ಅಕ್ಕಿನೇಣಿ ಕುಡಿಗೆ ರಶ್ಮಿಕಾ ಮಂದಣ್ಣ ನಾಯಕಿ?

frame ಅಕ್ಕಿನೇಣಿ ಕುಡಿಗೆ ರಶ್ಮಿಕಾ ಮಂದಣ್ಣ ನಾಯಕಿ?

somashekhar

ಸ್ಯಾಂಡಲ್ ವುಡ್ ಸುಂದರಿ ರಶ್ಮಿಕಾ ಮಂದಣ್ಣಗೆ ಒಂದರ ಹಿಂದರಂತೆ ಒಂದು ಅವಕಾಶಗಳು ಹರಿದು ಬರುತ್ತಲೇ ಇವೆ. ಕಿರಿಕ್ ಪಾರ್ಟಿ ಚಿತ್ರ ಹಿಟ್ ಆದ ಮೇಲೆ ರಶ್ಮಿಕಾ ಅವರ ಚಿತ್ರ ಜಗತ್ತಿನ ಹೆಬ್ಬಾಗಿಲು ತೆರೆಯಿತು. ಈಗಾಗಲೇ ಮಹೇಶ್ ಬಾಬು, ವಿಜಯ್ ಹಾಗೂ ಅಲ್ಲು ಅರ್ಜುನ್ ಅವರ ಜೊತೆ ಆಫರ್ ಗಿಟ್ಟಿಸಿಕೊಂಡ ರಶ್ಮಿಕಾ ಇದೀಗ ಮತ್ತೊಂದು ಆಫರ್ ಅವಳನ್ನು ಹುಡುಕಿಕೊಂಡು ಬಂದಿದೆ. 


ಹೌದು, ಯುವ ನಟ ಅಖಿಲ್ ಅಕ್ಕಿನೇನಿ ಅವರ ಚಿತ್ರಕ್ಕೆ ಕಿರಿಕ್ ಬೆಡಗಿಗೆ ಆಫರ್ ಬಂದಿದೆಯಂತೆ. ಬೊಮ್ಮರಿಲು ನಿರ್ದೇಶನ ಮಾಡಿದ್ದ ಭಾಸ್ಕರ್ ಅವರು ಇದೀಗ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಕಾಣಿಸಲಿದ್ದಾರೆ. ನಾಯಕಿ ಪಾತ್ರಕ್ಕೆ ರಶ್ಮಿಕಾ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. 


ರಶ್ಮಿಕಾ ಈಗಾಲೇ ಬ್ಯುಸಿ ಆಗಿದ್ದಾರೆ. ಸೂಪರ್ ಸ್ಟಾರ್ಗಳ ಚಿತ್ರಗಳಿಗೆ ಈಗಾಗಲೇ ಸಹಿ ಮಾಡಿದ್ದಾರೆ.  ಇದರ ಜೊತೆ ಜೊತೆಗೆ ತಮಿಳಿನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಅಷ್ಟೇ ಅಲ್ಲ ಕನ್ನಡದ ಪೊಗರು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಟಾಲಿವುಡ್ನ ಸರಿಲೇರು ನೀಕೆವ್ವರು, ಬೀಷ್ಮ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿ ಇರುವ ರಶ್ಮಿಕಾಗೆ ಈ ನಡುವೆ ಅಕ್ಕಿನೇನಿ ಕುಡಿಯ ಚಿತ್ರಕ್ಕೆ ಬುಲಾವ್ ಬಂದಿರೋದು ವಿಶೇಷ.

ಅಷ್ಟಕ್ಕೂ ರಶ್ಮಿಕಾ ಈ ಆಫರ್ ಅನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.



Find Out More:

Related Articles:

Unable to Load More