ದೇಶದಲ್ಲಿ ಇದುವರೆಗೂ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಎಷ್ಟು ಗೊತ್ತಾ..?

Soma shekhar

ದೇಶದಲ್ಲಿ ಕೊರೋನಾ ಸೋಂಕು ಪ್ರತಿನಿತ್ಯ ಸಾವಿರಾರು ಸಂಖ್ಯೆ ದಾಖಲಾಗುತ್ತಿದೆ ಅದರಂತೆ ಸಾಕಷ್ಟು ಜನ ಕೊರೋನಾ ಸೊಂಕಿನಿಂದ ಅನೇಕ ಮಂದಿ ಕೊರೋನಾ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಆದರೆ ಇದಕ್ಕೆ ಭಯ ಪಡುವ ಅಗತ್ಯವಿಲ್ಲ ಯಾಕೆಂದರೆ ಕೊರೋನಾ ಸೋಂಕಿತರು ಪ್ರತಿನಿತ್ಯ ಸಾವಿರ ಸಂಖ್ಯೆಯಲ್ಲಿ ಗುಣ ಮುಖರಾಗುತ್ತಿದ್ದಾರೆ.

 

ಹೌದು ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೇ ಗುಣಮುಖರ ಪ್ರಮಾಣವೂ ವೇಗವಾಗಿ ಹೆಚ್ಚುತ್ತಿದೆ. ಶನಿವಾರ 37 ಸಾವಿರಕ್ಕೂ (ಶೇ. 63.92) ಅಧಿಕ ರೋಗಿಗಳು ಗುಣಮುಖರಾಗಿದ್ದು, ಈವರೆಗೆ ಒಂದೇ ದಿನ ಅತಿ ಹೆಚ್ಚು ರೋಗಿಗಳು ಗುಣಮುಖರಾದ ದಾಖಲೆ ಇದಾಗಿದೆ. ದೇಶದಲ್ಲಿ ಪ್ರತಿದಿನ 45 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆಯಾದರೂ ಗುಣಮುಖರ ಪ್ರಮಾಣ ಕಳೆದ ನಾಲ್ಕು ದಿನಗಳಿಂದ 30 ಸಾವಿರಕ್ಕಿಂತ ಅಧಿಕವಾಗಿದೆ.

 

ಈವರೆಗೆ ಒಟ್ಟು 9 ಲಕ್ಷ ರೋಗಿಗಳು ಗುಣಮುಖರಾಗಿದ್ದು, 4.77 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ 24 ತಾಸಿನಲ್ಲಿ 43 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸಂಖ್ಯೆ 14.26 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 616 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 32,300ಕ್ಕಿಂತಲೂ ಅಧಿಕವಾಗಿದೆ. ಆದಾಗ್ಯೂ ಸೋಂಕಿತರ ಮರಣ ಪ್ರಮಾಣ ಶೇಕಡ 2.31ಕ್ಕಿಳಿದಿದೆ.

 

ಉತ್ತರ ಕೊರಿಯಾದಲ್ಲಿ ಮೊದಲ ಶಂಕಿತ ಪ್ರಕರಣ: ಈವರೆಗೆ ಒಂದೂ ಕರೊನಾ ಕೇಸ್ ದಾಖಲಿಸಿದ ಉತ್ತರ ಕೊರಿಯಾದಲ್ಲಿ ಮೊದಲ ಶಂಕಿತ ಪ್ರಕರಣದ ಬಗ್ಗೆ ವರದಿಯಾಗಿದ್ದು, ಕೈಸೊಂಗ್​ನಲ್ಲಿ ಸಂಪೂರ್ಣ ಲಾಕ್​ಡೌನ್​ಗೆ ಆದೇಶಿಸಲಾಗಿದೆ. ವ್ಯಕ್ತಿಯೊಬ್ಬ ದಕ್ಷಿಣ ಕೊರಿಯಾದ ಗಡಿಯಿಂದ ಅಕ್ರಮವಾಗಿ ನುಸುಳಿದ್ದು, ಆತನಿಗೆ ಕರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತುರ್ತು ಲಾಕ್​ಡೌನ್​ಗೆ ಆದೇಶಿಸಿದ್ದಾರೆ.

 

ಮಫ್ತಿಯಲ್ಲಿ ಬಂದು ಸಿಬ್ಬಂದಿ ಪರೀಕ್ಷಿಸಿದ ಎಸ್ಪಿ!: ಲಾಕ್​ಡೌನ್ ವೇಳೆ ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತಿದ್ದಾರೆ ಎಂಬುದನ್ನು ತಿಳಿಯಲು ಉತ್ತರ ಪ್ರದೇಶದ ಸುಲ್ತಾನ್​ಪುರ ಜಿಲ್ಲೆಯ ಎಸ್​ಪಿ ಶಿವಹರಿ ಮೀನಾ ಮಫ್ತಿಯಲ್ಲಿ ಹೋಗಿ ಪೊಲೀಸರ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದಾರೆ.

 

ಎಸ್​ಪಿ ಸಾಮಾನ್ಯರಂತೆ ಬಟ್ಟೆ ತೊಟ್ಟು, ಮಾಸ್ಕ್ ಹಾಕಿಕೊಂಡು ಬೇಕಂತಲೇ ಪೊಲೀಸರ ಎದುರಿಗೆ ಬ್ಯಾರಿಕೇಡ್ ಹಾರಿದ್ದರು. ಈ ವೇಳೆ ಪೊಲೀಸರು ನಿಲ್ಲುವಂತೆ ಸೂಚಿಸಿದರೂ ಎಸ್​ಪಿ ಓಡಲು ಶುರು ಮಾಡಿದ್ದರು. ಅವರನ್ನು ಬೆನ್ನುಹತ್ತಿದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಅವರು ಮಾಸ್ಕ್ ತೆಗೆದಾಗ ತಮ್ಮ ಎಸ್​ಪಿ ಶಿವಹರಿ ಮೀನಾ ಎಂಬುದು ತಿಳಿಯಿತು. ಪೊಲೀಸರ ಕಾರ್ಯಕ್ಷಮತೆ ಮೆಚ್ಚಿದ ಎಸ್​ಪಿ, ತಮ್ಮನ್ನು ಬೆನ್ನುಹತ್ತಿ ಹಿಡಿದ 8 ಪೊಲೀಸರಿಗೆ ತಲಾ 2,100 ರೂ. ಬಹುಮಾನ ನೀಡಿದ್ದಾರೆ.

 

Find Out More:

Related Articles: