ಮತ್ತೊಂದು ರಿಮೇಕ್ ಚಿತ್ರವನ್ನು ಒಪ್ಪಿಕೊಂಡಿಲ್ಲ ಎಂದ ಶಿವಣ್ಣ!

Narayana Molleti

ವಯಸ್ಸು 55 ದಾಟಿದ್ರೂ ಶಿವಣ್ಣ ಇನ್ನೂ ತೆರೆ ಮೇಲೆ ಮಿಂಚುತ್ತಾ ಇದ್ದಾರೆ. ಇತ್ತೀಚೆಗಷ್ಟೇ ಕವಚ ಅನ್ನೋ ರಿಮೇಕ್ ಚಿತ್ರದಲ್ಲಿ ಅಭಿನಯಿಸಿದ್ದ ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದರು. ಕೆಲವರು ಶಿವಣ್ಣ ರಿಮೇಕ್ ಚಿತ್ರವನ್ನು ಒಪ್ಪಿಕೊಂಡಿದ್ದೇಕೆ ಅಂತ ಕೊಂಕು ತೆಗೆದಿದ್ದರೂ ಶಿವಣ್ಣ ಚಿತ್ರ ಚೆನ್ನಾಗಿದೆ ಹಾಗಾಗಿ ಒಪ್ಪಿಕೊಂಡೆ ಎಂದು ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಇದೀಗ ಶಿವಣ್ಣನ ಸುತ್ತ ಮತ್ತೊಂದು ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿಯಾದ್ರೂ ಏನು? ಇದಕ್ಕೆ ಶಿವಣ್ಣ ನೀಡಿದ ಪ್ರತಿಕ್ರಿಯೇ ಏನು ಅನ್ನೋದು ಇಲ್ಲಿದೆ ನೋಡಿ.


ಕವಚ ಅನ್ನೋ ರಿಮೇಕ್ ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ ನಂತರ, ವಿಶ್ವಾಸಂ ಅನ್ನೋ ರಿಮೇಕ್ ಚಿತ್ರವನ್ನು ಶಿವಣ್ಣ ಕೈಗೆತ್ತಿಕೊಂಡಿದ್ದಾರೆ ಅನ್ನೋ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿವೆ. ಆದರೆ ಶಿವಣ್ಣ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಹಾಗಾದ್ರೆ ಅವರು ಹೇಳಿದ್ದಾದ್ರೂ ಏನು ಬನ್ನಿ ನೋಡೋಣ


ನಾನು ಸದ್ಯಕ್ಕೆ ಯಾವುದೇ ರಿಮೇಕ್ ಚಿತ್ರದಲ್ಲಿ ನಟಿಸೋದಿಲ್ಲ. ಈಗಾಗಲೇ ನನ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ದ್ರೋಣ, ರಾಯಲ್ ಎನ್‌ಫೀಲ್ಡ್, ಭಜರಂಗಿ2. ಹೀಗೆ ಒಂದಕ್ಕಿಂತ ಒಂದು ಚಿತ್ರಗಳು ನನ್ನ ಕೈಯಲ್ಲಿರುವಾಗ ಮತ್ತೊಂದು ರೀಮೇಕ್ ಚಿತ್ರದಲ್ಲಿ ನನಗೆ ನಟಿಸೋಕೆ ಸಮಯವಾದರೂ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸದ್ಯಕ್ಕೆ ಮತ್ತೊಂದು ರಿಮೇಕ್ ಚಿತ್ರವನ್ನು ಕೈಗೆತ್ತಿಕೊಂಡಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.


ಶಿವಣ್ಣ ಇತ್ತೀಚೆಗೆ ಪ್ರಯೋಗಾತ್ಮಕ ಚಿತ್ರಗಳನ್ನು ಹೆಚ್ಚು ಬಯಸುತ್ತಿದ್ದಾರೆ. ಕವಚ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕೊನೆಗೂ ಕವಚ ಚಿತ್ರ ಜನರನ್ನು ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಇನ್ಮೇಲೆ ಬಿಡುಗಡೆಯಾಗುವ ಶಿವಣ್ಣನ ಸಿನಿಮಾಗಳು ಶತದಿನೋತ್ಸವ ಪೂರೈಸಲಿ ಅನ್ನೋದು ಶಿವಣ್ಣನ ಅಭಿಮಾನಿಗಳ ಆಶಯ.

Find Out More:

Related Articles: