ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಭ್ರಮೆ, ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ

somashekhar

ಮಂಗಳೂರು: ಅಕ್ರಮ ಹಣ ಪ್ರಕರಣದಲ್ಲಿ ತಿಹಾರ್ ಜೈಲಿನ ಅನುಭವ ಪಡೆದು ಬಂದಿರುವ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಿ ಬಿಡುತ್ತೇನೆ ಎಂಬ ಭರವಸೆಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ. ಅದು ಅವರ ಭ್ರಮೆ. ಹೀಗೆಂದು ರಾಜ್ಯದ ಪ್ರಭಾವಿ ಸಚಿವ ರೊಬ್ಬರು  ಹೇಳಿಕೆ ನೀಡಿದ್ದು, ಡಿ ಕೆ ಶಿವಕುಮಾರ್ ಗರಂ ಆಗಿದ್ದಾರೆ. ಹಾಗಾದರೆ ಆ ಹೇಳಿಕೆ ನೀಡಿದ ಸಚಿವರು ಯಾರು ಗೊತ್ತಾ!? ಮುಂದೆ ಓದಿ. 

ಶಾಸಕ ಡಿ. ಕೆ ಶಿವಕುಮಾರ್​ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ, ಕಾಂಗ್ರೆಸ್ ರಾಜ್ಯದಲ್ಲಿ ಛಿದ್ರವಾಗಿದ್ದರೂ ಭಂಡತನ ಬಿಟ್ಟಿಲ್ಲ  ಎಂದು ಹೇಳಿರುವುದು ಸಚಿವ ಈಶ್ವರಪ್ಪ. ಡಿಕೆಶಿ ಮತ್ತು ರಾಜ್ಯ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಕರಾವಳಿ ನಗರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ. ಕೆ ಶಿವಕುಮಾರ್​ ಅವರಿಗೆ ಮೆರವಣಿಗೆ ಮಾಡಲು ಏನು ಕೇಸಿನಿಂದ ಹೊರ ಬಂದಿದ್ದಾರೆಯೇ ? ಮರ್ಯಾದೆ ಇಲ್ಲದೆ ಮೆರವಣಿಗೆ ಮಾಡ್ತಿದ್ದಾರೆ. ಜಾಮೀನು ಪಡೆದು ಅಲ್ಲವೇ ಹೊರಗೆ ಬಂದಿರೋದು? ಎಂದು ಪ್ರಶ್ನಿಸಿದ್ದಾರೆ. ಜನರು ಉಗೀತಿದ್ದಾರೆ. ಈಗಾಗ್ಲೇ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಹೊರಬಂದಿದ್ದಾರೆ ಎಂದು ಹೇಳಿದರು. ವಿರೋದ ಪಕ್ಷದ ನಾಯಕ ಸಿದ್ದ ರಾಮಯ್ಯ ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ.  ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಹುಡುಕುವಂಥ ಸ್ಥಿತಿಯಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ಡಿಕೆಶಿ ಪರವಾಗಿ ಮೆರವಣಿಗೆ ನಡೆಸಿದ್ದಾರೆ ಎಂದು ತಿಳಿಸಿದರು.

ನಂತರ ಅನರ್ಹ ಶಾಸಕರ ಬಗ್ಗೆ ಇಂದು ತೀರ್ಪು ಬರಲಿದೆ. ಏನು ತೀರ್ಪು ಬರುತ್ತೋ ಆ ಪ್ರಕಾರ ನಡೆದುಕೊಳ್ತೇವೆ. ಶಾಸಕರ ರಾಜೀನಾಮೆ ಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಸತ್ಯ, ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯ ಮಾಡಲ್ಲ ಎಂದು ಕೆ. ಎಸ್. ಈಶ್ವರಪ್ಪ ಅನರ್ಹರ  ಪರವಾಗಿ ಬ್ಯಾಟ್ ಬೀಸಿದ್ದಾರೆ. ಉಪ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದು, ಸುಪ್ರೀಂ ಕೋರ್ಟ್ ಅನರ್ಹರ ಪ್ರಕರಣ ವಿಚಾರಣೆ ಮುಗಿಸಿ ತೀರ್ಪನ್ನು ಮಾತ್ರ ಕಾಯ್ದಿರಿಸಿದೆ.

Find Out More:

Related Articles: