ಕೊಹ್ಲಿ ವಿಫಲ, ಸಾಧಾರಣ ಮೊತ್ತ ಪೇರಿಸಿದ ಟೀ ಇಂಡಿಯಾ

Soma shekhar
ಕ್ರೈಸ್ಟ್ ಚರ್ಚ್‌: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದು ಇದೀಗ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಫೇಲ್ ಆಗಿದ್ದು ಟೀಂ ಇಂಡಿಯಾ ಸಾಧರಣ ಮೊತ್ತ ಪೇರಿಸಿದ. ಆದರೆ ಹನುಮ ವಿಹಾರಿ, ಶಾ ಮಿಂಚಿದ್ದಾರೆ. 
 
ಕ್ರೈಸ್ಟ್‌ ಚರ್ಚ್‌ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ನ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ ಕೇವಲ 3 ರನ್‍ ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಟಿಮ್ ಸೌಥಿ ಬೌಲಿಂಗ್ ವೇಳೆ ವಿರಾಟ್ ಕೊಹ್ಲಿ ಎಲ್‍.ಬಿ.ಡಬ್ಲ್ಯೂಗೆ ತುತ್ತಾದರು. ನವೆಂಬರ್‌ ನಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದಿದ್ದ ಟೆಸ್ಟ್‌ ನಲ್ಲಿ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದ್ದರು. ಅಂದರೆ 99 ದಿನಗಳ ಹಿಂದೆ ಶತಕ ದಾಖಲಿಸಿದ್ದರು. ಆಗ ಅವರು 136 ರನ್ ಗಳಿಸಿದ್ದರು. ಆ ನಂತರ ಶತಕ ದಾಖಲಿಸಿಲ್ಲ. 
 
ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶ ನೀಡಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಅವರು 54 ರನ್ (64 ಎಸೆತ, 8 ಬೌಂಡರಿ, 1 ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರು. ಚೇತಶ್ವರ ಪೂಜಾರ 54 ರನ್ (140 ಎಸೆತ, 6 ಬೌಂಡರಿ) ಹಾಗೂ ಹುನುಮ ವಿಹಾರಿ 55 ರನ್ (92 ಎಸೆತ, 10 ಬೌಂಡರಿ) ಗಳಿಸಿದರು. ಆದರೆ 5 ಆಟಗಾರರ ಎರಡಂಕಿ ರನ್ ಕಲೆಹಾಕುವಲ್ಲಿ ವಿಫಲರಾದರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ ನ 63 ಓವರ್‌ ಗಳಲ್ಲಿ 242 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಒಪ್ಪಿಸಿತು.
 
 ಟೀಂ ಇಂಡಿಯಾ ಆಲ್ ಔಟ್ ಆದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಯಾವುದೇ ವಿಕೆಟ್ ಕಷ್ಟವಿಲ್ಲದೆ ಮೊದಲ ದಿನದಾಟದ ಮುಕ್ತಾಯಕ್ಕೆ 23 ಓವರ್‌ ಗಳಲ್ಲಿ 63 ಗಳಿಸಿದೆ. ಕಿವೀಸ್ ಪರ ಟಾಮ್ ಲ್ಯಾಥಮ್ 27 ರನ್ ಹಾಗೂ ಟಾಮ್ ಬ್ಲಂಡೆಲ್ 29 ರನ್ ಗಳಿಸಿದ್ದಾರೆ.

Find Out More:

Related Articles: