ರಶ್ಮಿಕಾ ಕೈ ಹಿಡಿಯೋ ಹುಡುಗ  ಹೇಗಿರಬೇಕು ಗೊತ್ತಾ?

frame ರಶ್ಮಿಕಾ ಕೈ ಹಿಡಿಯೋ ಹುಡುಗ ಹೇಗಿರಬೇಕು ಗೊತ್ತಾ?

somashekhar
ಬೆಳಗೆದ್ದು ಯಾರ ಮುಖವಾ ನಾನು ನೋಡಿಲಿ ಅನ್ನೋ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಜಗತ್ತಿಗೆ ಪರಿಚಯವಾದ ರಶ್ಮಿಕಾ ಮಂದಣ್ಣ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಅವರು ತಮ್ಮ ವುಡ್ ಬಿ ಹೇಗಿರಬೇಕು ಎನ್ನುವ ಮಾಹಿತಿಯನ್ನು ಬಿಟ್ಟು ಕೊಟ್ಟಿದ್ದಾರೆ.


ಹೌದು, ರಶ್ಮಿಕಾ ಅವರು ತಮ್ಮನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಅನ್ನೋದಕ್ಕೆ ಉತ್ತರ ನೀಡಿದ್ದಾರೆ. ಡಿಯರ್ ಕಾಮ್ರೆಡ್ ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಹೀಗಾಗಿ ರಶ್ಮಿಕಾ ಅವರು ಪ್ರಮೊಶನ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ವುಡ್ ಬಿ ಬಗ್ಗೆಯೂ ಮಾತನಾಡಿದ್ದಾರೆ. 


"ನನ್ನನ್ನು ಮದುವೆಯಾಗುವ ಹುಡುಗ ಒಳ್ಳೆಯ ವ್ಯಕ್ತಿಯಾಗಿರಬೇಕು. ನನ್ನನ್ನು ತುಂಬಾ ಇಷ್ಟ ಪಡಬೇಕು. ಜೊತೆಗೆ ಅವರ ನಡವಳಿಕೆ ನನಗೆ ಇಷ್ಟವಾಗಬೇಕು. ಅವರು ನನ್ನ ಇಷ್ಟದ ಬಗ್ಗೆ ಕೇಳದಿದ್ದರೂ ಪರವಾಗಿಲ್ಲ. ಆದರೆ ನನ್ನ ಬಳಿ ಸುಳ್ಳು ಹೇಳಬಾರದು ಎಂದಿರುವ ರಶ್ಮಿಕಾ, ವಯಸ್ಸಿನ ಅಂತರದ ಬಗ್ಗೆ ತೊಂದರೆ ಇಲ್ಲ. ಆದರೆ ರೋಮ್ಯಾಂಟಿಕ್ ಆಗಿ ಇರಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


Find Out More:

Related Articles:

Unable to Load More