ಅಂಪೈರ್ ಔಟ್ ನೀಡಿದರೂ ಕ್ರೀಸ್ ಬಿಟ್ಟು ಹೊರ ನಡೆಯದ ಆಟಗಾರ

Soma shekhar
ಮೊಹಾಲಿ: ಅಂಪೈರ್ ಔಟ್ ನೀಡಿದ್ದಾರೆ. ಆದರೆ ಆ ತೀರ್ಪು ನೋಡಿ ಈ ಆಟಗಾರ ಕ್ರೀಸ್ ಬಿಟ್ಟು ಕದಲದೇ ಅಲ್ಲಿ ಯೇ ಇದ್ದ. ಆದ್ದರಿಂದ ಅಂಪೈರ್ ತೀರ್ಪು ಉಲ್ಲಂಘನೆ ಮಾಡಿದಂತಾಯಿತು. ಇದರಿಂದ 10ನಿಮಿಷಗಳ ಕಾಲ ಆಟವನ್ನು ನಿಲ್ಲಿಸಲಾಯಿತು. ಯಾರು ಆ ಆಟಗಾರ, ಏನಾಯ್ತು ಗೊತ್ತಾ ಮೈದಾನದಲ್ಲಿ.
 
ಮೈದಾನದಲ್ಲಿ  ಅಂಪೈರ್ ಏನೇ ತೀರ್ಪು ನೀಡಿದರೂ ಅದನ್ನು ಚಾಚು ತಪ್ಪದೇ ಪಾಲಿಸುವುದು ಸಭ್ಯರ ಆಟ ಕ್ರಿಕೆಟ್‌ನ ಲಕ್ಷ್ಮಣವಾಗಿದೆ.  ಅದನ್ನು ಪಾಲಿಸುತ್ತಾರೆ, ಪಾಲಿಸಬೇಕು ಕೂಡ. ಹಾಗಿದ್ದರೂ ಯುವ ಭರವಸೆಯ ಆಟಗಾರನೊಬ್ಬ ಅಂಪೈರ್ ಔಟ್ ತೀರ್ಪು ನೀಡಿದರೂ ಕ್ರೀಸ್ ಬಿಟ್ಟು ಕದಲದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದಾಗಿ ಪಂದ್ಯ 10ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಿತ್ತು.
ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ಪಂಜಾಬ್ ಹಾಗೂ ದಿಲ್ಲಿ ನಡುವಣ ಪಂದ್ಯದಲ್ಲಿ ಘಟನೆ ನಡೆದಿದೆ.
 
ಐಎಸ್ ಬಿದ್ರಾ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಅಂಪೈರ್ ಔಟ್ ತೀರ್ಪು ನೀಡಿದರೂ ಪಂಜಾಬ್ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕ್ರೀಸ್ ಬಿಟ್ಟು ತೆರಳಿಲ್ಲ. ಇದರ ಬದಲಾಗಿ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರು. ಕೊನೆಗೂ ಅನ್ಯ ದಾರಿಯಿಲ್ಲದೇ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ನಿಧಾನಗತಿಯ ವೇಗದ ಬೌಲರ್ ಸಭೋದ್ ಭಾಟಿ ದಾಳಿಯಲ್ಲಿ ಗಿಲ್ 10ರನ್ ಗಳಿಸಿದ್ದ ವೇಳೆಯಲ್ಲಿ ವಿವಾದ ನಡೆದಿತ್ತು. ಬ್ಯಾಟ್ ಮುಂದುವರಿಸಿದ ಗಿಲ್ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 23ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಹಿಡ್ದರು. ಭಾರತ 'ಎ' ತಂಡದ ನಾಯಕರೂ ಆಗಿರುವ ಗಿಲ್ ವರ್ತನೆಯು ಬಹಳಷ್ಟು ಟೀಕೆಗೆ ಕಾರಣವಾಗುತ್ತಿದೆ. ಆಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಗಿಲ್, ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದರು. ಯುವ ಪ್ರತಿಭಾವಂತ ಬ್ಯಾಟ್ಸ್‌ಮನ್ ರಣಜಿ ಟ್ರೋಫಿಯಲ್ಲಿ ಕೆಟ್ಟ ವರ್ತನೆಯಿಂದ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ. 
 
ಅಂಪೈರ್ ನಿರ್ಣಯದಿಂದ ಕುಪಿತಗೊಂಡ ದಿಲ್ಲಿ ಆಟಗಾರರು ಮೈದಾನದಿಂದ ವಾಕೌಟ್ ಮಾಡಲು ನಿರ್ಧರಿಸಿದ್ದರು ಎಂಬುದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಮ್ಯಾಚ್ ರೆಫರಿ ರಂಗನಾಥನ್ ವಿವಾದವನ್ನು ಇತ್ಯರ್ಥಗೊಳಿಸಿದರು. ಬಳಿಕ ಪಂದ್ಯವು ಮುಂದುವರಿಯಿತು.

Find Out More:

Related Articles: