ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮ್ಯಾನ್ ಗಳನ್ನು ಹೊಂದಿದೆ. ಹುಷಾರ್!

Soma shekhar
ನವದೆಹಲಿ: ವೆಸ್ಟ್ ಇಂಡೀಸ್, ಎದುರಾಳಿ ತಂಡ ಯಾವುದೇ ಇರಲಿ, ಯಾರೇ ಬೌಲಿಂಗ್ ಮಾಡಲಿ ಚೆಂಡನ್ನು ನೇರವಾಗಿ ಸಿಕ್ಸರ್ ಲೈನ್ ಆಚೆಗೆ ಕಳುಹಿಸುವ ದೈತ್ಯ ಬ್ಯಾಟ್ಸ್ ಮ್ಯಾನ್ ಗಳನ್ನು ಹೊಂದಿರುವ ತಂಡ. ಬೌಲರ್ ಎಷ್ಟೇ ಸ್ಟ್ರಾಂಗ್ ಇದ್ದರೂ ಕೂಡ ಸಿಕ್ಸರ್ ಬಾರಿಸದೇ  ಬಿಡುವುದಿಲ್ಲ. ಆದ್ದರಿಂದ ನೀವು ಬೌಲಿಂಗ್ ಮಾಡುವಾಗ ಹುಷಾರಾಗಿರಿ ಎಂದು ಅನಿಲ್ ಕುಂಬ್ಳೆ ಟೀಂ ಇಂಡಿಯಾ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ. 
 
ಯಾವುದೇ ಬೌಲಿಂಗ್ ದಾಳಿಯನ್ನು ಕೆಚ್ಚಿ ಕೆಡವಬಲ್ಲ ಪವರ್ ಹಿಟ್ಟರ್‌ಗಳನ್ನು ವೆಸ್ಟ್ ಇಂಡೀಸ್ ಹೊಂದಿದೆ. ಹಾಗಾಗಿ, ಕೆರಿಬಿಯನ್ನರ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆಯಿದೆ ಎಂದು ಸ್ಪಿನ್‌ ದಂತಕತೆ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಹಣಾಹಣಿಯು ಚೆನ್ನೈನಲ್ಲಿ ಭಾನುವಾರ ನಡೆಯಲಿದೆ. ವೆಸ್ಟ್ ಇಂಡೀಸ್‌ ತಂಡದಲ್ಲಿ ಬಲಿಷ್ಟ ಹೊಡೆತಗಳನ್ನಾಡಬಲ್ಲ ಬ್ಯಾಟ್ಸ್‌ಮನ್‌ಗಳಿರುವುದರಿಂದ ಟೀಮ್‌ ಇಂಡಿಯಾ ಬೌಲರ್‌ಗಳು ಬಹಳ ಎಚ್ಚರಿಕೆಯಿಂದ ಬೌಲಿಂಗ್‌ ದಾಳಿ ನಡೆಸುವ ಅಗತ್ಯವಿದೆ ಎಂದು ಕುಂಬ್ಳೆ ತಿಳಿಸಿದ್ದಾರೆ. 
 
"ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್‌ ವಿಭಾಗದ ಪ್ರದರ್ಶನವನ್ನು ನೋಡಲು ಇಷ್ಟಪಡುತ್ತೇನೆ. ಏಕೆಂದರೆ, ಎದುರಾಳಿಯಲ್ಲಿ ಬಲಿಷ್ಟ ಬ್ಯಾಟಿಂಗ್‌ ವಿಭಾಗವಿದೆ. ವಿಶ್ವದ ಯಾವುದೇ ಬೌಲಿಂಗ್‌ ವಿಭಾಗವನ್ನು ದಂಡಿಸುವ ಸಾಮರ್ಥ್ಯ ಪ್ರವಾಸಿ ತಂಡಕ್ಕಿದೆ," ಎಂದು ಭಾರತ ತಂಡದ ಮಾಜಿ ಲೆಗ್ ಸ್ಪಿನ್ನರ್‌ ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
 
ಇದೇ ವೇಳೆ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಿದ ಕಂಬೋ ಖ್ಯಾತಿಯ ಮಾಜಿ ಕ್ರಿಕೆಟಿಗ, ಶ್ರೇಯಸ್‌ ಅಯ್ಯರ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಸಲಹೆ ನೀಡಿದರು. ಮುಂಬೈ ಬ್ಯಾಟ್ಸ್‌ಮನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಆಫ್ ಸೆಂಚುರಿ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕಾಗಿದೆ ಎಂದು ತಿಳಿಸಿದ್ದಾರೆ. 

Find Out More:

Related Articles: