ಹರಿಪ್ರಿಯಾ ಅವರು ಅಭಿಮಾನಿಗಳಿಗೆ ನೀಡಿದ ಸವಾಲು ಏನು?

frame ಹರಿಪ್ರಿಯಾ ಅವರು ಅಭಿಮಾನಿಗಳಿಗೆ ನೀಡಿದ ಸವಾಲು ಏನು?

somashekhar
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಸದ್ಯಕ್ಕೆ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಿದ್ದಾರೆ. ಅಲ್ಲದೇ ಅವರು ಇದೀಗ ವಿದೇಶ ಪ್ರವಾಸದಲ್ಲಿದ್ದಾರೆ. ಬಾರಿ ಬಾಲಿ ದ್ವೀಪದ ಕಡೆ ಪ್ರಯಾಣ ಬೆಳೆಸಿರೋ ಅವರು ಅಲ್ಲಿನ ಸುಂದರ ತಾಣಗಲ್ಲಿ ಸುತ್ತಾಡುತ್ತಿದ್ದಾರೆ. ಇದೀಗ ಹರಿಪ್ರಿಯಾ ಅವರು ತಮ್ಮ ಅಭಿಮಾನಿಗಳಿಗೆ ಒಂದು ಸವಾಲು ನೀಡಿದ್ದಾರೆ.

ಇಂಡೋನೇಷ್ಯಾದ ಸುಂದರ ತಾಣಗಳಿಗೆ ಭೇಟಿ ಮಾಡಿದ ನೆನಪಿಗೆ ಅವರು ಫೋಟೊ ಕ್ಲಿಕ್ಕಿಸುತ್ತಿದ್ದಾರೆ. ಒಂದಿಷ್ಟು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಹರಿಪ್ರಿಯಾ ಅವರು ಇಂಡೋನೇಷ್ಯಾದಲ್ಲಿ ಕೈಗೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಎಡಗೈಗೆ ಟ್ಯಾಟೋ ಹಾಕಿಸಿಕೊಳ್ಳುತ್ತಿರುವ ಫೋಟೊವನ್ನು ಹರಿಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಹರಿಪ್ರಿಯಾ ಹಾಕಿಕೊಂಡಿರುವ ಟ್ಯಾಟು ಬಗ್ಗೆ ಸಾಕಷ್ಟು ಮಂದಿ ಕಮೆಂಟ್ಸ್ ಮಾಡುತ್ತಿದ್ದಾರೆ. ಅನೇಕರು ಅಮ್ಮ ಅಂತ ಹಾಕಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಹರಿಪ್ರಿಯಾ ಅಂತ ಹಾಕಿಸಿಕೊಂಡಿದ್ದಾರೆಎಂದು ಹೇಳುತ್ತಿದ್ದಾರೆ. ಆದ್ರೆ ಹರಿಪ್ರಿಯಾ ಮಾತ್ರ ಟ್ಯಾಟೂ ಬಗ್ಗೆ ಏನು ಅಂತ ರಿವೀಲ್ ಮಾಡಿಲ್ಲ. ಆದರೆ ಅವರು ಕುಟುಂಬದ ಜೊತೆ ಬಾಲಿಯಲ್ಲಿ ಜಾಲಿ ಮಾಡುತ್ತಿರುವ ಹರಿಪ್ರಿಯಾ ಸುಂದರ ತಾಣಗಳನ್ನು ಸುತ್ತಾಡುತ್ತಿದ್ದಾರೆ.

ಅಲ್ಲಿಯ ಫುಡ್ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಎಲ್ಲಾ ಅಪ್ ಡೇಟ್ ಗಳನ್ನು ನೀಡುತ್ತಿದ್ದಾರೆ. ಸುಂದರ ಸ್ಥಳದಲ್ಲಿ ಪೋಟೋವನ್ನು ಕ್ಲಿಕ್ಕಿಸಿಕೊಂಡು ಅಪ್ ಡೇಟ್ ಮಾಡುತ್ತಿದ್ದಾರೆ. ಹರಿಪ್ರಿಯಾ ಅಭಿನಯದ ಸಾಕಷ್ಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಸದ್ಯ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಬಿಚ್ಚುಗತ್ತಿ, ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾಸಂಗಮ ಚಿತ್ರಗಳು ರಿಲೀಸ್ ಗೆ ರೆಡೆಯಾಗಿವೆ.

ಹರಪ್ರಿಯಾ ಅಭಿನಯದ 'ಬೆಲ್ ಬಾಟಂ' ಸಿನಿಮಾ 150 ದಿನಗಳ ಪ್ರದರ್ಶನ ಕಂಡಿದೆ. ಸಾಕಷ್ಟು ಸಿನಿಮಾಗಳು ಹರಿಪ್ರಿಯಾ ಹುಡುಕಿಕೊಂಡು ಬರುತ್ತಿವೆ. ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಮೊದಲೆ ಜಾಲಿ ಟ್ರಿಪ್ ಮುಗಿಸುವ ಪ್ಲಾನ್ ಮಾಡಿದ್ದಾರೆ.


Find Out More:

Related Articles:

Unable to Load More