ಕೊನೆಗೂ 'ಪೈಲ್ವಾನ್' ಡೇಟ್ ಫಿಕ್ಸ್!

somashekhar
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರವನ್ನು ನೋಡೋಕೆ ಅಭಿಮಾನಿಗಳು ಕಾತುರದಿಂದಲೇ ಕಾಯುತ್ತಿದ್ದಾರೆ. ಈ ಕಾತುರಕ್ಕೆ ಕೊನೆ ಯಾವಾಗ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿದೆ, ಹೌದು ಪೈಲ್ವಾನ್ ಸೆಪ್ಟೆಂಬರ್ ತಿಂಗಳಲ್ಲೇ ತೆರೆ ಮೇಲೆ ಅಬ್ಬಿರಿಸಲಿದ್ದಾನೆ.


ಈ ಹಿಂದೆ ಆಗಸ್ಟ್ 9ಕ್ಕೆ ಪೈಲ್ವಾನ್ ಚಿತ್ರವನ್ನು ತೆರೆ ಮೇಳೆ ತರೋಕೆ ಮುಂದಾಗಿದ್ದರು. ಆದರೆ ಅದನ್ನು ಪೋಸ್ಟ್ ಪೋನ್ ಮಾಡಲಾಗಿತ್ತು. ನಂತರ ಕಿಚ್ಚನ ಹುಟ್ಟುಹಬ್ಬದ ದಿನದಂದು ಅಂದರೆ ಸೆಪ್ಟೆಂಬರ್ 2 ರಂದು ಬರ್ಥಡೇ ಗಿಫ್ಟ್ ಆಗಿ ತೆರೆ ಮೇಲೆ ತರಬೇಕು ಎನ್ನುವ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ.


ಆದರೆ ಇದೀಗ ಅದೂ ಪೋಸ್ಟ್ ಪೋನ್ ಆಗಿ. ಕೊನೆಗೆ ಸೆಪ್ಟೆಂಬರ್ 12 ರಂದು ಪೈಲ್ವಾನ್ ಚಿತ್ರ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಧಾನವಾಗಿ ಸಾಗುತ್ತಿದ್ದು, ಈ ಕಾರಣದಿಂದ ಪೈಲ್ವಾನ್ ಎಂಟ್ರಿ ಲೇಟ್ ಆಗುತ್ತಿದೆ ಎಂದು ಚಿತ್ರತಂಡ ಹೇಳೀಕೊಂಡಿದೆ.



Find Out More:

Related Articles: