ಚಿರಂಜೀವಿಯ ಸರ್ಜಾರ ಅಕಾಲಿಕ ಮರಣದಿಂದ ಅರ್ಧಕ್ಕೆ ನಿಂತ ಚಿತ್ರಗಳು ಯಾವುವು ಗೊತ್ತಾ..?

Soma shekhar

ಯುವ ನಟ ಚಿರಂಜೀವಿ ಸರ್ಜ ಅಕಾಲಿಕ ಮರಣಕ್ಕೆ ತುತ್ತಾಗಿದ್ದನ್ನು ಕನ್ನಡ ಚಿತ್ರರಂಗದಲ್ಲಿ ಇನ್ನೂ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಚಿರಂಜೀವಿ ಬದುಕಿದ್ದಾನೆ ಇಂದಲ್ಲ ನಾಳೆ ಬಂದೆ ಬರುತ್ತಾನೆ ಎಂಬ ನಂಬಿಕೆಯಲ್ಲಿದೆ ಕನ್ನಡ ಚಿತ್ರರಂಗ ಆದರೆ  ಅದು ಸಾಧ್ಯವಾಗದ ಮಾತಾದರೂ ಕೂಡ ಚಿರು ಕನ್ನಡ ಚಿತ್ರರಂಗದಲ್ಲಿ ಮಾಡಬೇಕಾದ ಸಾಧನೆ ಬಹಳಷ್ಟಿತ್ತು ಆದರೆ ಕ್ರೂರಿ ವಿಧಿ ಚಿರುವನ್ನು ಚಿಕ್ಕವಯಲ್ಲಿನಲ್ಲಿ ತನ್ನ ಮಡಿಲಿಗೆ ಹಾಕಿಕೊಂಡಿದೆ ಆದರೆ ಚಿರು ಸಾಕಷ್ಟು ಚಿತ್ರಗಳಲ್ಲಿ  ಅಭಿನಯಿಸುತ್ತಿದ್ದರು ಈ ಎಲ್ಲಾ ಸಿನಿಮಾಗಳು ಈಗ ಅರ್ಧಕ್ಕೆ ನಿಂತು ಹೋಗಿದೆ. ಅಷ್ಟಕ್ಕೂ ಅರ್ಧಕ್ಕೆ ನಿಂತು ಹೋದ ಚಿರು ಚಿತ್ರಗಳು ಯಾವುವು..? 

 

ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕಂಡ ಕನಸುಗಳು ನನಸಾಗುವ ಮುನ್ನವೇ ಬಾರದ ಲೋಕಕ್ಕೆ ಹೊರಟು ಬಿಟ್ಟಿದ್ಧಾರೆ. ಅವರು ಅಭಿನಯಿಸುತ್ತಿದ್ದ ಸಿನಿಮಾಗಳು ಅರ್ಧಕ್ಕೆ ನಿಂತಿದ್ದು, ಮತ್ತೆ ಕೆಲವು ಸೆಟ್ಟೇರಲೇಯಿಲ್ಲ.

 

ಖಾಕಿ, ಆದ್ಯ ಮತ್ತು ಶಿವಾರ್ಜುನ ಸಿನಿಮಾಗಳು ಈ ವರ್ಷ ಬಿಡುಗಡೆಯಾಗಿತ್ತು. ಶಿವಾರ್ಜುನ ಸಿನಿಮಾ ತೆರೆಕಂಡ ಎರಡೇ ದಿನಕ್ಕೆ ಲಾಕ್​ಡೌನ್​ನಿಂದ ಸಿನಿಮಾ ಪ್ರದರ್ಶನ ಬಂದ್​ ಆಗಿತ್ತು. ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕರೇ ಶಿವಾರ್ಜುನ ಸಿನಿಮಾವನ್ನ ರೀ-ರಿಲೀಸ್​ ಮಾಡುವ ಲೆಕ್ಕಚಾರ ನೀಡಿತ್ತಿದೆ. ಶಿವತೇಜಸ್​ ನಿರ್ದೇಶನದ ಶಿವಾರ್ಜುನ ಸಿನಿಮಾದಲ್ಲಿ ಚಿರು ಖಡಕ್​ ಲುಕ್​ನಲ್ಲಿ ದರ್ಶನ್​ ಕೊಟ್ಟಿದ್ದಾರೆ. ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕರೇ ಶಿವಾರ್ಜುನ ಸಿನಿಮಾವನ್ನ ರೀ-ರಿಲೀಸ್​ ಮಾಡುವ ಲೆಕ್ಕಚಾರ ನೀಡಿತ್ತಿದೆ. ಶಿವತೇಜಸ್​ ನಿರ್ದೇಶನದ ಶಿವಾರ್ಜುನ ಸಿನಿಮಾದಲ್ಲಿ ಚಿರು ಖಡಕ್​ ಲುಕ್​ನಲ್ಲಿ ದರ್ಶನ್​ ಕೊಟ್ಟಿದ್ದಾರೆ.

 

ಶಿವಾರ್ಜುನ ನಂತರ ರಾಜಮಾರ್ತಾಂಡ ಸಿನಿಮಾ ತೆರೆಗೆ ಬರೋ ಸಾಧ್ಯತೆಯಿದೆ. ಒಂದು ಹಾಡು ಮತ್ತು ಡಬ್ಬಿಂಗ್​ ಬಿಟ್ಟು ರಾಜಮಾರ್ತಾಂಡ ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಸಾಂಗ್​ ಶೂಟಿಂಗ್​ ಪ್ಲಾನ್ ಮಾಡಿದಾಗಲೇ ಲಾಕ್​ಡೌನ್​ ಘೋಷಣೆಯಾಗಿತ್ತು. ಲಾಕ್​ಡೌನ್​ ಮುಗಿಯೋ ವೇಳೆಗೆ ಚಿರಂಜೀವಿ ಸರ್ಜಾ ಅವರೇ ಇಲ್ಲ. ಹಾಡು ಇಲ್ಲದೇ ಸಿನಿಮಾ ತೆರೆಗೆ ಬರೋ ಸಾಧ್ಯತೆಯಿದೆ. ಕ್ಷತ್ರಿಯ ಚಿತ್ರಕ್ಕೆ ಮುಹೂರ್ತ ನೆರವೇರಿಸಿ, 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಅನಿಲ್​ ಮಂಡ್ಯ ಈ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳ್ತಿದ್ದಾರೆ. ಮುಂದೆ ಏನ್​ ಮಾಡೋದು ಅನ್ನೋದನ್ನ ಚಿತ್ರತಂಡ ಇನ್ನು ನಿರ್ಧರಿಸಿಲ್ಲ.

 

ರಚಿತಾ ರಾಮ್​ ನಾಯಕಿಯಾಗಿದ್ದ ಏಪ್ರಿಲ್​ ಅನ್ನೋ ಚಿತ್ರಕ್ಕೆ ಚಿರಂಜೀವಿ ಸರ್ಜಾ ಆಯ್ಕೆಯಾಗಿದ್ರು. ಚಿತ್ರದ ಪೋಸ್ಟರ್​ ಸಹ ರಿಲೀಸ್​ ಆಗಿತ್ತು. ಕಾರಣಾಂತರಗಳಿಂದ ಶೂಟಿಂಗ್​ ತಡವಾಗ್ತಿತ್ತು. ಇನ್ನೇನು ಶೂಟಿಂಗ್​ ಶುರುವಾಗಬೇಕು ಅನ್ನೋ ಸಮಯಕ್ಕೆ ಲಾಕ್​ಡೌನ್ ಘೋಷಣೆಯಾಯ್ತು. ಚಿರು ಮಾಡಬೇಕಿದ್ದ ಪಾತ್ರವನ್ನ ಬೇರೆ ಯಾರಾದ್ರೂ ಮಾಡ್ತರಾ(?) ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆ ದಿನಗಗಳು ಚೇತನ್​, ವರಲಕ್ಷ್ಮೀ ಶರತ್ ಕುಮಾರ್ ಅಭಿನಯದ ರಣಂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.

 

ಧೀರಂ, ಅಶೋಕವನ ಅನ್ನೋ ಮತ್ತೆರಡು ಸಿನಿಮಾಗಳ ಬಗ್ಗೆ ಮಾತುಕತೆ ನಡೀತಿತ್ತು. ಲಾಕ್​ಡೌನ್​ ನಂತರ ಎರಡೂ ಸಿನಿಮಾಗಳು ಸೆಟ್ಟೇರಬೇಕಿತ್ತು. ಆದರೆ, ಅದ್ಯಾವುದು ಸಾಧ್ಯವಾಗಲಿಲ್ಲ. ಮುಂದೆ ಈ ಸಿನಿಮಾಗಳನ್ನ ಬೇರೆ ಕಲಾವಿದರು ಮಾಡುವ ಸಾಧ್ಯತೆಯಿದೆ.

 

ಹರಿ ಸಂತು ನಿರ್ದೇಶನದ ದೊಡ್ಡೋರು, ಚಿರಂಜೀವಿ ಸರ್ಜಾ ಬಹಳ ಇಷ್ಟಪಟ್ಟಿದ್ದ ಕಥೆ. ಐದು ವರ್ಷಗಳ ಹಿಂದೆಯೇ ಈ ಕಥೆ ಕೇಳಿ ಮೆಚ್ಚಿಕೊಂಡಿದ್ದ ಚಿರು ಸಿನಿಮಾ ಸೆಟ್ಟೇರೋದನ್ನ ಕಾಯ್ತಿದರು. ದೊಡ್ಡ ಬಜೆಟ್​ ಬೇಕಾಗಿದ್ರಿಂದ ಸಿನಿಮಾ ಪ್ರಾರಂಭವಾಗಲೇಯಿಲ್ಲ. ಚಿತ್ರಕ್ಕಾಗಿ ಮಾಡಿದ್ದ ರೆಫರೆನ್ಸ್​ ಟ್ರೈಲರ್​​ ಮಾಡಿತ್ತು ಚಿತ್ರತಂಡ. ಈ ಟ್ರೈಲರ್​​ ಅನ್ನ ಇಷ್ಟಪಟ್ಟು ಪದೇ ಪದೇ ನೋಡುತ್ತಿದ್ದರಂತೆ ಚಿರು ಸರ್ಜಾ. ದೊಡ್ಡೋರು ಚಿತ್ರದ ರೆಫರೆನ್ಸ್​ ಟ್ರೈಲರ್​ನ ಚಿತ್ರತಂಡ ಚಿರುಗೆ ಅರ್ಪಿಸಿದೆ.

 

ಚಿರಂಜೀವಿ ಸರ್ಜಾ ಮಿನಿಮಮ್​ ಗ್ಯಾರೆಂಟಿ ನಟ ಅನ್ನಿಸಿಕೊಂಡಿದರು. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡದೇ ಇದ್ರು, ಅವರ ಸಿನಿಮಾಗಳು ನಿರ್ಮಾಪಕರನ್ನ ಸೇಫ್​ ಮಾಡ್ತಿತ್ತು. ಅದೇ ಕಾರಣಕ್ಕೆ ಸದಾ ಅವರ ಕೈಯಲ್ಲಿ ನಾಲ್ಕೈದು ಸಿನಿಮಾಗಳು ಇರುತ್ತಿತ್ತು. ಕಥೆ ಇಷ್ಟವಾದ್ರೆ, ನಿರ್ದೇಶಕರನ್ನು ಹುರಿದುಂಬಿಸಿ, ಸಿನಿಮಾ ಮಾಡಿಸುತ್ತಿದ್ದರು. ಎಲ್ಲರನ್ನು ರಂಜಿಸುತ್ತಾ ಶೂಟಿಂಗ್​ನಲ್ಲಿ ಜಾಲಿಯಾಗಿ ಇರ್ತಿದ್ರು. ಆದರೆ, ಧಿಡೀರನೇ ಬಾರದ ಲೋಕಕ್ಕೆ ಹೊರಟು ಬಿಟ್ಟಿದ್ದಾರೆ.

 

Find Out More:

Related Articles: