ಬೆಂಗಳೂರು ಪೊಲೀಸರಿಗೂ ಬಂತು ಕೊರೋನಾ ವೈರಸ್: ಸೋಂಕು ತಗುಲಿದ ಪೊಲೀಸರ ಸಂಖ್ಯೆ ಎಷ್ಟಿದೆ ಗೊತ್ತಾ?
ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು ಹಲವಾರು ಜನರು ಈ ವೈರಸ್ ಗೆ ಬಲಿಯಾಗಿದ್ದಾರೆ, ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರತಿನಿತ್ಯಲೂ ಸಹ ಕಂಟೈನ್ ಮೆಂಟ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಕೊರೋನಾ ಮಾರಿಗೆ ಹೆದರಿ ಅಸಂಖ್ಯಾತ ಮಂದಿ ಬೆಂಗಳೂರನ್ನು ಬಿಟ್ಟು ತಮ್ಮ ಊರುಗಳತ್ತ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕೊರೋನಾ ದಿಂದ ಜನರನ್ನು ರಕ್ಷಿಸುತ್ತಿರುವ ಸಾಕಷ್ಟು ಜನ ಪೊಲೀಸರಿಗೂ ಕೊರೋನಾ ಮಾರಿ ವಕ್ಕರಿಸಿದೆ.
ಹೌದು ಬೆಂಗಳೂರು ನಗರದಲ್ಲಿ ಪೊಲೀಸರಲ್ಲಿ ದಿನೇದಿನೇ ಆತಂಕ ಹೆಚ್ಚಾಗುತ್ತಿದೆ. ಇದುವರೆಗೂ ನಗರದಲ್ಲಿ 347 ಜನ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಆಗಿದ್ದು 750ಕ್ಕೂ ಅಧಿಕ ಪೊಲೀಸರು ಕ್ವಾರೆಂಟೈನ್ ಆಗಿದ್ದಾರೆ. ನಗರದಲ್ಲಿ ಇದುವರೆಗೂ 65 ಪೊಲೀಸ್ ಸ್ಟೇಷನ್ಗಳು ಸೀಲ್ ಡೌನ್ ಲಿಸ್ಟ್ಗೆ ಸೇರಿವೆ.
ನಿನ್ನೆ ಒಂದೇ ದಿನ ನಗರದಲ್ಲಿ 55 ಪೊಲೀಸರಲ್ಲಿ ಸೊಂಕು ಕಾಣಿಸಿಕೊಂಡಿದ್ದು ಒಂದೇ ದಿನ 10ಕ್ಕೂ ಹೆಚ್ಚು ಸ್ಟೇಷನ್ಗಳು ಸೀಲ್ ಡೌನ್ ಆಗಿದೆ. ಇಷ್ಟೆಲ್ಲ ಆಗುತ್ತಿದ್ದರೂ ಪೊಲೀಸರು ಭಯದಲ್ಲಿಯೇ ಕೆಲಸ ಮಾಡೋಕೆ ಮುಂದಾಗಿದ್ದಾರೆ. 65 ಪೊಲೀಸ್ ಸ್ಟೇಷನ್ಗಳ ಪೈಕಿ ಈಗಾಗಲೇ 30ಕ್ಕೂ ಹೆಚ್ಚು ಸ್ಟೇಷನ್ಗಳು ಸೀಲ್ ಡೌನ್ ತೆರವು ಮಾಡಿವೆ. 35 ಪೊಲೀಸ್ ಸ್ಟೇಷನ್ಗಳು ಮಾತ್ರ ಸೀಲ್ ಡೌನ್ನಲ್ಲಿಯೇ ಇದೆ.
ಇಲ್ಲಿಯವರೆಗೆ 347 ಜನ ಪೊಲೀಸರಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡಿದೆ. ಅವರ ಪ್ರೈಮರಿ ಕಾಂಟ್ಯಾಕ್ಟ್ನಲ್ಲಿ, 350 ಜನರಿದ್ದಾರೆ. ಸೆಕೆಂಡರಿ ಕಾಂಟ್ಯಾಕ್ಟ್ನಲ್ಲಿ 400 ಜನರಿದ್ದಾರೆ. ಇವರೆಲ್ಲರೂ ಸದ್ಯ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಬೆಡ್ಗಳು ಭರ್ತಿ, ಹೊಸ ರೋಗಿಗಳಿಗೆ ಇಲ್ಲ ಸ್ಥಳ: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಅಸಹಾಯಕತೆ
ಬೆಂಗಳೂರಲ್ಲಿ ಇವತ್ತು ಸೋಮವಾರ ಸಹ ಮೂರು ಪೊಲೀಸ್ ಠಾಣೆಗಳು ಸೀಲ್ ಡೌನ್ ಅಗಿವೆ. ಜೀವನ್ ಭೀಮಾನಗರ, ಆರ್.ಟಿ. ನಗರ ಹಾಗೂ ರಾಜರಾಜೇಶ್ಚರಿ ನಗರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮೂರು ಪೊಲೀಸ್ ಠಾಣೆಗಳಲ್ಲಿಯೂ ಒಬ್ಬೊಬ್ಬ ಪೊಲೀಸ್ ಪೇದೆಗೆ ಪಾಸಿಟಿವ್ ಆಗಿದ್ದು, ಅವರ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿ ಇರೋರನ್ನ ಪತ್ತೆ ಮಾಡ್ತಾ ಇದ್ದಾರೆ.
ಕಳೆದ 10 ದಿನಗಳಿಂದ ಪೊಲೀಸರಲ್ಲಿ ಕೊರೊನಾ ಸೊಂಕು ಹೆಚ್ಚಾಗುತ್ತಿದ್ದು ಈಗ ಎಲ್ಲಾ ಪೊಲೀಸ್ ಸಿಬ್ಬಂದಿ ತಪಾಸಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಇದೇ ತರಹ ದಿನೇ ದಿನೇ ಖಾಕಿಗಳಲ್ಲಿ ಕೊರೋನಾ ಜಾಸ್ತಿ ಆದ್ರೆ ಅವರು ಹೇಗೆ ಕರ್ತವ್ಯ ನಿಭಾಯಿಸಲು ಸಾಧ್ಯ ಅನ್ನೋದೇ ಈಗ ಪ್ರಶ್ನೆಯಾಗಿದೆ.