ಸಿಕ್ಸರ್ ಮ್ಯಾನ್ ಕ್ರಿಸ್ ಗೇಲ್ ಪ್ರೀತಿಯ ಆಟ ಗೊತ್ತಾ ನಿಮಗೆ!?

Soma shekhar
 
ನವದೆಹಲಿ: ಹೊಡಿ ಬಡಿ ಆಟಗಾರರ ದಂಡನ್ನೇ ಹೊಂದಿರುವ ವೆಸ್ಟ್‌ ಇಂಡೀಸ್‌ ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಮತ್ತು ಬಾಲಿವುಡ್ ನಟಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡುತ್ತಿದೆ. ಸ್ವತ: ಪ್ರೀತಿ ಜಿಂಟಾ ಅವರೇ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದರು. ನನ್ನ ಫೋನ್‌ ನಲ್ಲಿ ನಾನೇನು ಪಡೆದಿದ್ದೇನೆ ಎಂಬುದನ್ನು ನೋಡಿ ಎಂದಿದ್ದಾರೆ. 
 
 ಸಂತೋಷದ ವ್ಯಕ್ತಿಗಳು. ಗೇಲ್ ಸ್ಟ್ರೋಮ್‌ ಗೂ ಮುನ್ನ ಶಾಂತವಾಗಿದ್ದೇವೆ ಎಂದು ಹಳೆಯ ಚಿತ್ರವೊಂದನ್ನು ಹಂಚಿದ್ದಾರೆ. ಇದೀಗ ಚಿತ್ರದಲ್ಲಿ ಪ್ರೀತಿ ಜಿಂಟಾ ಅವರನ್ನು ಕ್ರಿಸ್ ಗೇಲ್ ತಬ್ಬಿಕೊಂಡಿದ್ದಾರೆ. ಇದೀಗ ಮಗದೊಮ್ಮೆ ತಬ್ಬಿಕೊಳ್ಳುವ ಇಮೋಜಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಪ್ರೀತಿ ಜಿಂಟಾ ಒಂದಲ್ಲ ಒಂದು ವಿಚಾರದಲ್ಲಿ ಮಗ್ನವಾಗುವ ಮೂಲಕ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತದೆ. ಅಲ್ಲದೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರೊಂದಿಗೆ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. ಇದೀಗ ಗೇಲ್ ಜೊತೆಗಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
 
ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಈ ಬಾರಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಕ್ರಿಸ್ ಗೇಲ್ ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ 2020ನೇ ಸಾಲಿನಲ್ಲಿ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಕರ್ನಾಟಕದ ಕೆಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕರ್ನಾಟಕದ ಮಯಾಂಕ್ ಅಗರ್ವಾಲ್ ಹಾಗೂ ಕರುಣ್ ನಾಯರ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಈ ಮಧ್ಯೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊಚ್ಚಲ ಪ್ರಶಸ್ತಿ ಕನಸಿನ ನಿಟ್ಟಿನಲ್ಲಿ ಕಿಂಗ್ ಗೇಲ್ ಅತ್ಯುತ್ತಮ ಫಾರ್ಮ್ ಕಾಪಾಡಿಕೊಳ್ಳಬೇಕಾಗುತ್ತದೆ. ಐಪಿಎಲ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಮೂಲಕ ಅತಿ ಹೆಚ್ಚಿನ ಜನಪ್ರಿಯತೆ ಹಾಗೂ ಯಶಸ್ಸನ್ನು ಗಳಿಸಿರುವ ಕ್ರಿಸ್ ಗೇಲ್‌ ರನ್ನು ಕೈಬಿಟ್ಟಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಆದರೆ ಬ್ಯಾಟಿಂಗ್ ದೈತ್ಯ ಎಂದರೇ ಯೂನಿವರ್ಸಲ್  ಬಾಸ್ ದಿ ಗ್ರೇಟ್ ಗೇಲ್ ಎನ್ನುತ್ತಾರೆ ಈಗಲೂ ಅಭಿಮಾನಿಗಳು.

Find Out More:

Related Articles: