ಐಪಿಎಲ್ ಕ್ರಿಕೇಟ್ ಲೀಗ್ ಆಂರಭಕ್ಕೆ ಕೇಂದ್ರ ಸರ್ಕಾರ ನೀಡುವುದ ಗ್ರೀನ್ ಸಿಗ್ನಲ್..? ಇಲ್ಲಿದೆ ಸಂಪೂರ್ಣ ವಿವರ

Soma shekhar

ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಮಾಡಿದಂತಹ ಸಂದರ್ಭದಲ್ಲಿ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು  ತಡೆಹಿಡಿಯಲಾಯಿತು. ಹಾಗಾಗಿ ದೇಶದಲ್ಲಿ ನಡೆಯಬೇಕಿದ್ದ ಕ್ರೀ ಡಾ ಕೂಡಗಳು ಬಂದ್ ಆಂಗಿದ್ದವು. ಅದರಲ್ಲೂ ಏಪ್ರಿಲ್ ಮೇ ನಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಜನಪ್ರಿಯ ಕ್ರೀಡೆ ಐಪಿಯಲ್ ಕೂಡ  ರದ್ದಾಗಿತ್ತು ಇದರಿಂದ ಅದೆಷ್ಟೋ ಐಪಿಎಲ್ ಪ್ರೇಮಿಗಳಿಗೆ ನಿರಾಸೆಯಾಗಿತ್ತು. ಆದರೆ ಈಗ ಕೊರೋನಾ ವೈರಸ್ ದಿನದಂದ ದಿನಕ್ಕೆ ಹೆಚ್ಚಾಗುತ್ತಿದ್ದೂ ಕೂಡ ಲಾಕ್ ಡೌನ್ ಕಡಿತಗೊಳಿಸಲಾಗುತ್ತಿರುವ ಈ  ಸಂದರ್ಭದಲ್ಲಿ   ಐಪಿಎಲ್ ನಡೆಸುವಿಕೆಯ ಬಗ್ಗೆಯೂ ಕೂಡ ಕೇಂದ್ರದ ಮುಂದೆ ಪ್ರಸ್ತಾಪವನ್ನು ಸಲ್ಲಿಸಲಾಗಿದೆ .

 

ಲಾಕ್‌ಡೌನ್ 5.0 ಮಾರ್ಗಸೂಚಿಗಳ ಜತೆಜತೆಯಲ್ಲೇ 3 ಹಂತಗಳಲ್ಲಿ ನಿರ್ಬಂಧ ತೆರವಿಗೆ ಸಿದ್ಧವಾಗಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಐಪಿಎಲ್ 13ನೇ ಆವೃತ್ತಿ ಈ ವರ್ಷವೇ ನಡೆಯುವ ನಿರೀಕ್ಷೆ ಹೆಚ್ಚಾಗಿದೆ. 3 ಹಂತಗಳ ಅನ್‌ಲಾಕ್ ಯೋಜನೆಯ ಅಂತಿಮ ಪಟ್ಟಿಯಲ್ಲಿ ಕ್ರೀಡಾ ಚಟುವಟಿಕೆಗಳ ಪುನರಾರಂಭವೂ ಸೇರಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭವೂ ಇದೆ. ಹೀಗಾಗಿ ಅನ್‌ಲಾಕ್ 3ನೇ ಹಂತ ತಲುಪಿದಾಗ ಐಪಿಎಲ್ ಆಯೋಜನೆ ಅವಕಾಶ ಹೆಚ್ಚಲಿದೆ ಎಂದು ಬಿಸಿಸಿಐ ವಲಯದಲ್ಲಿ ಆಶಾಭಾವನೆ ಮೂಡಿದೆ.

 

ಕೇಂದ್ರ ಸರ್ಕಾರದ ಅನ್‌ಲಾಕ್ ಯೋಜನೆಯ ಮೊದಲ ಹಂತ ಜೂನ್ 8ರಂದು ಆರಂಭವಾಗಲಿದೆ. ಅನ್‌ಲಾಕ್ 2ನೇ ಹಂತ ಜುಲೈನಲ್ಲಿ ಜಾರಿಯಾಗುವ ನಿರೀಕ್ಷೆ ಇದೆ. ಬಳಿಕ 3ನೇ ಹಂತ ಆರಂಭವಾಗುವ ಸಾಧ್ಯತೆ ಇದ್ದು, ಅದರ ದಿನಾಂಕವನ್ನು ಸರ್ಕಾರ ಇನ್ನೂ ನಿಗದಿಗೊಳಿಸಿಲ್ಲ. ಆದರೆ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಇದರ ದಿನಾಂಕವನ್ನೂ ನಿರ್ಧರಿಸಲಿದೆ. ಕ್ರೀಡಾ ತರಬೇತಿಗೆ ಈಗಾಗಲೆ ಲಾಕ್‌ಡೌನ್-4ರಲ್ಲೇ ಅವಕಾಶ ಕಲ್ಪಿಸಲಾಗಿದೆ. 'ಇದೊಂದು ಸಕಾರಾತ್ಮಕ ಬೆಳವಣಿಗೆ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಮತ್ತು ಕ್ರೀಡಾಕೂಟಗಳ ಆಯೋಜನೆಗೆ ಅನುಮತಿ ಸಿಕ್ಕಾಗ ನಾವು ಭವಿಷ್ಯದ ಯೋಜನೆ ರೂಪಿಸಬಹುದು' ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.

 

ಏಪ್ರಿಲ್-ಮೇನಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಟೂರ್ನಿಯನ್ನು ಇನ್ನು ಮಳೆಗಾಲ ಮುಕ್ತಾಯದವರೆಗೆ ಆಯೋಜಿಸಲು ಬಿಸಿಸಿಐಗೆ ಸಾಧ್ಯವಾಗದು. ಹೀಗಾಗಿ ಸೆಪ್ಟೆಂಬರ್ ಅಂತ್ಯದಲ್ಲಷ್ಟೇ ಟೂರ್ನಿ ಆಯೋಜಿಸಬಹುದಾಗಿದೆ. ಆದರೆ ಇದಕ್ಕೆ ಮುನ್ನ, ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯವೂ ನಿರ್ಧಾರವಾಗಬೇಕಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಈ ವರ್ಷವೇ ಐಪಿಎಲ್ ಆಯೋಜನೆ ಅತ್ಯಂತ ಸುಲಭವೆನಿಸಲಿದೆ. ಟಿ20 ವಿಶ್ವಕಪ್ ಭವಿಷ್ಯ ಜೂನ್ 10ರಂದು ನಿಗದಿಯಾಗಿರುವ ಐಸಿಸಿ ಸಭೆಯಲ್ಲಿ ನಿರ್ಧಾರವಾಗಲಿದೆ.

 

ಶಿಬಿರ ಆಯೋಜನೆಗೂ ಸಿದ್ಧತೆ
ಲಾಕ್‌ಡೌನ್ 5ನೇ ಹಂತದಲ್ಲಿ ಟೀಮ್ ಇಂಡಿಯಾ ಆಟಗಾರರ ಸಿದ್ಧತೆ ಆರಂಭಗೊಳ್ಳುವ ನಿರೀಕ್ಷೆ ಇದೆ. ಈಗಾಗಲೆ ದೇಶೀಯ ವಿಮಾನ ಸಂಚಾರ ಆರಂಭವಾಗಿರುವುದರಿಂದ ಆಟಗಾರರನ್ನು ಒಂದೆಡೆ ಸೇರಿಸಿ ಶಿಬಿರ ಆಯೋಜನೆಯಾಗಲಿದೆ. ಆಟಗಾರರಿಗೆ ಫಿಟ್ನೆಸ್ ಮತ್ತು ಹಿಂದಿನ ಲಯ ಕಂಡುಕೊಳ್ಳಲು 6-8 ವಾರಗಳ ತರಬೇತಿ ಅಗತ್ಯವಾಗಿದೆ ಎಂದು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಈಗಾಗಲೆ ತಿಳಿಸಿದ್ದಾರೆ. ಸ್ಪರ್ಧಾತ್ಮಕ ಪಂದ್ಯ ಆಡುವುದಕ್ಕೆ ಮುನ್ನ ಆಟಗಾರರು ಕೆಲ ಅಭ್ಯಾಸ ಪಂದ್ಯಗಳನ್ನೂ ಆಡುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಕರೊನಾದಿಂದ ತತ್ತರಿಸಿರುವ ಮುಂಬೈನಲ್ಲಿ ಲಾಕ್‌ಡೌನ್ ಆಗಿದ್ದು, ಅವರನ್ನು ಅಲ್ಲಿಂದ ಹೊರತರುವುದು ಸ್ವಲ್ಪ ಸವಾಲಿನ ಕೆಲಸವಾಗಿದೆ.

 

Find Out More:

Related Articles: