ಮಂಕಾದ ರಾಹುಲ್ ಪಾಂಡೆ ಬ್ಯಾಟ್

Soma shekhar
ಈಡೆನ್ ಗಾರ್ಡೆನ್: ಬಲಗೈ ವೇಗದ ಬೌಲರ್ ಇಶಾನ್ ಪೊರೆಲ್ ಮಾರಕ ದಾಳಿಗೆ ತತ್ತರಿಸಿರುವ ಕರ್ನಾಟಕ ತಂಡವು ಈಡೆನ್ ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2019-20ನೇ ಸಾಲಿನ ಎರಡನೇ ಸೆಮಿಫೈನಲ್ ಮುಖಾಮುಖಿಯಲ್ಲಿ ಬಂಗಾಳದ 312 ರನ್‌ ಗಳಿಗೆ ಉತ್ತರವಾಗಿ ಕೇವಲ 122 ರನ್‌ ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ. ಅದರಲ್ಲೂ ಕೂಡ ರಾಹುಲ್ ಪಾಂಡೆ ಬ್ಯಾಟ್ ಮಂಕಾಗಿದೆ. 
 
ಇದರೊಂದಿಗೆ ಮೊದಲ ಇನ್ನಿಂಗ್ಸ್‌ ನಲ್ಲಿ 190 ರನ್‌ ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿದೆ. ಕೆಎಲ್ ರಾಹುಲ್, ಮನೀಶ್ ಪಾಂಡೆ ಮುಂತಾದ ಬಲಾಢ್ಯ ಬ್ಯಾಟ್ಸ್‌ ಮನ್‌ ಗಳನ್ನು ಹೊಂದಿದ್ದರೂ ಕರುಣ್ ನಾಯರ್ ನೇತೃತ್ವದ ಕರ್ನಾಟಕ ಪಡೆಯು ಭಾರಿ ಹಿನ್ನೆಡೆಯನ್ನು ಎದುರಿಸಿದೆ. ಇಲ್ಲಿಂದ ಪಂದ್ಯ ಗೆಲ್ಲಲು ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಪವಾಡವನ್ನೇ ನಿರೀಕ್ಷಿಸಬೇಕಿದೆ. ಬಳಿಕ ಉತ್ತರ ನೀಡಲಾರಂಭಿಸಿರುವ ಬಂಗಾಳ ತಂಡವು ಎರಡನೇ ದಿನದಂತ್ಯಕ್ಕೆ 22 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ. ಈ ಮೂಲಕ ಒಟ್ಟು ಮುನ್ನಡೆಯನ್ನು 262 ರನ್‌ ಗಳಿಗೆ ಏರಿಸಿದೆ. 
 
ಬಂಗಾಳಕ್ಕೆ ಆರಂಭದಲ್ಲೇ ತ್ರಿಬಲ್ ಆಘಾತ ನೀಡಿದ ಅಭಿಮನ್ಯು ಮಿಥುನ್ (9ಕ್ಕೆ 3 ವಿಕೆಟ್) ನಿರೀಕ್ಷೆ ಮೂಡಿಸಿದರು. ಪರಿಣಾಮ ಅಭಿಷೇಕ್ ರಮನ್ (1), ನಾಯಕ ಅಭಿಮನ್ಯು ಈಶ್ವರನ್ (11) ಹಾಗೂ ಅರ್ನಬ್ ನಂದಿ (0) ಪೆವಿಲಿಯನ್ ಸೇರಿಕೊಂಡರು. ಅನುಭವಿ ಮನೋಜ್ ತಿವಾರಿ ಅವರನ್ನು (13) ಬಲಗೈ ವೇಗಿ ಪ್ರಸಿದ್ಧ ಕೃಷ್ಣ ಹೊರದಬ್ಬಿದರು. ಈ ನಡುವೆ ಅಜೇಯ 40 ರನ್ ಗಳಿಸಿರುವ ಸುದೀಪ್ ಚಟರ್ಜಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದಾರೆ. ಇವರಿಗೆ ಮೊದಲ ಇನ್ನಿಂಗ್ಸ್ ಶತಕವೀರ ಅನುಸ್ತೂಪ್ ಮುಜುಮ್ದಾರ್ (1*) ಮುನ್ನುಗ್ಗುತ್ತಿದ್ದಾರೆ. 
 
ದ್ವಿತೀಯ ದಿನದಾಟದಲ್ಲಿ ಬಂಗಾಳಕ್ಕೆ ಉತ್ತರ ನೀಡಲಾರಂಭಿಸಿದ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಇಶಾನ್ ಪೊರೆಲ್ ಎಸೆದ ಇನ್ನಿಂಗ್ಸ್‌ ನ ಮೊದಲ ಓವರ್‌ನಲ್ಲೇ ರವಿಕುಮಾರ್ ಸಮರ್ಥ್ (0) ಪೆವಿಲಿಯನ್‌ಗೆ ಹಿಂತಿರುಗಿದರು. ತಮ್ಮ ಎರಡನೇ ಓವರ್‌ ನಲ್ಲಿ ನಾಯಕ ಕರುಣ್ ನಾಯರ್ (3)ಅವರನ್ನು ಪೊರೆಲ್ ಹೊರದಬ್ಬಿದರು. ಕೃಷ್ಣಮೂರ್ತಿ ಸಿದ್ಧಾರ್ಥ್ (14) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೆಎಲ್ ರಾಹುಲ್ 26ರನ್ ಗಳಿಸಿ ಔಟಾದರು.

Find Out More:

Related Articles: