ಗಣೇಶ್ ಹಟ್ಟುಹಬ್ಬ: ಗೀತಾ ಚಿತ್ರದ ಟೀಸರ್ ಬಿಡುಗಡೆ

somashekhar
ಇತ್ತೀಚೆಗೆ ನಾಯಕನಟರ ಹುಟ್ಟು ಹಬ್ಬದ ದಿನವೇ ಅವರು ಅಭಿನಯಿಸುತ್ತಿರುವ ಚಿತ್ರದ ಟೀಸರ್ ಹಾಗೂ ಟ್ರೇಲರ್ ಗಳು ಬಿಡುಗಡೆ ಆಗುತ್ತಿರೋದು ಸಾಮಾನ್ಯ. ಅಂದಹಾಗೆ ಇದೀಗ, ಜುಲೈ ೨ ರಂದು ಗಣೇಶ್ ಅವರ ಹುಟ್ಟು ಹಬ್ಬ. ಇದೇ ದಿನ ಗೀತಾ ಚಿತ್ರ ತಂಡ ಗಣೇಶ್ ಅವರಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. 


ಹೌದು, ಗಣೇಶ್ ಅಭಿನಯದ ಗೀತಾ ಚಿತ್ರದ ಟೀಸರ್ ಗಣೇಶ್ ಅವರ ಹುಟ್ಟು ಹಬ್ಬದಂದೇ ಬಿಡುಗಡೆ ಆಗುತ್ತಿದೆ. ಇಷ್ಟು ದಿನಗಳ ಕಾಲ ಚೆಂದದ ಪೋಸ್ಟರ್ ಮುಖಾಂತರ ಗಮನ ಸೆಳೆದಿದ್ದ ಸಿನಿಮಾ ಇನ್ನೇನು ಟೀಸರ್ ಹೊರ ಬಂದ ಮೇಲೆ ಮತ್ತೊಮ್ಮೆ ಸದ್ದು ಮಾಡಲು ರೆಡಿಯಾಗಿದೆ. 


ಜುಲೈ ೧ ರ ಸಂಜೆ ೬ ಗಂಟೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈ ಮೂಲಕ ಉಡುಗೊರೆ ನೀಡಲು ಚಿತ್ರತಂಡ ಬಯಸಿದೆ. ಅಂದಹಾಗೆ ಗೀತಾ ಚಿತ್ರವನ್ನು ವಿಜಯ ನಾಗೇಂದ್ರ ಅವರು ನಿರ್ದೇಶನನ ಮಾಡುತ್ತಿದ್ದಾರೆ. ಈ ಹಿಂದೆ ರಾಜಕುಮಾರ ಸೇರಿಂದತೆ ಅನೇಕ ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದರು. 


Find Out More:

Related Articles: