ಪೊಲಾರ್ಡ್ ನೂತನ ದಾಖಲೆ ಏನು ಗೊತ್ತಾ?

Soma shekhar
ಹೊಸದಿಲ್ಲಿ: ವೆಸ್ಟ್ ಇಂಡೀಸ್ ತಂಡದ ಟೀ-ಟ್ವೆಂಟಿ ನಾಯಕ ಹೊಡಿಬಡಿ ಆಟಗಾರ ಕಿರೋನ್ ಪೊಲಾರ್ಡ್ ಇದೀಗ ನೂತನವಾದ ವಿಶಿಷ್ಟ ದಾಖಲೆ ಯೊಂದನ್ನು ಬರೆದಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌‌ಮನ್ ಎಂಬ ವಿಶೇಷ ದಾಖಲೆ ಬರೆದಿದ್ದಾರೆ. 
 
 ಭಾರತ ಹಾಗೂ ವೆಸ್ಟ್‌ ಇಂಡೀಸ್ ವಿರುದ್ಧದ ಮೂರನೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಪೊಲಾರ್ಡ್ 67 ರನ್‌ಗಳನ್ನು ಸಿಡಿಸಿದ್ದರು. ಈ ಸಂದರ್ಭದಲ್ಲಿ ಇಂಥದ್ದೊಂದು ವಿಶೇಷ ದಾಖಲೆ ಬರೆದಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ  ನಡೆದ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್ ಆತಿಥೇಯರ ಎದುರು 68 ರನ್‌ಗಳಿಂದ ಮುಗ್ಗರಿಸಿ, 3 ಪಂದ್ಯಗಳ ಸರಣಿಯಲ್ಲಿ 1-2 ಅಂತರದ ಸೋಲನುಭವಿಸಿತು. 32 ವರ್ಷದ ಅನುಭವಿ ಕ್ರಿಕೆಟಿಗ ಪೊಲಾರ್ಡ್ ವೆಸ್ಟ್‌ ಇಂಡೀಸ್ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿದ 68 ಪಂದ್ಯಗಳಿಂದ ನಾಲ್ಕು ಅರ್ಧಶತಕಗಳನ್ನು ಒಳಗೊಂಡ 1058 ರನ್ಗಳನ್ನು ಗಳಿಸಿದ್ದಾರೆ. ಆದರೆ ಪೊಲಾರ್ಡ್ ಇದುವರೆಗೆ ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ 496 ಪಂದ್ಯಗಳನ್ನು ಆಡಿದ್ದು 49 ಅರ್ಧಶತಕಗಳೊಂದಿಗೆ ಬರೊಬ್ಬರಿ 9,935 ರನ್‌ಗಳನ್ನು ಗಳಿಸುವ, ಚುಟಕು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
 
ನ್ಯೂಜಿಲೆಂಡ್ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್‌ ಟಿ20 ಕ್ರಿಕೆಟ್‌ನಲ್ಲಿ ಆಡಿರುವ 370 ಪಂದ್ಯಗಳಿಂದ 9922 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶೊಯೇಬ್ ಮಲಿಕ್ 362 ಪಂದ್ಯಗಳಿಂದ 9,176 ರನ್ ಗಳಿಸಿ ನಾಲ್ಕನೇ ಸ್ಥಾನ, ಡೇವಿಡ್ ವಾರ್ನರ್ (9,090) ಐದನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (8,739) ಹಾಗೂ ರೋಹಿತ್ ಶರ್ಮಾ (8,502) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
 
​ಟಿ20 ಕ್ರಿಕೆಟ್‌ನಲ್ಲಿ ಪೊಲಾರ್ಡ್‌ ಸಾಧನೆಯ ಅಂಕಿಅಂಶಗಳು
496 ಪಂದ್ಯ
9935 ರನ್‌
104 ಗರಿಷ್ಠ
30.85 ಸರಾಸರಿ
150.27 ಸ್ಟ್ರೈಕ್‌ರೇಟ್‌
01 ಶತಕ
49 ಅರ್ಧಶತಕ
643 ಫೋರ್
647 ಸಿಕ್ಸರ್‌
286 ಕ್ಯಾಚಸ್‌
272 ವಿಕೆಟ್ಸ್‌
4/15 ಶ್ರೇಷ್ಠ ಬೌಲಿಂಗ್‌. 

Find Out More:

Related Articles: