ಮೊಬೈಲ್ ಗೇಮ್ ನ ಟೂರ್ನಮೆಂಟ್ ನಲ್ಲಿ ಗೆದ್ದರೆ 50 ಲಕ್ಷ ಬಹುಮಾನ..! ಅಷ್ಟಕ್ಕೂ ಆ ಮೊಬೈಲ್ ಗೇಮ್ ಯಾವುದು ಗೊತ್ತಾ..?

Soma shekhar

ಹೊರಾಂಗಣ ಕ್ರೀಡೆಗಳು ಮತ್ತು ಒಳಾಂಗಳ ಕ್ರೀಡೆಗಳಿಗೆ ಟೂರ್ನಮೆಂಟ್ಗಳನ್ನು ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಬದಲಾಗುತ್ತಿರುವ ಜಗತ್ತಿನಲ್ಲಿ ಮೊಬೈಲ್ ನಲ್ಲಿ ಆಡುವ ಗೇಮ್ ಗಳಿಗೂ ಕೂಡ ಟೂರ್ನಮೆಂಟ್‍ಗಳನ್ನು ಆಯೋಜನೆಯನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ಈ ಮೊಬೈಲ್ ಗೇಮ್ ಟೂರ್ನಮೆಂಟ್ ಗಳಲ್ಲಿ ಗೆದ್ದ ವಿಜೇತರಿಗೆ ಲಕ್ಷ ಲಕ್ಷ  ಬಹುಮಾನಗಳನ್ನು ಸಹ ನೀಡಲಾಗುತ್ತದೆ. ಅಷ್ಟಕ್ಕೂ ಟೂರ್ನಮೆಂಟ್ ಆಯೋಜನೆ ಮಾಡಿರುವ  ಆ ಮೊಬೈಲ್ ಗೇಮ್ ಯಾವುದು ಗೊತ್ತಾ..?

 

ಇತ್ತೀಚೆಗೆ ಜಗ್ತತ್ತಿನಾಧ್ಯಂತ ಸಾಕಷ್ಟು ಜನಪ್ರಿಯವಾಗಿರುವ ಪಬ್ ಜಿ ಮೊಬೈಲ್ ಗೇಮ್ ಟೂರ್ನಮೆಂಟ್ ಅನ್ನು ಆಯೋಜನೆಯನ್ನು ಮಾಡಲಾಗುತ್ತಿದೆ. ಹೌದು ಪಬ್​ಜಿ ಪ್ರಿಯರಿಗಾಗಿ ಮೊಬೈಲ್ ಇಂಡಿಯಾ ಸೀರಿಸ್ ಮತ್ತೆ ಬಂದಿದೆ . ಕಳೆದ ವರ್ಷ ಟೆನ್ಸೆಂಟ್ ಗೇಮ್ಸ್ ಮತ್ತು ಪಬ್ ಜಿ ಕಾರ್ಪ್ ಸಹಯೋಗದಲ್ಲಿ ಪಬ್​ಜಿ ಸೀರೀಸ್ ನಡೆಸಿ ಯಶಸ್ವಿಯಾಗಿತ್ತು. ಇದೀಗ ಈ ಎರಡು ಸಂಸ್ಥೆಗಳು 2020 ರ ಪಬ್​ಜಿ ಮೊಬೈಲ್ ಇಂಡಿಯಾ ಸರಣಿಯನ್ನು ಮತ್ತೆ ತರುತ್ತಿದೆ.

ಟೆನ್ಸೆಂಟ್ ಗೇಮ್ಸ್ ಮತ್ತು ಪಬ್​ಜಿ ಕಾರ್ಪ್ ಸಹಯೋಗದಲ್ಲಿ ನಡೆಯುವ ಎರಡನೇ ಸರಣಿ ಇದಾಗಿದ್ದು, ಎಲ್ಲರಿಗೂ ಮುಕ್ತವಾಗಿರುವ ಟೂರ್ನಮೆಂಟ್ ಆಗಿದೆ. ಇಸ್ಪೋರ್ಟ್ಸ್ ಇಕೋಸಿಸ್ಟಮ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಪಬ್​ಜಿ ಮೊಬೈಲ್ ಭಾರತದಲ್ಲಿ ಕುತೂಹಲಕಾರಿಯಾದ ಅವಕಾಶಗಳನ್ನು ಆಟಗಾರರಿಗೆ ನೀಡಲಿದೆ. ಇದು ಕೌಶಲ್ಯ ಆಧಾರಿತ ಗೇಮ್ ಆಗಿದ್ದು, ಈ ಟೂರ್ನಮೆಂಟ್ ಅನ್ನು ಕಳೆದ ವರ್ಷ ಡಿಜಿಟಲ್ ಚಾನೆಲ್ ಗಳಲ್ಲಿ 50 ದಶಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದರು.

ಪಬ್ ಜಿ ಮೊಬೈಲ್ ಇಂಡಿಯಾ ಸೀರೀಸ್ ದೇಶದ ಹಲವಾರು ವೃತ್ತಿಪರ ಇಸ್ಪೋರ್ಟ್ಸ್ ಆಟಗಾರರಿಗೆ ಒಂದು ನಿರ್ಣಾಯಕ ಅಡಿಪಾಯವಾಗಿದೆ. ಈ ಟೂರ್ನಮೆಂಟ್ ಹಲವಾರು ಭರವಸೆಯ ಆಟಗಾರರಿಗೆ ಉತ್ತಮ ವೇದಿಕೆಯಾಗಿದ್ದು, ಅವರು ಭಾರತದ ಮುಂದಿನ ಪಬ್​ಜಿ ಮೊಬೈಲ್ ಹೀರೋ ಆಗಲು ನೆರವಾಗಲಿದೆ. 

ಪಬ್​ಜಿ ಮೊಬೈಲ್ ಇಂಡಿಯಾ ಸರಣಿ ಎಲ್ಲರಿಗೂ ಮುಕ್ತವಾಗಿದೆ. ಇನ್-ಗೇಮ್ ಕ್ವಾಲಿಫೈಯರ್ ಗಳು ಆನ್ ಲೈನ್ ಕ್ವಾಲಿಫೈಯರ್ ಗಳಿಗಾಗಿ ಸ್ಪರ್ಧಿಸಲಿದ್ದಾರೆ. ಪ್ರತಿ ನೋಂದಾಯಿತ ಸ್ವಾಡ್ 15 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಅತ್ಯುತ್ತಮ 10 ಪಂದ್ಯಗಳನ್ನು ಅರ್ಹತೆಗೆ ಪರಿಗಣಿಸಲಾಗುತ್ತದೆ.

ಇನ್-ಗೇಮ್ ಅರ್ಹತೆ ಸುತ್ತಿನ 248 ತಂಡಗಳು ಮತ್ತು ಇತರೆ 8 ನೇರ ಆಹ್ವಾನಿತ ತಂಡಗಳು ಸೇರಿ ಒಟ್ಟು 256 ತಂಡಗಳು ಆನ್ ಲೈನ್ ಕ್ವಾಲಿಫೈಯರ್ ನಲ್ಲಿ ಸ್ಪರ್ಧಿಸಲಿವೆ. ಪ್ರತಿ ತಂಡಗಳು ತಲಾ 2 ಪಂದ್ಯಗಳನ್ನು ಆಡಲಿದ್ದು, ಲೀಡರ್ ಬೋರ್ಡ್ ಪಡೆಯಲು ಸೆಣಸಲಿವೆ. ಈ ಮೂಲಕ ಟಾಪ್ 3 ಸ್ಲಾಟ್ ಗಳನ್ನು ಹೊಂದುವ ಗುಂಪುಗಳು ಕ್ವಾರ್ಟರ್ ಫೈನಲ್ ಗೆ ಅರ್ಹತೆ ಹೊಂದಲಿವೆ.

ಕ್ವಾರ್ಟರ್ ಫೈನಲ್ ಗಳಲ್ಲಿ ಒಟ್ಟು 64 ತಂಡಗಳಿದ್ದು, ಆನ್ ಲೈನ್ ಅರ್ಹತೆಯಲ್ಲಿ ಸ್ಪರ್ಧಿಸಲಿವೆ. ಈ ಪೈಕಿ ಟಾಪ್ 48 ತಂಡಗಳು ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆಯಲಿವೆ. ಈ ಕ್ವಾರ್ಟರ್ ಫೈನಲ್ ನಲ್ಲೂ ಸಹ 8 ಆಹ್ವಾನಿತ ತಂಡಗಳಿರುತ್ತವೆ. ಈ ತಂಡಗಳನ್ನು ಟಾಪ್ ಕಿಲ್ಸ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ತಂಡಗಳು ಸೆಮಿಫೈನಲ್ ತಲುಪಲು 4 ದಿನಗಳ ಕಾಲ ಲೀಡರ್ ಬೋರ್ಡ್ ನಲ್ಲಿನ ಟಾಪ್ 32 ಸ್ಲಾಟ್ ಗಳನ್ನು ಪಡೆಯಲು ಸೆಣಸಲಿವೆ. ಕ್ವಾರ್ಟರ್ ಫೈನಲ್ ನ ಟಾಪ್ 32 ತಂಡಗಳು ಕ್ವಾರ್ಟರ್ ಫೈನಲ್ಸ್ ನಲ್ಲಿ ಸ್ಪರ್ಧಿಸಲಿವೆ.50 ಲಕ್ಷ ಬಹುಮಾನ!

ಹಳೆಯ ತಂಡಗಳು ಮತ್ತು ಹೊಸ ಪ್ರತಿಭಾನ್ವಿತ ಯುವ ತಂಡಗಳ ಸಮ್ಮಿಳಿತದೊಂದಿಗೆ ಈ ಬಾರಿ ಆರೋಗ್ಯಕರವಾದ ಸ್ಪರ್ಧೆ ಏರ್ಪಡಲಿದೆ. ತಂಡಗಳು ಟಾಪ್ 16 ಸ್ಲಾಟ್ ಗಳಲ್ಲಿ ಸೆಣಸಾಟ ನಡೆಸಲಿದ್ದು, ಈ ಟಾಪ್ 16 ತಂಡಗಳು ಫೈನಲ್ಸ್ ನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿವೆ. ಇದರಲ್ಲಿ ವಿಜಯಶಾಲಿಯಾಗಲಿರುವ ತಂಡಗಳಿಗೆ ಒಟ್ಟು ಬರೋಬ್ಬರಿ 50 ಲಕ್ಷ ರೂಪಾಯಿಗಳ ಬಹುಮಾನ ದೊರೆಯಲಿದೆ. 3 ದಿನಗಳ ಕಾಲ 18 ಪಂದ್ಯಗಳನ್ನು ಆಡಲಿರುವ ಈ ತಂಡಗಳ ಪೈಕಿ ವಿಜೇತರಾಗುವ ತಂಡಕ್ಕೆ ಚಾಂಪಿಯನ್ ಪಟ್ಟ ನೀಡಲಾಗುತ್ತದೆ.


ಪಬ್​ಜಿ ಪ್ರಿಯರು ಮೊಬೈಲ್ ಇಂಡಿಯಾ ಸೀರೀಸ್ ಭಾಗವಹಿಸಲು ನೋಂದಣಿ ಮಾಡಬೇಕು. ಈ ನೋಂದಣಿಗಳನ್ನು ಆನ್ ಲೈನ್-ಕಟ್ ಆಫ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ 20,00,000 ರೂಪಾಯಿ, ಎರಡನೇ ಬಹುಮಾನ ಪಡೆಯುವ ತಂಡಕ್ಕೆ 5,00,000 ರೂಪಾಯಿ ಹಾಗೂ ಮೂರನೇ ತಂಡಕ್ಕೆ 3,00,000 ರೂಪಾಯಿ ನಗದು ಬಹುಮಾನ ದೊರೆಯಲಿದೆ. ಇದಲ್ಲದೇ, ಮೊದಲ 16 ಸ್ಥಾನಗಳನ್ನು ಗಳಿಸುವ ಎಲ್ಲಾ ತಂಡಗಳಿಗೂ ನಗದು ಬಹುಮಾನ ಸಿಗಲಿದೆ. ಆಸಕ್ತರು www.pubgmobile.in ಸೈಟ್​ಗೆ ಭೇಟಿ ನೀಡಿ ನೊಂದಾಣಿ ಮಾಡಬಹುದಾಗಿದೆ. ಮೇ.6 ರಿಂದ 17 ಮೇ ವರೆಗೆ ನೊಂದಾಣಿ ಮಾಡಲು ಅವಕಾಶ ನೀಡಿದೆ.

Find Out More:

Related Articles: