ಆಸ್ಟ್ರೇಲಿಯಾವನ್ನು ತಂಡವನ್ನು ತವರು ನೆಲದಲ್ಲಿ ಸೋಲಿಸುವ ತಾಕತ್ತಿರುವುದು ಯಾವತಂಡಕ್ಕೆಂದು ಮೈಕಲ್ ವಾನ್ ಹೇಳಿದ್ದಾರೆ ಗೊತ್ತಾ!?

Soma shekhar
ಆಸ್ಟ್ರೇಲಿಯಾ ತಂಡವು ಕ್ರಿಕೇಟ್ ನಲ್ಲಿ ತನ್ನದೇ ಆದ ಪಾರುಪತ್ಯ ಹೊಂದಿದೆ. ವಿಶ್ವದ ಬಲಿಷ್ಠ ಆಟಗಾರರನ್ನು ಹೊಂದಿರುವ ಆಸ್ಟ್ರೇಲಿಯಾ ಯಾವಾಗಲೂ ಅಗ್ರ ಸ್ಥಾನದಲ್ಲಿರುತ್ತದೆ. ಪ್ರತಿ ಪಂದ್ಯದಲ್ಲೂ ವಿಶೇಷ ಗೇಮ್ ಪ್ಲಾನ್ ಮಾಡಿ ಪಂದ್ಯ ತನ್ನದಾಗಿಸಿಕೊಳ್ಳುತ್ತದೆ. ಅದರಲ್ಲೂ ಆಸ್ಟ್ರೇಲಿಯಾ ತನ್ನ ತವರು ಮೈದಾನಗಳಲ್ಲಿ ಪಂದ್ಯ ಸೋಲುವುದು ಅಪರೂಪ. ಆದರೆ ಆಸ್ಟ್ರೇಲಿಯಾ ತಂಡವನ್ನು ತನ್ನ ತವರಲ್ಲಿ ಸೋಲಿಸುವ ಶಕ್ತಿ ಇರುವುದು ಇದೀಗ ಈ ತಂಡದಿಂದ ಮಾತ್ರ ಸಾಧ್ಯವಿರುವುದು ಎಂದು ಮೈಕಲ್ ವಾನ್ ಹೇಳಿದ್ದಾರೆ. ಹಾಗಾದರೆ ಆ ತಂಡ ಯಾವುದು ಗೊತ್ತಾ! ಇಲ್ಲಿದೆ ನೋಡಿ ಉತ್ತರ. 
 
ಇಂಗ್ಲಂಡ್ ತಂಡದ ಮಾಜೀ ಕಪ್ತಾನ ಮೈಕಲ್ ವಾನ್ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸುವ ಸಾಮರ್ಥ್ಯವನ್ನು ಹೊಂದಿರುವುದು ಭಾರತ ತಂಡ ಮಾತ್ರ. ಆಸೀಸ್ ತಂಡ ಪಾಕಿಸ್ಥಾನದ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಮೈಕಲ್ ವಾನ್ ಅವರು ಮಾಡಿರುವ ಟ್ವೀಟ್ ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಟೀಂ ಇಂಡಿಯಾಗೆ ಮಾತ್ರ ಆ ಶಕ್ತಿ ಸಾಮರ್ಥ್ಯ ಗಳಿವೆ ಎಂದಿದ್ದಾರೆ. 
 
ಸ್ಪೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರ ಭರ್ಜರಿ ತ್ರಿಶತಕದ ಮೂಲಕ ಆಸ್ಟ್ರೇಲಿಯಾ ಪ್ರವಾಸಿ ಪಾಕಿಸ್ಥಾನವನ್ನು ಎರಡನೇ ಟೆಸ್ಟ್ ನಲ್ಲೂ ಇನ್ನಿಂಗ್ಸ್ ಮತ್ತು 48 ರನ್ ಗಳಿಂದ ಸೋಲಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ನಿಕಟ ಪೈಪೋಟಿ ನೀಡುವತ್ತ ಆಸೀಸ್ ಮುನ್ನಡೆಯುತ್ತಿದೆ. ಭಾರತ 360ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ 176ಪಾಯಿಂಟ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇಂಗ್ಲಂಡ್ ನೆಲದಲ್ಲಿ ನಡೆದಿದ್ದ ಆ್ಯಶಸ್ ಸರಣಿಯನ್ನು 2-2ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಆ ಬಳಿಕ ತನ್ನದೇ ನೆಲದಲ್ಲಿ ಪಾಕಿಸ್ಥಾನವನ್ನು ಹೀನಾಯವಾಗಿ ಸೋಲಿಸಿತ್ತು. ಅಸ್ಟ್ರೇಲಿಯಾ ಇನ್ನು ಮುಂದೆ ನ್ಯೂಝಿಲ್ಯಾಂಡ್ ತಂಡದ ಎದುರು ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತ ಮುಂದಿನ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ

Find Out More:

Related Articles: