ಲಾಕ್ ಡೌನ್ ಸಮಯದಲ್ಲಿ ಟಿಕ್ ಟ್ಯಾಕ್ ಡೌನ್ ಲೋಡ್ ಆದ ಪ್ರಮಾಣ ಎಷ್ಟು ಗೊತ್ತಾ?

Soma shekhar

ಬೈಟ್ಡ್ಯಾನ್ಸ್ ಒಡೆತನದ ಶಾರ್ಟ್ ವಿಡಿಯೊ ಆಪ್ ಟಿಕ್ಟಾಕ್ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿದ್ದು, ಹೆಚ್ಚಿನ ಆಕ್ಟಿವ್ ಬಳಕೆದಾರರನ್ನು ಹೊಂದಿದೆ. ಇತ್ತೀಚಿಗೆ ಟಿಕ್ಟಾಕ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿ??. ಆದ್ರೆ ಭಾರತದಲ್ಲಿ ಈ ಲಾಕ್ಡೌನ್ ಅವಧಿಯಲ್ಲಿಯೂ ಸಹ ಟಿಕ್ಟಾಕ್ ವಿಡಿಯೊ ಆಪ್ ನಂಬರ್ ಒನ್ ಪಟ್ಟದಲ್ಲಿ ಕಾಣಿಸಿಕೊಂಡಿದೆ ಅಷ್ಟಕ್ಕೂ ಟಿಕ್ ಟಾಕ್ ಲಾಕ್ ಡೌನ್ ಸಮಯದಲ್ಲಿ ಡೌನ್ ಲೌಡ್ ಆದ ಪ್ರಮಾಣ ಎಷ್ಟು ಗೊತ್ತಾ..?

 

ಕೊರೊನಾ ವೈರಸ್ ಇಂದ ಭಾರತ ಲಾಕ್ ಡೌನ್ ಅನ್ನು ಘೋಷಣೆಯನ್ನು ಮಾಡಿದ್ದಂತಹ ಸಂದರ್ಭದಲ್ಲಿ ಜನರು ಮನೆಯಿಂದ ಎಲ್ಲೂ ಹೊರಗೆ ಬರದಂತೆ ಆದೇಶವನ್ನು ನೀಡಿತ್ತು ಈ ಸಮಯದಲ್ಲಿ ಮನೆಯಲ್ಲಿ ಸಮಯವನ್ನು ಕಳೆಯುವ ಉದ್ದೇಶದಿಂದ ಸಾಕಷ್ಟು ಜನರು ಅಂತರ್ಜಾಲದಲ್ಲಿ ಮುಳುಗಿ ಹೋಗಿರುತ್ತಾರೆ ಅದರಲ್ಲೂ ಮನರಂಜನೆಯ ಅಫ್ಲಿಕೇಶನ್‌ಗಳಲ್ಲಿ ಕಣ್ಣಾಡಿಸುತ್ತಾ ಕಾಲ ಕಳೆಯುತ್ತಿದ್ದಾರೆ ಇಂತ ಒಂದು ಸಮಯದಲ್ಲಿ ಅತೀ ಹೆಚ್ಚು ಬಳಕೆಯಾದ ಅಫ್ಲಿಕೇಷನ್ ಅಂದರೆ ಅದು ಟಿಕ್‌ಟ್ಯಾಕ್. ಈ ಟಿಕ್ ಟ್ಯಾಕ್ ಡೌನ್ ಲೋಡ್  ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತಿದೆ.

 

ಹೌದು, ಲಾಕ್ಡೌನ್ ಅವಧಿಯಲ್ಲಿ ಭಾರತದಲ್ಲಿ ಟಿಕ್ಟಾಕ್ ಅಪ್ಲಿಕೇಶನ್ ಹೆಚ್ಚು ಡೌನ್ಲೋಡ್ ಆಗಿದೆ. ಈ ಮೂಲಕ ವಾಟ್ಸಪ್ ಮತ್ತು ಫೇಸ್ಬುಕ್ಗಳನ್ನು ಹಿಂದಿಕ್ಕಿದೆ ಎಂದು ಆಪ್ ಅನ್ನಿ ವರದಿಯಿಂದ ತಿಳಿದುಬಂದಿದೆ, ಲಾಕ್ಡೌನ್ ಅವಧಿಯ ಕೆಲವೇ ದಿನಗಳಲ್ಲಿ ದೇಶದಲ್ಲಿ ಟಿಕ್ಟಾಕ್ ಆಪ್ ಡೌನ್ಲೋಡ್ನಲ್ಲಿ ಶೇ.20% ನಷ್ಟು ಹೆಚ್ಚಳವಾಗಿದೆ. ಆಪಲ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ಎರಡರಲ್ಲಿಯೂ ಡೌನ್ಲೋಡ್ ಅಧಿಕವಾಗಿದೆ.

 

ಎರಡನೇ ಸ್ಥಾನದಲ್ಲಿ ವಾಟ್ಸಪ್

ಶಾರ್ಟ್ ವಿಡಿಯೊ ಅಪ್ಲಿಕೇಶನ್ ಟಿಕ್ಟಾಕ್ ಅತೀ ಹೆಚ್ಚು ಡೌನ್ಲೋಡ್ ಕಂಡು ನಂಬರ್ ಒನ್ ಅನಿಸಿಕೊಂಡಿದೆ. ಟಿಕ್ಟಾಕ್ ನಂತರದ ಸ್ಥಾನದಲ್ಲಿ ವಾಟ್ಸಪ್ ಹಾಗೂ ಫೇಸ್ಬುಕ್ಗಳು ಕಾಣಿಸಿಕೊಂಡಿವೆ. ವಾಟ್ಸಪ್ ಬಳಕೆಯಲ್ಲಿಯೂ ಶೇ. 40% ಏರಿಕೆ ಆಗಿದೆ. ಹಾಗೆಯೇ ಇತ್ತೀಚಿಗೆ ಹೆಲೊ ಆಪ್ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅಂದಹಾಗೆ ಹೆಲೊ ಬೈಟ್ಡ್ಯಾನ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ.

 

ಕಳೆದ ವರ್ಷದಲ್ಲಿ ಟಿಕ್ಟಾಕ್ ಆಪ್ ಅತೀ ತ್ವರಿತವಾಗಿ ಬೆಳವಣಿಗೆಯನ್ನು ಹೊಂದಿದ್ದು, ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಸೆನ್ಸಾರ್ ಟವರ್ ಪ್ರಕಾರ ಫೆಬ್ರುವರಿಯಲ್ಲಿ ಜಾಗತಿಕವಾಗಿ ಆಂಡ್ರಾಯ್ಡ್ ಮತ್ತು ಐಓಎಸ್ನಲ್ಲಿ ೧೧೩ ಮಿಲಿಯನ್ ಡೌನ್ಲೋಡ್ಗಳ ಕಂಡಿದೆ. ಹಾಗೆಯೇ ಭಾರತದಲ್ಲಿ ೪೬.೬ ಮಿಲಿಯನ್ ಡೌನ್ಲೋಡ್ ಕಂಡಿದೆ.

 

ಲಾಕ್ಡೌನ್ ಟೈಂನಲ್ಲಿ ಸಾಮಾಜಿಕ ಜಾಣಗಳ ಸಾಥ್

 

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ 21 ದಿನಗಳ ಲಾಕ್ಡೌನ್ ಜಾರಿ ಮಾಡಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಇರುವುದು ಅಗತ್ಯವಾಗಿದೆ. ಈ ಅವಧಿಯನ್ನು ಕಳೆಯಲು ಅನೇಕರು ತಮ್ಮ ಅಭಿರುಚಿಯ ಹವ್ಯಾಸಗಳಲ್ಲಿ ಬ್ಯುಸಿಯಾಗಿದ್ದರೇ, ಮತ್ತೆ ಅನೇಕರು ಟಿಕ್ ಟಾಕ್, ಫೇಸ್ಬುಕ್, ವಾಟ್ಸಪ್, ಹೆಲ್ಲೊ ನಂತಹ ಸಾಮಾಜಿಕ ತಾಣಗಳಲ್ಲಿ ಸಮಯ ವ್ಯಯಸುತ್ತಿದ್ದಾರೆ.

 

 

 

Find Out More:

Related Articles: