ಸ್ಯಾಂಡಲ್ ವುಡ್ ಲೋಕದಲ್ಲಿ ಹವಾ ಸೃಷ್ಟಿಸುತ್ತಿದೆ ಈ ಚಾಲೆಂಜ್

frame ಸ್ಯಾಂಡಲ್ ವುಡ್ ಲೋಕದಲ್ಲಿ ಹವಾ ಸೃಷ್ಟಿಸುತ್ತಿದೆ ಈ ಚಾಲೆಂಜ್

somashekhar

ಸ್ಯಾಂಡಲ್ ವುಡ್ ಲೋಕದಲ್ಲಿ ಇದೀಗ ಹೊಸ ಚಾಲೆಂಜ್ ಓಡಾಡುತ್ತಿದೆ. ಅದೇನಪ್ಪ ಅಂದರೆ ಬಾಟಲ್ ಕ್ಯಾಪ್ ಚಾಲೆಂಜ್. ಹೌದು, ತಮ್ಮ ಕಾಲಿನಿಂದ ಬಾಟಲ್ ಮೇಲಿನ ಕ್ಯಾಪ್ ಒದ್ದು ಬಾಟಲ್ ಓಪನ್ ಮಾಡೋದು. ಇತ್ತೀಚೆಗಷ್ಟೇ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಹ ಈ ಚಾಲೆಂಜ್ ಸ್ವೀಕಾರ ಮಾಡಿದ್ದರು.

 

ಇದೀಗ ಸ್ಯಾಂಡಲ್ ವುಡ್ ಲೋಕದಲ್ಲಿ ಬಹಳಷ್ಟು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕಾರ ಮಾಡಿದ್ದಾರೆ. ಹೌದು ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಹಿಡಿದು ರಚಿತಾ ರಾಮ್, ಅರ್ಜುನ್ ಸರ್ಜಾ ತನಕ. ಅಷ್ಟೇ ಅಲ್ಲದೇ ಚಿರು ಸರ್ಜಾ ನಿಂದ ಹಿಡಿದು ಯುವ ರಾಜ್ ಕುಮಾರ್, ಕಿರಿಕ್ ಕೀರ್ತಿ ತನಕ ಬಹುತೇಕರು ಈ ಚಾಲೆಂಜ್ ಸ್ವೀಕಾರ ಮಾಡಿ ಆ ವಿಡಿಯೋ ಹಂಚಿಕೊಂಡಿದ್ದಾರೆ.

 

ಹೀಗಾಗಿ ಈ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ. ನಿಮಗೆಲ್ಲ ಗೊತ್ತೇ ಇರಬಹುದು. ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಫಿಟ್ ನೆಸ್ ಚಾಲೆಂಜ್ ಮಾಡಿದ್ದರು. ಇದೀಗ ಬಾಟಲ್ ಕ್ಯಾಪ್ ಚಾಲೆಂಜ್ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ.

 


Find Out More:

Related Articles:

Unable to Load More