ಫುಡ್ ಡೆಲಿವರಿಗೂ ಕಾಲಿಟ್ಟ ಇ ಕಾಮರ್ಸ್ ನ ‍ ಜನಪ್ರಿಯ ಸಂಸ್ಥೆ: ಅಷ್ಟಕ್ಕೂ ಆ ಸಂಸ್ಥೆ ಯಾವುದು ಗೊತ್ತಾ..?

Soma shekhar

 

ಕೊರೋನಾ  ದಿಂದಾಗಿ ಸಾಕಷ್ಟು ಬದಲಾವಣೆಗಳಾಗಿವೆ ಅದು ವಾಣಿಜ್ಯ ಕ್ಷೇತ್ರದಲ್ಲಿ ಹಾಗೂ ಇ ಕಾಮರ್ಸ್ ರಂಗದಲ್ಲೂ ಕೂಡ ಸಾಕಷ್ಟು ಬದಲಾವಣೆಗಳೇ ಹಾಗಿವೆ ಇದಕ್ಕೆ ಉದಾ: ಇದುವರೆಗೆ ಇ ಕಾಮರ್ಸ‍ ನಲ್ಲಿ ಜನಪ್ರಿಯ ಗೊಳಿಸಿದ್ದ ಅಮೆಜಾನ್ ಈಗ ಪುಡ್ ಡೆಲಿವರಿ ಮಾಡಲು ಮುಂದಾಗಿದೆ. ಈ ಮೂಲಕ ಜನರು ಕೇಳಿದ ಆಹಾರವನ್ನು ಇರುವ ಜಾಗಕ್ಕೇ ತಂದು ಕೊಡಲು ಮತ್ತೊಂದು ಸಂಸ್ಥೆ ಮುಂದೆ ಬಂದಂತಾಗಿದೆ.

 

ಹೌದು ಫುಡ್​ ಡೆಲಿವರಿ ಕ್ಷೇತ್ರದಲ್ಲಿ ಸದ್ಯಕ್ಕೆ ಜೊಮ್ಯಾಟೋ ಮತ್ತು ಸ್ವಿಗ್ಗಿ ಮುಂಚೂಣಿಯಲ್ಲಿದ್ದು, ಇವರೆಡಕ್ಕೆ ಪ್ರತಿಸ್ಪರ್ಧಿಯಾಗಿ ಈಗ ಆನ್​ಲೈನ್ ಮಾರ್ಕೆಟ್ ದಿಗ್ಗಜ ಸಂಸ್ಥೆ ಅಮೆಜಾನ್ ಕೂಡ ಕಾಲಿಡುತ್ತಿದೆ. ಅಮೆಜಾನ್ ಇಂಡಿಯಾಗ ಗುರುವಾರ ಈ ವಿಷಯವನ್ನು ಪ್ರಕಟಿಸಿದ್ದು, ಬೆಂಗಳೂರಿನ ಆಯ್ದ ಭಾಗಗಳಲ್ಲಿ ಫುಡ್​ ಡೆಲಿವರಿಯನ್ನು ಮಾಡುವುದಾಗಿ ಘೋಷಿಸಿದೆ.

 

ಜೊಮ್ಯಾಟೋ ಮತ್ತು ಸ್ವಿಗ್ಗಿ ಕೋವಿಡ್​ 19 ಲಾಕ್​ಡೌನ್​ ಕಾರಣಕ್ಕೆ 1,600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಿಗೇ ಅಮೆಜಾನ್​ನ ಈ ನಡೆ ಹೊಸ ಆಶಾಕಿರಣವನ್ನೂ ಉದ್ಯೋಗ ವಲಯದಲ್ಲಿ ಮೂಡಿಸಿದೆ. ಕೆಲವು ತಿಂಗಳುಗಳ ಮಟ್ಟಿಗೆ ಇದು ಪ್ರಾಯೋಗಿಕವಾಗಿರಲಿದೆ ಎಂಬುದನ್ನೂ ಅದು ಘೋಷಿಸಿದೆ. ಅಗತ್ಯ ವಸ್ತುಗಳ ಜತೆಗೆ ಆಹಾರವನ್ನೂ ಆರ್ಡರ್​ ಮಾಡಲು ಬಯಸುತ್ತಿರುವುದಾಗಿ ಅನೇಕ ಗ್ರಾಹಕರು ಅಮೆಜಾನ್​ಗೆ ತಿಳಿಸಿದ್ದು, ಅದನ್ನು ಈಡೇರಿಸಲು ಪ್ರಯತ್ನಿಸುವುದಕ್ಕೆ ಇದು ಸಕಾಲ ಎಂದು ಕಂಪನಿ ಮನಗಂಡಿದೆ. ಹೀಗಾಗಿಯೇ ಸ್ಥಳೀಯ ಆಹಾರೋದ್ಯಮಗಳನ್ನು ಗುರುತಿಸಿ ಅವುಗಳ ಜತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನ ಆಯ್ದ ಭಾಗಗಳಲ್ಲಿ ಫುಡ್ ಡೆಲಿವರಿ ಮಾಡಲು ಮುಂದಾಗಿದ್ದೇವೆ ಎಂದು ಅಮೆಜಾನ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.

 

ಆರಂಭಿಕ ಹಂತದಲ್ಲಿ ಬೆಂಗಳೂರಿನ ಆಯ್ದ ಪಿನ್​ಕೋಡ್​ಗಳಲ್ಲಿ ಅಂದರೆ ಮಹದೇವಪುರ, ಮಾರತ್ತಹಳ್ಳಿ, ವೈಟ್​ಫೀಲ್ಡ್​, ಬೆಳ್ಳಂದೂರು ವ್ಯಾಪ್ತಿಯಲ್ಲಿ ಲಭ್ಯವಿರಲಿದೆ. ಇಲ್ಲಿನ ಬಾಕ್ಸ್8, ಚಾಯ್​ ಪಾಯಿಂಟ್​, ಫಸ್ಸೋಸ್​, ಮಾಡ್​ ಓವರ್ ಡೋನಟ್ಸ್​, ರಾಡಿಸ್ಸನ್​, ಮ್ಯಾರಿಯಟ್​​ ಸೇರಿ 100ಕ್ಕೂ ಹೆಚ್ಚು ರೆಸ್ಟೋರೆಂಟ್​ಗಳ ಜತೆಗೆ ಅಮೆಜಾನ್ ಒಪ್ಪಂದ ಮಾಡಿಕೊಂಡಿದೆ. ಅಮೆಜಾನ್ ಆಯಪ್​ ಬಳಕೆದಾರರು ಈ ಪಿನ್ ಕೋಡ್ ವ್ಯಾಪ್ತಿಗೆ ಬಂದಾಗ ಅಥವಾ ಇಲ್ಲಿರುವ ಅಮೆಜಾನ್ ಬಳಕೆದಾರ ಆಯಪ್​ನಲ್ಲಿ ಫುಡ್​ ಆರ್ಡರ್ ಆಪ್ಶನ್ ಕಾಣಿಸಕೊಳ್ಳಲಿದೆ. ಮುಂದಿನ ಆರು ತಿಂಗಳ ಅವಧಿಗೆ ಈ ಪ್ರಾಯೋಗಿಕ ಸೇವೆ ಮುಂದುವರಿಯಲಿದ್ದು, ತೃಪ್ತಿಕರವೆನಿಸಿದಲ್ಲಿ ದೇಶಾದ್ಯಂತ ಈ ಸೇವಾಜಾಲ ವಿಸ್ತರಣೆಗೊಳ್ಳಲಿದೆ. ಆದರೆ, ಯಾವ ರೀತಿ ವಿಸ್ತರಣೆ ಆಗಲಿದೆ ಎಂಬುದನ್ನು ಕಂಪನಿ ವಕ್ತಾರರು ತಿಳಿಸಿಲ್ಲ.

 

ಇದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಜೊಮ್ಯಾಟೋ ಭಾರತದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸುವ ಸಲುವಾಗಿ ಉಬರ್ ಈಟ್ಸ್​ ಅನ್ನು ಖರೀದಿಸಿತ್ತು. ಆದಾಗ್ಯೂ ಮಾರ್ಚ್ 25ರಿಂದ ಚಾಲ್ತಿಯಲ್ಲಿರುವ ಲಾಕ್​ಡೌನ್​ ಕಾರಣ ಜೊಮ್ಯಾಟೋ ಮತ್ತು ಸ್ವಿಗ್ಗಿಗಳ ವಹಿವಾಟಿಗೆ ಹೊಡೆತ ಉಂಟಾಗಿದೆ.

 

Find Out More:

Related Articles: