ಐ ಲವ್ ಯೂ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆ
ಇದೀಗ ಮೊದಲ ಬಾರಿಗೆ ರಚಿತಾ ರಾಮ್ ಜೊತೆ ಉಪೇಂದ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು ಐ ಲವ್ ಯು. ಈ ಚಿತ್ರ ಇದೀಗ ಭಾರೀ ಕುತೂಹಲವನ್ನು ಉಂಟು ಮಾಡಿದೆ. ಜೂನ್ 14 ರಂದು ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಅದೂ ಏಕಕಾಲದಲ್ಲಿಯೇ ಬಿಡುಗಡೆ ಆಗಲಿದೆ.
ಇದೀಗ ವಿಷಯ ಏನಪ್ಪ ಅಂದರೆ, ಉಪೇಂದ್ರ ಮತ್ತು ರಚಿತಾ ಜೊತೆಯಾಗಿ ನಟಿಸಿರೋ ಈ ಚಿತ್ರದ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿಂದೆ ಟ್ರೈಲರ್ ಹಾಗೂ ಕೆಲ ಲಿರಿಕಲ್ ಹಾಡುಗಳಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಐ ಲವ್ ಯೂ ಚಿತ್ರ, ಇವತ್ತು ಮತ್ತೊಂದು ಲಿರಿಕ್ ಸಾಂಗ್ ರಿಲೀಸ್ ಮಾಡಿದೆ.
ಅಷ್ಟಕ್ಕೂ ಆ ಹಾಡು ಯಾವುದು ಅಂತೀರಾ? ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ. ಇದೇ ಆ ಹಾಡು. ಈ ಹಾಡು ಇದೀಗ ರಿಇಲೀಸ್ ಆಗಿದೆ. ಅಷ್ಟಕ್ಕೂ ಈ ಹಾಡಿನ ವಿಶೇಷತೆ ಎಂದರೆ, ಪ್ರೀತಿಯ ಬಲೆಯಲ್ಲಿ ಸಿಕ್ಕಿ, ಅಂತಿಮವಾಗಿ ಪ್ರೀತಿ ಸಿಗದಿದ್ದಾಗ ಭಾವನೆ ತುಂಬಿ ಹಾಡುವ ಹಾಡಿದು ಎನ್ನಲಾಗಿದೆ. ಪ್ರತಿಯೊಂದು ಜೀವಿಯಲ್ಲೂ ಒಂದು ಮನಸ್ಸಿರುತ್ತದೆ. ಅದೂ ಪ್ರೀತಿಗಾಗಿ ಹಂಬಲಿಸುತ್ತದೆ ಅನ್ನೋ ಸಂದೇಶವನ್ನು ಈ ಹಾಡು ಹೊತ್ತು ಹೊಂದಿದೆ. ಇಂದ್ರಾ. ಕೆ.ಎಂ ಲಿರಿಕ್ಸ್ ಬರೆದಿದ್ದು, ಅನುರಾಧ ಭಟ್ ಹಾಡಿದ್ದಾರೆ.