ದೇಶದಲ್ಲಿ 3.0 ಅನ್ ಲಾಕ್ ಪ್ರಕ್ರಿಯೆ ಆರಂಭ: ಇದರ ಮಾರ್ಗಸೂಚಿಯಲ್ಲಿ ಸರ್ಕಾರ ಏನು ಹೇಳಿದೆ..?

Soma shekhar
ಕೋವಿಡ್  ನಿಂದ ದೇಶದ ಜನರಿಗೆ ರಕ್ಷಣೆಯನ್ನು ನೀಡುವ ಸಲುವಾಗಿ ದೇಶದಲ್ಲಿ ನಾಲ್ಕು ಬಾರಿ ಲಾಕ್ ಡೌನ್ ಅನ್ನು ಮಾಡಲಾಗಿತ್ತು. ಈ ಲಾಕ್ ಡೌನ್ ಇಂದ ಸಾಕಷ್ಟು ಉದ್ಯಮಗಳು ನಷ್ಟಕ್ಕೆ ಸಿಲುಕಿದವು ಹಾಗೂ ಅದೇಷ್ಟೋ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದರು, ಈ ಮೂಲಕ ದೇಶದ ಆರ್ಥಿಕ ಸ್ಥಿತಿಗತಿ ಶೋಚನೀಯವಾಯಿತ್ತು. ಇದಕ್ಕೆ ಕೇಂದ್ರ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡಲಾಗುತ್ತಿದೆ. ಅದರಂತೆ ಈ ಬಾರಿ 3.0 ನೇ ಅನ್ ಲಾಕ್ ಮಾಡಲಾಯಿತು ಹಾಗೂ ಇದಕ್ಕೆ ಸಂಬಂದಿಸಿದ ಮಾರ್ಗಸೂಚಿಯನ್ನೂ ಕೂಡ ಬಿಡುಗಡೆಯನ್ನು ಮಾಡಿದೆ. ಅಷ್ಟಕ್ಕೂ ಈ 3.0 ಅನ್ ಲಾಕ್ ಪ್ರಕ್ರಿಯೆಯ ಮಾರ್ಗ ಸೂಚಿಯಲ್ಲಿ ಇರುವ ಅಂಶಗಳೇನು.


ಕೇಂದ್ರ ಸರ್ಕಾರದಿಂದ ಅನ್ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಆಗಿದ್ದು, ಆಗಸ್ಟ್ 5ರಿಂದ ದೇಶಾದ್ಯಂತ ಯೋಗ ಶಿಬಿರ, ಜಿಮ್ ಕೇಂದ್ರಗಳು ತೆರೆಯಲಿವೆ. ಆದರೆ ಆಗಸ್ಟ್ 31ರವರೆಗೆ ಶಾಲಾ-ಕಾಲೇಜ್ ಹಾಗೂ ತರಬೇತಿ ಕೇಂದ್ರಗಳು ತೆರೆಯುವಂತಿಲ್ಲ. ಇನ್ನು ರಾತ್ರಿ ವೇಳೆ ವಿಧಿಸಿದ್ದ ಕರ್ಫ್ಯೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.


ಈ ನಿಯಮಾವಳಿಗಳು ದೇಶದಲ್ಲಿನ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಗಸ್ಟ್ 01ರಿಂದ ಜಾರಿಗೆ ಬರಲಿದೆ. ಇದರ ಪ್ರಕಾರ ಯೋಗ ತರಬೇತಿ ಕೇಂದ್ರಗಳನ್ನು ಹಾಗೂ ಜಿಮ್ ಗಳನ್ನು ಆಗಸ್ಟ್ ತಿಂಗಳಿನಿಂದ ತೆರೆಯಲು ಅನುಮತಿ ನೀಡಲಾಗಿದೆ.


ಮತ್ತು ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ನಿರ್ಬಂಧವನ್ನು ಆಗಸ್ಟ್ 01ರಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ದೇಶಿಯ ವಿಮಾನ ಸೇವೆ, ಕೆಲವು ರೈಲುಗಳು ಸಂಚಾರ ನಡೆಸುತ್ತಿವೆ.

ಕೇಂದ್ರ ಗೃಹ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಜಿಮ್, ಚಿತ್ರಮಂದಿರ, ಧಾರ್ಮಿಕ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.


ಅಂತರಾಷ್ಟ್ರೀಯ ವಿಮಾನಗಳ ಸಂಚಾರ ಜುಲೈ 31ರ ತನಕ ನಿಷೇಧಿಸಲಾಗಿದೆ. ಹಲವು ಷರತ್ತುಗಳೊಂದಿಗೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿಯನ್ನು ನೀಡಲಾಗಿದೆ.

ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.ಯೋಗ ಕೇಂದ್ರಗಳು ಹಾಗೂ ಜಿಮ್ ಗಳನ್ನು ಆಗಸ್ಟ್ 5ರಿಂದ ತೆರೆಯಲು ಅನುಮತಿ ನೀಡಲಾಗಿದೆ.


ಮತ್ತು ಇವುಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಸದ್ಯದಲ್ಲೇ ಸ್ಟ್ಯಾಂಡರ್ಡ್ ಅಪರೇಷನ್ ಪ್ರೊಸೀಜರ್ ಪ್ರಕಟಿಸಲಿದೆ.

ಸೂಕ್ತ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಹಾಗೂ ಇನ್ನಿತರ ಆರೋಗ್ಯ ನಿಯಮಾಳಿಗಳನ್ನು ಪಾಲಿಸಿಕೊಂಡು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಆಚರಣೆಯನ್ನು ನಡೆಸಲು ಅನ್ ಲಾಕ್ 3.0 ನಿಯಮಾವಳಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.


ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಲಾ ಕಾಲೇಜುಗಳನ್ನು ಆಗಸ್ಟ್ 31ರವರೆಗೆ ತೆರೆಯದೇ ಇರಲು ಕೇಂದ್ರ ಸರಕಾರ ನಿರ್ಧರಿಸಿದೆ.

ವಂದೇ ಭಾರತ್ ವಿಷನ್ ನಡಿಯಲ್ಲಿ ಕಾರ್ಯಾಚರಿಸುವ ವಿಮಾನಗಳಿಗೆ ಮಾತ್ರವೇ ಅಂತಾರಾಷ್ಟ್ರೀಯ ಸಂಚಾರಕ್ಕೆ ಸದ್ಯಕ್ಕೆ ಅನುಮತಿ ನೀಡಲಾಗಿದೆ. ಇನ್ನು ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿದಂತೆ ದೇಶದ ಉಳಿದೆಲ್ಲಾ ಕಡೆಗಳಲ್ಲಿ ಈ ಕೆಳಗಿನ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಅನ್ ಲಾಕ್ 3.0 ನಿಯಮಾವಳಿಗಳಲ್ಲಿ ಅನುಮತಿ ನೀಡಲಾಗಿದೆ.


ಮೆಟ್ರೋ ರೈಲು ,ಚಿತ್ರ ಮಂದಿರಗಳು, ಸ್ವಿಮ್ಮಿಂಗ್ ಪೂಲ್ಸ್, ಮನರಂಜನಾ ಪಾರ್ಕ್ ಗಳು, ಥಿಯೇಟರ್ ಗಳು, ಬಾರ್ ಗಳು, ಆಡಿಟೋರಿಯಂಗಳು, ಸಭಾಂಗಣಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ.

ಯಾವುದೇ ರೀತಿಯ ಸಾಮಾಜಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮಗಳು ಮತ್ತು ಬೃಹತ್ ಪ್ರಮಾಣದ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿಲ್ಲ.

Find Out More:

Related Articles: