ಶರ್ಮಿಳಾ ಮಾಂಡ್ರೆ ಸ್ವಿಮ್ ಸೂಟ್ ನಲ್ಲಿ!

somashekhar
ಸ್ಯಾಂಡಲ್ ವುಡ್ ಗೆ 'ಸಜನಿ' ಚಿತ್ರದ ಮೂಲಕ ಎಂಟ್ರಿ ಕೊಟ್ಟವಳು ಶರ್ಮಿಳಾ ಮಾಂಡ್ರೆ. ಅದಾದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಕೃಷ್ಣ' ಚಿತ್ರದಲ್ಲಿ ನಂತರ, ನೆನಪಿರಲಿ ಪ್ರೇಮ್ ಜೊತೆಗೆ 'ಧನ್ ಧನಾ ಧನ್ಚ ಚಿತ್ರದಲ್ಲಿ ನಟಿಸಿದ್ದರು. ಅದಾದ ಮೇಲೆ ಶಿವಣ್ಣ ಜೊತೆಗೆ ತೆರೆ ಹಂಚಿಕೊಂಡಿದ್ದರು.


ಆದರೆ ಕಳೆದ ಎರಡು ವರ್ಷಗಳಿಂದ ಶರ್ಮಿಳಾ ಮಾಂಡ್ರೆ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಹೌದು, ಶಿವರಾಜ್ ಕುಮಾರ್ ಜೊತೆಗೆ 'ಮಾಸ್ ಲೀಡರ್' ಚಿತ್ರದಲ್ಲಿ ಕಾಣಿಸಿಕೊಂಡ ನಂತರ, ಬೇರೆ ಯಾವ ಸಿನಿಮಾದಲ್ಲೂ ಬಣ್ಣ ಹಚ್ಚಿರಲಿಲ್ಲ. ಹೀಗಾಗಿ ಅವರ ಬಗ್ಗೆ ಎಲ್ಲರಿಗೂ ಕುತೂಹಲ ಮನೆ ಮಾಡಿತ್ತು.


ಶರ್ಮಿಳಾ ಇದೀಗ ಇಂಡೋನೇಷ್ಯಾ ಪ್ರವಾಸದಲ್ಲಿ ಇದ್ದಾರೆ. ಕೆಂಪು ಬಣ್ಣದ ಸ್ವಿಮ್ ಸೂಟ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿದರೆ ಪಡ್ಡೆ ಹುಡುಗರು ನಿಜಕ್ಕೂ ಬೆಚ್ಚಿ ಬೀಳ್ತಾರೆ.ಅಲ್ಲದೇ ಸ್ವತಃ ಶರ್ಮಿಳಾ ಅವರೇ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.


Find Out More:

Related Articles: