ಕೊರೊನಾ: ಅಚ್ಚರಿ ಮೂಡಿಸಿದ ಕೇರಳ

frame ಕೊರೊನಾ: ಅಚ್ಚರಿ ಮೂಡಿಸಿದ ಕೇರಳ

Soma shekhar

ಕೊಚ್ಚಿ: ಇದೀಗ ಇಡೀ ದೇಶವೇ ಕೊರೊನಾದಿಂದ ಬೆಚ್ಚಿ ಬಿದ್ದಿದೆ. ಜನರು ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗುತ್ತಿದ್ದಾರೆ. ಎಲ್ಲ ರಾಜ್ಯಗಳು ಕೊರೊನಾದಿಂದ ಮುಕ್ತಿ ಹೊಂದಲು ಇನ್ನಿಲ್ಲದೇ ಶ್ರಮಿಸುತ್ತಿವೆ. ಆದರೆ ಕೇರಳ ಮಾತ್ರ ಕೊರೊನಾ ಸೋಂಕನ್ನು ಅತ್ಯಂತ ಗಟ್ಟಿಯಾಗಿ ಎದುರಿಸುತ್ತಿದೆ. ನುರಾರು ಜನರು ಇದೀಗ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಇದು ಆಗಿದ್ದು ಹೇಗೆ ಅಂತೀರಾ?

 

ಹೌದು ಕೇರಳ ಸುಶಿಕ್ಷಿತರ ನಾಡು. ಇಲ್ಲಿನ ಜನ ಅರ್ಥ ಮಾಡಿಕೊಳ್ಳುವ ಜನ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನ, ಹಾಗೆ ಸರ್ಕಾರವೂ ಕೂಡ ಜನರ ಆರೋಗ್ಯದ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತದೆ. ಈ ಮೊದಲು ನಿಫಾ ವೈರಸ್ ನಿಂದ ಪಾಠ ಕಲಿತ ಕೇರಳ ಇದೀಗ ಕೊರೊನಾ ಸೋಂಕನ್ನು ಅತ್ಯಂತ ದಿಟ್ಟವಾಗಿ ಎದುರಿಸಿ ಎಲ್ಲರಿಗೂ ಮಾದರಿ ಆಗಿದೆ. 

 

ಸದ್ಯ ಅಲ್ಲಿ ಕೇವಲ 30 ಕೊರೊನಾ ವೈರಸ್‌ ಸೋಂಕಿತರು ಮಾತ್ರವೇ ಇದ್ದು, ಇದರಿಂದ ಇಡೀ ದೇಶಕ್ಕೆ ಅವರು ಮಾದರಿ ಆಗಿದ್ದಾರೆ. ಅಲ್ಲದೇ ಇದೀಗ ಕೇರಳದಲ್ಲಿ ಕೇವಲ 30 ಜನ ಸೋಂಕಿತರು  ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೆ ಪ್ರತಿಯಾಗಿ ಈ ವರೆಗೆ 469 ಮಂದಿ ಗುಣಮುಖರಾಗಿದ್ದಾರೆ. ಇದು ನಿಜಕ್ಕೂ ಪವಾಡವೇ ಸರಿ ಎನ್ನಬಹುದು.  ಒಟ್ಟಿನಲ್ಲಿ ಕೇರಳ ಸರ್ಕಾರವು ಇಡೀ ದೇಶಕ್ಕೆ ಹೇಗೆ ಕೊರನಾ ವನ್ನು ಎದುರಿಸುವುದು ಎನ್ನುವುದನ್ನು ಹೇಳಿ ಕೊಡುತ್ತಿದೆ. ಅಲ್ಲದೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಅದು ಪ್ರಯೋಗ ಮಾಡಿದೆ.

 

ಹೀಗಾಗಿ ಇದೀಗ ಕೇರಳದಲ್ಲಿ ಸೋಂಕಿನಿಂದಾಗಿ ಕೇವಲ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 30 ಮಂದಿಯಷ್ಟೇ ಆಸ್ಪತ್ರೆಯಲ್ಲಿದ್ದಾರೆ.  ಇನ್ನೊಂದು ಮುಖ್ಯವಾದ ವಿಷಯ ಎಂದರೆ, ಕೇರಳದಲ್ಲಿ ಕಳೆದೆ 24 ಗಂಟೆಗಳಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳೂ ಕಂಡು ಬಂದಿಲ್ಲ. ಒಟ್ಟಿನಲ್ಲಿ ಕೇರಳ ಕೊರೊನಾ ಕ್ರಿಟಿಕಲ್ ಪರಿಸ್ಥಿತಿಯನ್ನು ಎದರಿಸುತ್ತಿರುವ ರೀತಿ ನಿಜಕ್ಕೂ ಅದ್ಬೂತ ಎನ್ನಬಹುದು. ಇದನ್ನೇ ದೇಶದ ಇತರ ರಾಜ್ಯಗಳು ಇದೀಗ ಪಾಲಿಸಬೇಕಾಗಿದೆ.  ಇದರಿಂದ ಕೇರಳದ ಸಿಎಂಗೆ ಎಲ್ಲ ಕಡೆಯಿಂದ ಅಭಿನಂದನೆ ಹರಿದು ಬರುತ್ತಿದೆ


 

Find Out More:

Related Articles:

Unable to Load More