ಮುಂಬಯಿ: ಬಿಸಿಸಿಐ ತನ್ನ ಒಪ್ಪಂದದ ಆಟಗಾರರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಪಟ್ಟಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಡಲಾಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದರಿಂದ ಅಭಿಮಾನಿಗಳು ಸಹ ಗರಂ ಆಗಿದ್ದಾರೆ.
ಹೌದು, ಬಿಸಿಸಿಐ ಧೋನಿ ಯನ್ನು ಕೈಬಿಟ್ಟಿದ್ದು ಅಭಿಮಾನಿಗಳನ್ನು ತೆರಳುವಂತೆ ಮಾಡಿದೆ. ಬಿಸಿಸಿಐ ಪ್ರಸ್ತುತ 27ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಉನ್ನತ ದರ್ಜೆಯ ‘ಎ ಪ್ಲಸ್’ ನೀಡಲಾಗಿದೆ. ಈ ಮೂವರೂ ಆಟಗಾರರು ಕಳೆದ ವರ್ಷವೂ ಇದೇ ದರ್ಜೆಯಲ್ಲಿದ್ದರು. ಧೋನಿ ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್, ಅಂಬಟಿ ರಾಯುಡು ಮತ್ತು ಖಲೀಲ್ ಅಹ್ಮದ್ ರನ್ನು ಕೈಬಿಡಲಾಗಿದೆ. ಬಿಸಿಸಿಐ ಪ್ರಕಾರ, ಎಂ.ಎಸ್.ಧೋನಿ 2019ರ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಬಳಿಕ ಯಾವುದೇ ಟಿ20, ಏಕದಿನ ಪಂದ್ಯಗಳನ್ನು ಆಡಿಲ್ಲ. ಅವರನ್ನು ಮರಳಿ ಪಡೆಯಬಹುದಾಗಿದೆ.
ಎ+ ಗ್ರೇಡ್: 7ಕೋಟಿ ರೂ. ಒಪ್ಪಂದದ ಎ+ ಗ್ರೇಡ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.
ಎ ಗ್ರೇಡ್, 5 ಕೋಟಿ ರೂ,:
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಚತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಭ್ ಪಂತ್ ಹಾಗೂ ಮಾಯಾಂಕ್ ಅಗರ್ವಾಲ್.
ಬಿ ಗ್ರೇಡ್ 3 ಕೋಟಿ ರೂ,:
ರಿದ್ಧಿಮಾನ್ ಸಹಾ, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ ಹಾಗೂ ಮಾಯಾಂಕ್ ಅಗರ್ವಾಲ್.
ಸಿ ಗ್ರೇಡ್ 1 ಕೋಟಿ ರೂ:
ಒಟ್ಟು 8 ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಈ ಪೈಕಿ 5 ಆಟಗಾರರು ಹೊಸಬರಾಗಿದ್ದಾರೆ. ಕೇದಾರ ಜಾಧವ್, ನವದೀಪ್ ಸೈನಿ, ದೀಪರ್ ಚಹರ್, ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್ ಹಾಗೂ ವಾಷಿಂಗ್ಟನ್ ಸುಂದರ್.