ಇಶಾನ್ ಗೆ ಜೋಡಿಯಾಗಿ ಅನನ್ಯಾ ಪಾಂಡೆ!

somashekhar

ನಟಿ ಜಾಹ್ನವಿ ಕಪೂರ್ ಅವರು ಧಡಕ್ ಸಿನಿಮಾ ಮಾಡಿದ್ದು ನೆಮಿಗೆಲ್ಲ ಗೊತ್ತೇ ಇದೆ. ಅದಾದ ನಂತರ ಜಾಹ್ನವಿ ನಾಲ್ಕು ಸಿನಿಮಾಗಳಲ್ಲಿ ನಟಸೋಕೆ ಜೈ ಎಂದಿದ್ದಾರೆ. ಆದರೆ ವಿಷಯ ಏನಪ್ಪ ಅಂದರೆ, ಇಶಾನ್ ಖಟ್ಟರ್ ಅವರು ಸಹ ಧಡಕ್ ಸಿನಿಮಾದಲ್ಲಿ ನಟಿಸಿದ್ದರು.ಆದರೆ ಇದೀಗ ತಮ್ಮ ಎರಡನೇ ಸಿನಿಮಾ ಘೋಷಣೆ ಮಾಡಿದ್ದಾರೆ. 


ಹೌದು, ಇಶಾನ್ ಜೊತೆಗೆ ಇದೀಗ ಜೋಡಿಯಾಗು ಅನನ್ಯಾ ಪಾಂಡೆ ಅವರು ನಟಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರೋದು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹತ್ತಿರ ಅಸಿಸ್ಟಂಟ್ ಆಗಿದ್ದ ವರುಣ್ ವರ್ಮಾ. ಅಲಿ ಅಬ್ಬಾಸ್ ಜಾಫರ್ ಅವರು ಇದನ್ನು ನಿರ್ಮಾಣ ಮಾಡುತ್ತಿದ್ದಾರೆ. 


ಈ ಚಿತ್ರ ರೋಮ್ಯಾಂಟಿಕ್ ಚಿತ್ರ ಎನ್ನಲಾಗುತ್ತಿದೆ. ಅಲಿ ಹಾಗೂ ಇಶಾನ್ ಅವರು ಈ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಈ ಚಿತ್ರದ ಚಿತ್ರೀಕರಣ ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. 



Find Out More:

Related Articles: