾ ರಿಲೀಸ್!

frame ಅಕ್ಟೋಬರ್ 4ರಂದು ಅಧ್ಯಕ್ಷ ಇನ್‌ ಅಮೆರಿಕಾ ರಿಲೀಸ್!

somashekhar
ಈ ಹಿಂದೆ ಅಧ್ಯಕ್ಷನಾಗಿ ಮಿಂಚಿದ್ದ ನಟ ಶರಣ್ ಇದೀಗ ಅಧ್ಯಕ್ಷ ಇನ್ ಅಮೆರಿಕ ಹೆಸರಿನಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಹೌದು ಅಧ್ಯಕ್ಷ ಇನ್ ಅಮೆರಿಕ ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಇದು ರ್ಯಾಂಬೋ 2 ಚಿತ್ರ ಬಳಿಕ ಶರಣ್ ಅವರು ಅಭಿನಯಿಸುತ್ತಿರುವ ಚಿತ್ರ. ಈ ಚಿತ್ರದ ಕಥೆಯ ಸ್ವರೂಪ ಹೇಗಿದೆ ಅಂದರೆ, ಭಾರತ ಮತ್ತು ಅಮೆರಿಕಾದಲ್ಲಿ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. 


ಶರಣ್ ಅವರಿಗೆ ಜೋಡಿಯಾಗಿ ನಟಿ ರಾಗಿಣಿ ದ್ವಿವೇದಿ ಅವರು ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಈ ಚಿತ್ರದಲ್ಲಿ ಬಹುತಾರಾಗಣವಿದೆ. ಹೌದು.. ಹಾಗಾದರೆ ಯಾರೆಲ್ಲ ಅಭಿನಯಿಸುತ್ತಿದ್ದಾರೆ ಅನ್ನೋದು ಇಲ್ಲಿದೆ. ಪ್ರಕಾಶ್‌ ಬೆಳವಾಡಿ, ದಿಶಾ ಪಾಂಡೆ, ಅಶೋಕ್‌, ಅವಿನಾಶ್‌, ಚಿತ್ರಾ ಶೆಣೈ,  ಶಿವರಾಜ್‌ ಕೆ.ಆರ್‌.ಪೇಟೆ,  ಪದ್ಮಜಾ ರಾವ್‌, ತಬಲ ನಾಣಿ, ಮಕರಂದ್‌ ದೇಶಪಾಂಡೆ, ಸಾಧು ಕೋಕಿಲ, ರಂಗಾಯಣ ರಘು, ರಾಕ್‌ ಲೈನ್‌ ಸುಧಾಕರ್‌, ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಅಧ್ಯಕ್ಷ ಇನ್‌ ಅಮೆರಿಕಾ ಹೆಸರೇ ಹೇಳುವಂತೆ ಈ ಚಿತ್ರದಲ್ಲಿ ಅಧ್ಯಕ್ಷನಾದವನು ಅಮೆರಿಕಕ್ಕೆ ಹೋಗಿ ಏನು ಮಾಡುತ್ತಾನೆ ಅನ್ನೋದು ಚಿತ್ರದ ಕಥೆ. ಇನ್ನು ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿವೆ. ಅಷ್ಟೇ ಅಲ್ಲದೇ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಜೊತೆಗೆ ಚಿತ್ರವನ್ನು ರಿಲೀಸ ಮಾಡುವುದಕ್ಕೂ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಅಧ್ಯಕ್ಷ ಇನ್‌ ಅಮೆರಿಕಾ ಚಿತ್ರದ ಟೀಸರ್ ಮತ್ತು ಟ್ರೇಲರ್ ನೋಡಿ ಜನರು ಉತ್ತಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಖುಷಿಯಲ್ಲಿರುವ ಚಿತ್ರತಂಡ ಅಕ್ಟೋಬರ್‌ ಮೊದಲವಾರ ತೆರೆಗೆ ತರಲು ಯೋಜಿಸಿದೆ. ಒಮ್ಮೆ ಈ ಚಿತ್ರ ತೆರೆ ಮೇಲೆ ಬಂದರೆ ಸಾಕು ಮೊದಲ ದಿನವೇ ಹೋಗಿ ನೋಡಬೇಕು ಎಂದು ಶರಣ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತುಕೊಂಡಿದ್ದಾರೆ.


ಹಾಗಾದರೆ ಈ ಚಿತ್ರಕ್ಕೆ ಕೆಲಸ ಮಾಡಿದವರು ಯಾರಾರು ಅನ್ನೋದರ ವಿವರ ಇಲ್ಲಿದೆ ನೋಡಿ. ಈ ಚಿತ್ರ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ಮೂಡಿ ಬರುತ್ತಿದೆ. ಯೋಗಾನಂದ್‌ ಮುದ್ದಾನ್‌ ಅವರು ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.  ಚಿತ್ರಕ್ಕೆ ಸುಧಾಕರ್‌ ಎಸ್‌ ರಾಜ್‌, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್‌ ತರುಣ್‌ ಕುಮಾರ್‌ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್‌ ಸಂಕಲನವಿದೆ.

ಇನ್ನು ಶರಣ್ ಅಂದರೆ ಕಾಮಿಡಿ ಚಿತ್ರಗಳನ್ನು ಕೊಡುವವನು ಎಂದು ಹೇಳಲಾಗುತ್ತಿದ. ಅದೇ ರೀತಿಯ ಕಾಮಿಡಿ ಕೂಡ ಈ ಚಿತ್ರದಲ್ಲಿಯೂ ಮುಂದುವರೆಯಲಿದೆ. 


Find Out More:

Related Articles:

Unable to Load More