
ರಾಬರ್ಟ್ ನಲ್ಲಿ ದರ್ಶನ್ - ವಿನೋದ್ ಪ್ರಭಾಕರ್
ದರ್ಶನ್ ಅಭಿಮಾನಿಗಳ ಬಹು ನಿರೀಕ್ಷಿತ ಚಿತ್ರ ರಾಬರ್ಟ್. ಈ ಚಿತ್ರದ ಥೀಮ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಹವಾ ಕ್ರಿಯೇಟ್ ಮಾಡಿತ್ತು. ಇದೀಗ ಸಿನಿಮಾದ ಮತ್ತೊಂದು ಲುಕ್ ಲೀಕ್ ಆಗಿದೆ. ಈ ಚಿತ್ರದಲ್ಲಿ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಲುಕ್ ರಿವೀಲ್ ಆಗಿದೆ.
ಹೌದು, ರಾಬರ್ಟ್ ಸಿನಿಮಾದ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಒಟ್ಟಿಗೆ ಬೈಕ್ ಮೇಲೆ ನಿಂತಿರುವ ಪೋಟೋ ಒಂದು ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಮೂಲಕ ಅವರಿಬ್ಬರ ಲುಕ್ ರಿವೀಲ್ ಆಗಿತ್ತು.
ಇದನ್ನು ಸ್ಟಿಲ್ ಫೋಟೊ ಶೂಟ್ ಸಮಯದಲ್ಲಿ ತೆಗೆದಿದ್ದು ಎನ್ನಲಾಗಿದೆ. ಆದರೆ ಈ ಚಿತ್ರವನ್ನು ಯಾರು ಲೀಕ್ ಮಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಚಿತ್ರದ ನಿರ್ದೇಶಕರು ಮಾತ್ರ ಈ ಲುಕ್ ಕುರಿತು ಮೌನಕ್ಕೆ ಜನರಿದ್ದಾರೆ.