ಅಂತೂ ಹೊರಬಿತ್ತು ಎಸ್ಎಸ್ಎಲ್ ಸಿ ಪಲಿತಾಂಶ : ಯಾವ ಜಿಲ್ಲೆಗೆ ಪ್ರಥಮ ಸ್ಥಾನದ ಗರಿ..?

Soma shekhar
ಕರೋನಾ ವೈರಸ್ ಇಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗುತ್ತಿತ್ತು. ಆದರೆ ಸರ್ಕಾರದ ಗಟ್ಟಿ ನಿರ್ಧಾರದಿಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಸುರಕ್ಷತೆಯಿಂದ ನಡೆಸಿ ಇಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶವನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ.


ಹೌದು ಅಂತೂ ಇಂತೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದಂತ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನವನ್ನು ಗಳಿಸಿದ್ರೇ.. ಬೆಂಗಳೂರು ಗ್ರಾಮಾಂತರ ದ್ವಿತೀಯ ಸ್ಥಾನವನ್ನು ಗಳಿಸಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಹಿಂದೆ ನಾವು ಯಾವತ್ತೂ ಕಂಡಿರದ ರೀತಿಯಲ್ಲಿ ಪರೀಕ್ಷೆಯನ್ನು ಈ ಬಾರಿ ನಡೆಸಿದ್ದೇವೆ. ನಾನು ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಮೂರು ರೀತಿಯಲ್ಲಿ ಅಭಿನಂದನೆ ಸಲ್ಲಿಸುದ್ದೇನೆ. ಶಾಲೆಯ ತರಗತಿ ಇಲ್ಲದೇ, ಕೊರೋನಾ ಭಯದ ನಡುವೆಯೂ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ ಅವರಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ನಮ್ಮ ರಾಜ್ಯದಲ್ಲಿ ಈ ಬಾರಿ 8,48,203 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೊಂದಣಿ ಮಾಡಿದ್ದರು. 19,816 ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿಯೇ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಕೂರಲು ಅವಕಾಶ ನೀಡಿರಲಿಲ್ಲ. ಜೊತೆಗೆ ಕೊರೋನಾ ಕಾರಣದಿಂದ, ಕೊರೋನಾ ಆತಂಕದಿಂದ 18,067 ವಿದ್ಯಾರ್ಥಿಗಳು ಕುಳಿತಿರಲಿಲ್ಲ. ಹೀಗಾಗಿ ಒಟ್ಟು ಪರೀಕ್ಷೆಗೆ 8,11,050 ಹಾಜರಾಗಿದ್ದಾರೆ ಎಂದರು. ಇಂತಹ ವಿದ್ಯಾರ್ಥಿಗಳ ಪರೀಕ್ಷೆ ಚೆನ್ನಾಗಿ ಆಯ್ತು. ಆನಂತ್ರ ಮೌಲ್ಯಮಾಪನವನ್ನು ಜಿಲ್ಲಾ ಮಟ್ಟದಲ್ಲಿಯಲ್ಲಿ ನಡೆಸಲಾಯಿತು. 227 ಮೌಲ್ಯಮಾಪನ ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯ ಮಾಪನ ನಡೆಯಿತು. ಇದರಲ್ಲಿ 52,219 ಮೌಲ್ಯಮಾಪನ ಶಿಕ್ಷಕರು ಭಾಗವಹಿಸಿದ್ದರು. ಬೆಂಗಳೂರು ಮತ್ತು ಗ್ರಾಮಾಂತರ ಲಾಕ್ ಡೌನ್ ನಿಂದಾಗಿ ಮೌಲ್ಯ ಮಾಪನ ತಡವಾಗಿದೆ ಎಂದು ತಿಳಿಸಿದರು.



ಪರೀಕ್ಷೆಯ ಮೌಲ್ಯಮಾಪನ ನಂತ್ರ ಈ ಬಾರಿ https://kseeb.kar.nic.in ಹಾಗೂ https://karresunts.nic.in ಈ ಎರಡು ವೆಬ್ ಸೈಟ್ ಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಗೊಳ್ಳಲಿದೆ. ಮೊಬೈಲ್ ಗೂ ಎಸ್ ಎಂ ಎಸ್ ಮೂಲಕ ಕಳುಹಿಸಲಾಗುತ್ತದೆ. ನಾಳೆ ಬೆಳಿಗ್ಗೆ ಶಾಲೆಗಳಲ್ಲಿ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು. ಒಟ್ಟಾರೆ ಈ ಬಾರಿಯ ಶೇಕಡವಾರ ಫಲಿತಾಂಶ 71.80% ಬಂದಿದೆ. ಕಳೆದ ವರ್ಷ 73.10ರಷ್ಟು ಬಂದಿತ್ತು. ಈ ಸಲ ಹಾಜರಾಗದವರಲ್ಲಿ 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ 2,28,734 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶ 72.79 ರಷ್ಟು ಆಗಿದೆ. ಅನುದಾನಿತ ಶಾಲೆಗಳಲ್ಲಿ 70.60ರಷ್ಟು ಬಂದಿದೆ ಎಂದರು. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿಗಳು ಶೇ. 66.41ರಷ್ಟು ಪಾಸ್ ಆಗಿದ್ದಾರೆ. 625ಕ್ಕೆ 625 ಅಂಕ ಗಳಿಸಿದವರು 6 ವಿದ್ಯಾರ್ಥಿಗಳು. ಕಳೆದ ಬಾರಿ ಈ ಸಂಖ್ಯೆ ಕೇವಲ ಇಬ್ಬರು ಆಗಿದ್ದರು. 625 ಗೆ 624 ತಗೊಂಡಿರುವವರು 11 ವಿದ್ಯಾರ್ಥಿಗಳು. ಕಳೆದ ಬಾರಿ ಇಷ್ಟೇ ಇತ್ತು ಎಂದರು.



ಇನ್ನೂ ಈ ಬಾರಿಯ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನವನ್ನು ಗಳಿಸಿದ್ದರೇ, ಬೆಂಗಳೂರು ಗ್ರಾಮಾಂತರ ಎರಡನೇ ಸ್ಥಾನ ಗಳಿಸಿದೆ. ಮಧುಗಿರಿ ಮೂರನೇ ಸ್ಥಾನ ಗಳಿಸಿದೆ. ಯಾದಗಿರಿ ಜಿಲ್ಲೆಯ ಕೊನೆಯ ಸ್ಥಾವನ್ನು ಫಲಿತಾಂಶದಲ್ಲಿ ಗಳಿಸಿದೆ ಎಂಬುದಾಗಿ ಹೇಳಿದ್ರು.

Find Out More:

Related Articles: