ಪೊಗರು ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿದ್ದಾರೆ. ವಿಭಿನ್ನ ಲುಕ್ಗಳ ಮೂಲಕ ಪೊಗರು ಹವಾ ಕ್ರಿಯೇಟ್ ಮಾಡಿದೆ. ಆದರೆ ವಿಷ್ಯ ಏನಪ್ಪ ಅಂದರೆ, ಇದೀಗ ಚಿತ್ರದಿಂದ ಖ್ಯಾತ ನಟ ಒಬ್ಬರು ಹಿಂದೆ ಸರಿದಿದ್ದಾರೆ ಎನ್ನುವ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಹೌದು, ಈಗಾಗಲೇ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚೋಕೆ ರೆಡಿ ಆಗಿರೋ ಟಾಲಿವುಡ್ ನಟ ಜಗಪತಿ ಬಾಬು, ಪೊಗರು ಚಿತ್ರದಲ್ಲೂ ಬಣ್ಣ ಹಚ್ಚಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೀಗ ಕೆಲ ಕಾರಣಗಳನ್ನು ನೀಡಿ ತೆಲುಗು ನಟ ಪೊಗರು ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರೆ.
ಇದೇ ಕಾರಣಕ್ಕೆ ಜಗಪತಿ ಬಾಬು ಜಾಗಕ್ಕೆ ಬಾಲಿವುಡ್ ನಟ ಆಗಮಿಸುತ್ತಿದ್ದಾರೆ. ಹೌದು 'ರುಸ್ತುಂ' ಚಿತ್ರದಲ್ಲಿ ಅಭಿನಯಿಸಿದ್ದ ವಿವೇಕ್ ಓಬೇರಾಯ್ ಅವರನ್ನು ಜಗಪತಿ ಬಾಬು ನಿರ್ವಹಿಸಬೇಕಾದ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಮಿಂಚಿದ್ದ ವಿವೇಕ್ ಒಬೆರಾಯ್ ನೆಗೆಟಿವ್ ರೋಲ್ನಲ್ಲಿ ಕಾಣಿಸಲಿದ್ದಾರೆ ಎನ್ನಲಾಗಿದೆ.